ನವದೆಹಲಿ:
ಸೋಮವಾರ ರಾತ್ರಿ ಬಲೂಚಿಸ್ತಾನದ ಪಂಜ್ಗುರ್ ಜಿಲ್ಲೆಯಲ್ಲಿ ವಾಹನವನ್ನು ಗುರಿಯಾಗಿಸಿಕೊಂಡು ನಡೆಸಿದ ನೆಲಬಾಂಬ್ ಸ್ಫೋಟದಲ್ಲಿ ಯೂನಿಯನ್ ಕೌನ್ಸಿಲ್ (ಯುಸಿ) ಅಧ್ಯಕ್ಷ ಸೇರಿದಂತೆ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಡಾನ್ ವರದಿ ಮಾಡಿದೆ.
ಮೃತರನ್ನು ಮೊಹಮ್ಮದ್ ಯಾಕೂಬ್, ಇಬ್ರಾಹಿಂ, ವಾಜಿದ್, ಫಿದಾ ಹುಸೇನ್, ಸರ್ಫರಾಜ್ ಮತ್ತು ಹೈದರ್ ಎಂದು ಗುರುತಿಸಲಾಗಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಮೃತರಲ್ಲಿ ನಾಲ್ವರ ಗುರುತುಗಳನ್ನು ಅವರ ಸಂಬಂಧಿಕರು ಆಸ್ಪತ್ರೆಯಲ್ಲಿ ಖಚಿತಪಡಿಸಿದ್ದಾರೆ ಇನ್ನುಳಿದವರ ಗುರುತನ್ನು ಪತ್ತೆ ಮಾಡಬೇಕಿದೆ ಎಂದು ಅವರು ಹೇಳಿದರು. ಕಾನೂನುಬಾಹಿರ ಬಲೂಚ್ ಲಿಬರೇಶನ್ ಫ್ರಂಟ್ ಕೈವಾಡವಿದೆ ಎಂದು ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.