ADGP ಬಾಯ್ಬಿಟ್ಟರೆ ಎರಡೂ ಪಕ್ಷದವರೂ ಒಳಗೆ ಹೋಗ್ತಾರೆ; PSI ಅಕ್ರಮದ ಬಗ್ಗೆ ಹೊಸ ಬಾಂಬ್ ಸಿಡಿಸಿದ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್

ಬೆಂಗಳೂರು:

 ಪಿ ಎಸ್ ಐ ಹುದ್ದೆ ನೇಮಕಾತಿ ಅಕ್ರಮದ ಬಗ್ಗೆ ಎಡಿಜಿಪಿ ಬಾಯ್ಬಿಟ್ಟರೆ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷದವರೂ ಒಳಗೆ ಹೋಗ್ತಾರೆ ಎಂದು ನಿವೃತ್ತ ಪೊಲೀಸ್ ಅಧಿಕಾರಿ, ಆಮ್ ಆದ್ಮಿಪಕ್ಷದ ಭಾಸ್ಕರ್ ರಾವ್ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಗರಣದಲ್ಲಿ ಪ್ರಭಾವಿ ಸಚಿವರ ಹೆಸರು ಕೇಳಿಬರುತ್ತಿದೆ.

ರಾಜ್ಯಕ್ಕೆ ಮತ್ತೊಂದು ಬಿಗ್‌ ಶಾಕ್‌ : ಒಮಿಕ್ರಾನ್‌ನ BA.4, BA.5 ಉಪತಳಿ ಪತ್ತೆ

ಯಾರೊಬ್ಬರೂ ಧ್ವನಿ ಎತ್ತುತ್ತಿಲ್ಲ. ಎಡಿಜಿಪಿ ಬಾಯ್ಬಿಟ್ಟರೆ ಎರಡೂ ಪಕ್ಷದವರೂ ಒಳಗೆ ಹೋಗುತ್ತಾರೆ ಎಂದರು.ತನಿಖಾ ಸಂಸ್ಥೆಗಳು ಸರ್ಕಾರದ ಕೆಳಗೆ ಬರುತ್ತದೆ. ಎಡಿಜಿಪಿ ಬಾಯ್ಬಿಡಲು ಬಿಡುವುದಿಲ್ಲ. ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಸರ್ಕಾರ ವೈಫಲ್ಯ ತೋರಿಸಿದೆ. ಅದೇ ರೀತಿ ಪಿ ಎಸ್ ಐ ಹುದ್ದೆ ಅಕ್ರಮ ಪ್ರಕರಣವನ್ನು ಮಾಡಬೇಡಿ. ಹಗರಣದಿಂದ 50 ಸಾವಿರ ಕುಟುಂಬಗಳಿಗೆ ಅನ್ಯಾಯವಾಗಿದೆ ನ್ಯಾಯಾಲಯದ ಸಮ್ಮುಖದಲ್ಲಿ ತನಿಖೆಯಾಗಲಿ ಎಂದು ಹೇಳಿದರು.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link