ಕಾವೇರಿ ವಿವಾದ : ಅಗತ್ಯ ಬಿದ್ದರೆ ಸುಪ್ರೀಂಗೆ ಮನವಿ : ತಮಿಳುನಾಡು

ಚೆನ್ನೈ:

   ಕಾವೇರಿ ವಿವಾದದ ಬಗ್ಗೆ ತಮಿಳುನಾಡಿನಲ್ಲಿ ಸರ್ವಪಕ್ಷ ಸಭೆ ನಡೆದಿದ್ದು, ಸಿಡಬ್ಲ್ಯುಆರ್ ಎ ಸೂಚನೆಯ ಪ್ರಕಾರ ನೀರು ಹರಿಸಲು ಮುಂದಾಗದ ಕರ್ನಾಟಕದ ನಡೆಯ ಬಗ್ಗೆ ಖಂಡನೆ ವ್ಯಕ್ತವಾಗಿದೆ.

   ಕರ್ನಾಟಕದ ನಡೆಯ ವಿಷಯವಾಗಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು ಸಭೆಯಲ್ಲಿ ತಮಿಳುನಾಡು ಸಿಎಂ ಎಂಕೆ ಸ್ಟ್ಯಾಲಿನ್ ಹೇಳಿದ್ದು, ಅಗತ್ಯವಿದ್ದಲ್ಲಿ ಸುಪ್ರೀಂ ಕೋರ್ಟ್ ಮೊರೆ ಹೋಗುವುದಕ್ಕೂ ಸಭೆಯಲ್ಲಿ ತೀರ್ಮಾನಿಸಲಾಗಿದೆ.

   “ಕರ್ನಾಟಕ ಸಿಡಬ್ಲ್ಯುಆರ್ ಎ ಸೂಚನೆ ಅನುಸರಿಸಲು ವಿಫಲವಾದರೆ, ತಮಿಳುನಾಡಿಗೆ ನ್ಯಾಯ ಸಿಗುವುದನ್ನು ಖಚಿತಪಡಿಸಿಕೊಳ್ಳಲು ಮತ್ತೊಮ್ಮೆ ಸುಪ್ರೀಂ ಕೋರ್ಟ್ ಮೊರೆ ಹೋಗಲು ನಾವು ಸಿದ್ಧರಿದ್ದೇವೆ” ಎಂದು ಸಿಎಂ ಸ್ಟಾಲಿನ್ ದೃಢಪಡಿಸಿದ್ದಾರೆ.

   ಕಾವೇರಿ ನೀರು ನಿಯಂತ್ರಣ ಸಮಿತಿಯ ನಿರ್ದೇಶನದಂತೆ ಪ್ರತಿದಿನ ಒಂದು ಟಿಎಂಸಿ ಅಡಿ ನೀರು ಬಿಡಲು ನಿರಾಕರಿಸುತ್ತಿರುವ ಕರ್ನಾಟಕ ಸರ್ಕಾರವನ್ನು ಸಭೆಯಲ್ಲಿ ಅಂಗೀಕರಿಸಿದ ನಿರ್ಣಯ ತೀವ್ರವಾಗಿ ಖಂಡಿಸಿದೆ.

   ಕಾವೇರಿ ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟ್‌ನ ಆದೇಶಗಳನ್ನು ಪಾಲಿಸುವಂತೆ ಕರ್ನಾಟಕಕ್ಕೆ ನೀರು ಬಿಡುವಂತೆ ನಿರ್ದೇಶನ ನೀಡಬೇಕೆಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ನಿರ್ಣಯದಲ್ಲಿ ಒತ್ತಾಯಿಸಲಾಗಿದೆ.

    ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಸ್ಟಾಲಿನ್, ಈ ವರ್ಷ ಸಾಕಷ್ಟು ಮಳೆಯಾಗಿದ್ದರೂ ಕರ್ನಾಟಕ ಸಿಡಬ್ಲ್ಯೂಆರ್‌ಎ ಶಿಫಾರಸುಗಳನ್ನು ಪಾಲಿಸಲು ನಿರಾಕರಿಸಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.

  “ಕಳೆದ ವರ್ಷ, ಕರ್ನಾಟಕ, ಆದೇಶಗಳನ್ನು ಅನುಸರಿಸದ ಕಾರಣ, ಕಾವೇರಿ ನೀರಿನ ನಮ್ಮ ಹಕ್ಕಿನ ಪಾಲನ್ನು ಪಡೆಯಲು ನಾವು ಸುಪ್ರೀಂ ಕೋರ್ಟ್ ಸಂಪರ್ಕಿಸುವ ಪರಿಸ್ಥಿತಿ ನಿರ್ಮಾಣವಾಯಿತು.” ಎಂದು ಸ್ಟಾಲಿನ್ ಟೀಕಿಸಿದ್ದಾರೆ.

  ಸ್ಥಳೀಯ ನೀರಿನ ಕೊರತೆಯ ಕಳವಳವನ್ನು ಉಲ್ಲೇಖಿಸಿ ಕಾವೇರಿ ನೀರು ಬಿಡುಗಡೆಯನ್ನು ನಿರ್ಬಂಧಿಸುವ ಕರ್ನಾಟಕದ ಇತ್ತೀಚಿನ ನಿರ್ಧಾರದಿಂದ ಉಭಯ ರಾಜ್ಯಗಳ ನಡುವಿನ ಉದ್ವಿಗ್ನತೆಗಳು ಹೆಚ್ಚಿವೆ. ಕರ್ನಾಟಕದ ಈ ನಡೆ ತಮಿಳುನಾಡಿನ ಕೃಷಿ ವಲಯದ ಮೇಲೆ ವಿಶೇಷವಾಗಿ ಪರಿಣಾಮ ಬೀರುವುದರೊಂದಿಗೆ, ಸಮಾನ ನೀರಿನ ಹಂಚಿಕೆಯ ಕುರಿತು ಎರಡು ರಾಜ್ಯಗಳ ನಡುವಿನ ದೀರ್ಘಕಾಲದ ಅಸಮಾಧಾನವನ್ನು ಉಲ್ಬಣಗೊಳಿಸಿದೆ.

  ತಮಿಳುನಾಡಿನಲ್ಲಿ ಸರ್ವಪಕ್ಷ ಸಭೆ ನಡೆಯುವುದಕ್ಕೂ ಹಿಂದಿನ ದಿನ, ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಂವಾದಕ್ಕೆ ಮುಕ್ತವಾಗಿರುವುದಾಗಿ ಹೇಳಿದ್ದರು

Recent Articles

spot_img

Related Stories

Share via
Copy link
Powered by Social Snap