ನಾನು ಹಿಜಾಬ್ ಧರಿಸಿ ವಿಧಾನಸಭೆಗೆ ಬರಬಹುದಾದರೆ, ಅವರು ಕಾಲೇಜಿಗೇಕೆ ಹೋಗಬಾರದು?: ಶಾಸಕಿ ಕನೀಝ್ ಫಾತಿಮಾ

ಬೆಂಗಳೂರು:

ಹಿಜಾಬ್ ಧರಿಸಿ ನನಗೆ ವಿಧಾನಸಭೆ ಪ್ರವೇಶಿಸಲು ಸಾಧ್ಯವಾದರೆ, ಈ ಹುಡುಗಿಯರಿಗೆ ಶಾಲೆ ಅಥವಾ ಕಾಲೇಜಿನಲ್ಲಿ ಏಕೆ ಅವಕಾಶ ನಿರಾಕರಿಸಲಾಗಿದೆ ಎಂದು ಕಲಬುರಗಿ ಉತ್ತರ ವಿಧಾನಸಭೆ ಕ್ಷೇತ್ರ ಕನೀಝ್ ಫಾತಿಮಾ ಪ್ರಶ್ನಿಸಿದ್ದಾರೆ.

             ಉಡುಪಿ ಕುಂದಾಪುರ ಸೇರಿದಂತೆ ಕೆಲ ಸರಕಾರಿ ವಿದ್ಯಾಸಂಸ್ಥೆಗಳಲ್ಲಿ ಸಂಘಪರಿವಾರ ಪ್ರೇರಿತ ʼಹಿಜಾಬ್‌- ಕೇಸರಿ ಶಾಲುʼ ಪ್ರಕರಣಕ್ಕೆ ಸಂಬಂಧಿಸಿ ಅವರು ಟ್ವೀಟ್‌ ಮಾಡಿದ್ದಾರೆ. ಹಿಜಾಬ್‌ ಧರಿಸಿದ್ದಕ್ಕೆ ವಿದ್ಯಾರ್ಥಿನಿಯರನ್ನು ಗೇಟ್‌ ಹೊರಗಡೆ ನಿಲ್ಲಿಸಿದ ವೀಡಿಯೋವನ್ನೂ ಅವರು ಟ್ವೀಟ್‌ ಮಾಡಿದ್ದಾರೆ.

ಶುಕ್ರವಾರ ತಮ್ಮ ಟ್ವೀಟ್‌ ನಲ್ಲಿ ಅವರು, “ಹಿಜಾಬ್ ಧರಿಸಿ ನನಗೆ ವಿಧಾನಸಭೆ ಪ್ರವೇಶಿಸಲು ಸಾಧ್ಯವಾದರೆ, ಈ ಹುಡುಗಿಯರಿಗೆ ಶಾಲೆ ಅಥವಾ ಕಾಲೇಜಿನಲ್ಲಿ ಏಕೆ ಅವಕಾಶ ನಿರಾಕರಿಸಲಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಏಕಾಏಕಿ ಕೇಸರೀಕರಣಗೊಳಿಸುವ ಪ್ರಯತ್ನ ಏಕೆ ನಡೆಯುತ್ತಿದೆ? ಹಿಜಾಬ್ ನಮ್ಮ ಹಕ್ಕು. ಅದಕ್ಕೆ ಬೇಕಾಗಿ ಪ್ರಾಣ ಬೇಕಾದರೂ ಕೊಡಬಹುದು ಆದರೆ ಹಿಜಾಬ್ ಅನ್ನು ಬಿಟ್ಟು ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link