ಸಾರ್ವಜನಿಕ ಪ್ರದೇಶಗಳಲ್ಲಿ ಬುರ್ಕಾ ತೆಗೆದರೆ ಅಲ್ಲೇ ಬಂದು ಹೊಡೆಯುತ್ತೇವೆ; ಮುಸ್ಲಿಂ ಡಿಫೆನ್ಸ್​ ಫೋರ್ಸ್​ ವಾಟ್ಸ್​ಆಯಪ್​ ಗ್ರೂಪ್​​ನಲ್ಲಿ ಬೆದರಿಕೆ ಸಂದೇಶ

     ಈ ಗುಂಪಿನಲ್ಲಿ ಕನ್ನಡದಲ್ಲಿಯೇ ಸಂದೇಶಗಳನ್ನು ಮಾಡಲಾಗಿದೆ. ಕೆಲವು ಮಾಲ್​​ಗಳ ಬೇಸ್​ಮೆಂಟ್​ಗಳಲ್ಲಿ ಬುರ್ಕಾ ಧರಿಸಿಕೊಂಡು ನಿಂತು ಅನುಚಿತವಾಗಿ ವರ್ತನೆ ಮಾಡುವ ಹೆಣ್ಣುಮಕ್ಕಳು ಕಂಡುಬರುತ್ತಿದ್ದಾರೆ. ಅವರಿಗೆ ನಮ್ಮ ಕಾರ್ಯಕರ್ತರು ಅವರಿಗೆ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ ಎಂದೂ ಈ ವಾಟ್ಸ್​ಆಯಪ್ ಗ್ರೂಪ್​ ಹೇಳಿಕೊಂಡಿದೆ.

    ಮುಸ್ಲಿಂ ಮಹಿಳೆಯರಿಗೆ ಬೆದರಿಕೆ ಒಡ್ಡುತ್ತಿದ್ದ ಮುಸ್ಲಿಂ ಡಿಫೆನ್ಸ್​ ಫೋರ್ಸ್​ ಎಂಬ ವಾಟ್ಸ್​ಆಯಪ್​ ಗ್ರೂಪ್​​ ಮೇಲೆ ಪೊಲೀಸರು ಕಣ್ಣಿಟ್ಟಿದ್ದಾರೆ. ಇದು ಮುಸ್ಲಿಂ ಸಮುದಾಯದ ಗುಂಪೇ ಆಗಿದ್ದು, ತಮ್ಮದೇ ಸಮುದಾಯದ ಮಹಿಳೆಯರಿಗೆ ಬೆದರಿಕೆ ಒಡ್ಡುವ, ಎಚ್ಚರಿಕೆ ನೀಡುವ ಸಂದೇಶಗಳು ಈ ಗ್ರೂಪ್​​ನಲ್ಲಿ ಹರಿದಾಡಿವೆ ಎಂದು ಹೇಳಲಾಗಿದೆ. ಅಂದರೆ ಸಾರ್ವಜನಿಕ ಸ್ಥಳಗಳಲ್ಲಿ ಬುರ್ಕಾ, ಹಿಜಾಬ್ ತೆಗೆಯದರೆ ಅಂಥವರ ವಿರುದ್ಧ ನಾವು ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂಬ ಮೆಸೇಜ್​​ಗಳು ಗುಂಪಿನಲ್ಲಿವೆ ಎನ್ನಲಾಗಿದೆ.

‘ದಂಗಲ್​’ ದಾಖಲೆಮಾಡಿದ ಯಶ್​​; ಅತಿ ಹೆಚ್ಚು ಹಣ ಗಳಿಸಿದ​ 2ನೇ ಸಿನಿಮಾ ‘ಕೆಜಿಎಫ್​ 2’

   ಅಂದಹಾಗೇ, ಈ ಗುಂಪಿನಲ್ಲಿ ಕನ್ನಡದಲ್ಲಿಯೇ ಸಂದೇಶಗಳನ್ನು ಮಾಡಲಾಗಿದೆ. ಕೆಲವು ಮಾಲ್​​ಗಳ ಬೇಸ್​ಮೆಂಟ್​ಗಳಲ್ಲಿ ಬುರ್ಕಾ ಧರಿಸಿಕೊಂಡು ನಿಂತು ಅನುಚಿತವಾಗಿ ವರ್ತನೆ ಮಾಡುವ ಹೆಣ್ಣುಮಕ್ಕಳು ಕಂಡುಬರುತ್ತಿದ್ದಾರೆ. ಅವರಿಗೆ ನಮ್ಮ ಕಾರ್ಯಕರ್ತರು ಅವರಿಗೆ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

ಇನ್ನೊಮ್ಮೆ ಇಂಥ ದೃಶ್ಯ ಕಂಡುಬಂದರೆ ಅಂಥವರಿಗೆ ಹೊಡೆಯುತ್ತೇವೆ ಎಂದು ಈ ಮುಸ್ಲಿಂ ಡಿಫೆನ್ಸ್​ ಫೋರ್ಸ್ ವಾಟ್ಸ್​ಆಯಪ್​ ಗ್ರೂಪ್​​ನಲ್ಲಿ ಹೇಳಲಾಗಿದೆ. ಅಷ್ಟೇ ಅಲ್ಲ, ನಿಮ್ಮ ಮಕ್ಕಳು ಎಲ್ಲಿಗೆ ಹೋಗುತ್ತಾರೆ, ಏನು ಮಾಡುತ್ತಾರೆ ಎಂಬುದನ್ನು ಗಮನಿಸಿ ಎಂದು ಪಾಲಕರಿಗೂ ತಿಳಿಸಲಾಗಿದೆ. ಇವರು ಮಂಗಳೂರಿನ ಮುಸ್ಲಿಂ ಹೆಣ್ಣುಮಕ್ಕಳ ಮೇಲೆ ಕಣ್ಣಿಟ್ಟಿದ್ದಾಗಿಯೂ ಸಂದೇಶದಲ್ಲಿ ತಿಳಿಸಿದ್ದಾರೆ.

ಪಿಎಸ್‌ಐ ನೇಮಕಾತಿ ಹಗರಣ: ಪ್ರಿಯಾಂಕ್ ಖರ್ಗೆಗೆ ಸಿಐಡಿಯಿಂದ ಮೂರನೇ ನೋಟಿಸ್ ಜಾರಿ

ಈ ಬಗ್ಗೆ ತಮ್ಮ ಗಮನಕ್ಕೆ ಬಂದಿರುವುದಾಗಿ ಮಂಗಳೂರು ಪೊಲೀಸ್ ಆಯುಕ್ತ ಶಶಿ ಕುಮಾರ್​ ತಿಳಿಸಿದ್ದು, ಸೋಷಿಯಲ್​ ಮೀಡಿಯಾಗಳಲ್ಲಿ ಹಾಕಲಾಗುತ್ತಿರುವ ಬೆದರಿಕೆಯುಕ್ತ ಮೆಸೇಜ್​​ಗಳ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಹಾಗೇ, ಪಾಲಕರ ಬಳಿಯೂ ಎಚ್ಚರಿಕೆಯಿಂದ ಇರುವಂತೆ ಹೇಳಿದ್ದಾರೆ. ನಿಮ್ಮ ಮಕ್ಕಳಿಗೆ ಸಾರ್ವಜನಿಕ ಪ್ರದೇಶಗಳಲ್ಲಿ ಸೆಲ್ಫೀ ತೆಗೆಯದಂತೆ ಹೇಳಿ ಎಂಬ ಸಲಹೆಯನ್ನೂ ನೀಡಿದ್ದಾರೆ.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap