ಆದೇಶ ಹಿಂಪಡೆಯದಿದ್ದರೆ ಸಚಿವರ ಮನೆಮುಂದೆ ಉಪವಾಸ

ತುಮಕೂರು:

ಟಿಸಿ ನೀಡಿಕೆ ಆದೇಶ ಅವೈಜ್ಞಾನಿಕ, ಖಾಸಗಿ ಶಾಲೆ ಹಕ್ಕು ಕಸಿಯುವ ಹುನ್ನಾರ ಆರೋಪ

             ಖಾಸಗಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ವರ್ಗಾವಣೆ ಪತ್ರವನ್ನು ಆಡಳಿತ ಮಂಡಳಿಯ ಅನುಮತಿ ಇಲ್ಲದೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ನೀಡಬಹುದು ಎಂಬ ಸರಕಾರದ ಸುತ್ತೊಲೆಯನ್ನು ಡಿ.15ರೊಳಗೆ ಹಿಂಪಡೆಯಬೇಕು. ಇಲ್ಲದಿದ್ದಲ್ಲಿ ಶಿಕ್ಷಣ ಸಚಿವರ ಮನೆಯ ಮುಂದೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಮಾನ್ಯತೆ ಪಡೆದ ಅನುದಾರಹಿತ ಖಾಸಗಿ ಶಾಲೆಗಳ ಸಂಘ(ರೂಪ್ಸಾ) ಅಧ್ಯಕ್ಷ ಹಾ¯ನೂರು ಎಸ್. ಲೇಪಾಕ್ಷ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ 25-11-2021ರಂದು ಹೊರಡಿಸಿರುವ ಸುತ್ತೋಲೆ ನಿಜಕ್ಕೂ ಖಾಸಗಿ ಶಾಲೆಗಳ ಹಕ್ಕುಗಳನ್ನು ಕಸಿಯುವ ಹುನ್ನಾರವಾಗಿದೆ. ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶಗಳಿಗೆ ವಿರುದ್ಧವಾಗಿದೆ. ಕೋವಿಡ್ ಸಂದರ್ಭದಲ್ಲಿ ನ್ಯಾಯಾಲಯವೇ ಶೇ15ರಷ್ಟು ಶುಲ್ಕ ಕಡಿತ ಮಾಡಿ ಪಡೆಯುವಂತೆ ಆದೇಶ ನೀಡಿದೆ.

ಆದರೆ ಸರಕಾರ ಈ ಆದೇಶವನ್ನು ಬದಿಗೊತ್ತಿ ಶುಲ್ಕ ಪಾವತಿಸದಿದ್ದರೂ ಟಿಸಿ ಕೊಡಬಹುದೆಂದು ಆದೇಶಿಸಿರುವುದು ನ್ಯಾಯಾಲಯದ ತೀರ್ಪಿನ ಉಲ್ಲಂಘನೆಯಾಗಿದೆ. ಖಾಸಗಿ ಶಾಲೆಗಳಲ್ಲಿ ಮಕ್ಕಳ ಶುಲ್ಕ ಕಟ್ಟಿದ್ದರೆ ಆಡಳಿತ ಮಂಡಳಿ ಪೋಷಕರ ವಿರುದ್ದ ಕಾನೂನು ಕ್ರಮ ಜರುಗಿಸಬಹುದು ಎಂದುಕೋರ್ಟ್ ಹೇಳಿದರೂ ಖಾಸಗಿ ಶಾಲೆಗಳು ಅಂತಹ ಅಮಾನವೀಯ ಕಾರ್ಯಕ್ಕೆ ಕೈ ಹಾಕಿಲ್ಲ. ಆದರೂ ಸರಕಾರ ಆರ್.ಟಿ.ಇ ಅಕ್ಟ್ 1983ರ ಕಲಂ 106/2ಬಿಯನ್ನು ತಪ್ಪಾಗಿ ಬಿಂಬಿಸಿ, ವಿದ್ಯಾರ್ಥಿಗಳ ಪೋಷಕರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಪೋಷಕರು ಬಾಕಿ ಉಳಿಸಿಕೊಂಡಿರುವ ಶುಲ್ಕ ಪಾವತಿಸಿದರೆ ಅವರ ವರ್ಗಾವಣೆ ಪತ್ರ ನೀಡಲು ನಮ್ಮ ಅಭ್ಯಂತರವಿಲ್ಲ. ಆದ್ದರಿಂದ ಡಿ. 15ರೊಳಗೆ ಸುತ್ತೊಲೆಯನ್ನು ಶಿಕ್ಷಣ ಇಲಾಖೆ ವಾಪಸ್ ಪಡೆಯದಿದ್ದರೆ, ಶಿಕ್ಷಣ ಸಚಿವರ ಮನೆ ಮುಂದೆ ಎಲ್ಲಾ ಖಾಸಗಿ ಶಾಲೆಗಳ ಅಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ರೂಪ್ಸಾ ತುಮಕೂರು ಜಿಲ್ಲಾ ಮುಖಂಡರಾದ ಎನ್.ಬಿ.ಪ್ರದೀಪ್‍ಕುಮಾರ್, ಶ್ರೀನಿವಾಸ್, ಪ್ರಕಾಶ್‍ಕುಮಾರ್, ಪ್ರದೀಪಕುಮಾರ್, ಚಂದ್ರಶೇಖರ್, ನಯಾಜ್ ಅಹಮದ್, ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ಸರಕಾರದಿಂದ ಮಲತಾಯಿ ಧೋರಣೆ, ಅನಗತ್ಯ ಕಿರುಕುಳ:
ಸರಕಾರ ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ವಿಷಯವಾಗಿ ಸಿಬಿಎಸ್ಸಿ ಮತ್ತು ಐಸಿಎಸ್‍ಸಿ ಶಾಲೆಗಳಿಗೆ ಒಂದು ನಿಯಮ,ರಾಜ್ಯ ಪಠ್ಯಕ್ರಮದ ಶಾಲೆಗಳಿಗೆ ಮತ್ತೊಂದು ನಿಯಮ ಮಾಡಿ ಮಲತಾಯಿ ಧೋರಣೆ ಅನುಸರಿಸುತ್ತಿದೆಯಲ್ಲದೆ ಪ್ರತೀ ವರ್ಷ ನವೀಕರಣದ ಸಂದರ್ಭದಲ್ಲಿ ಕಟ್ಟಡ ಸುರಕ್ಷತೆ, ಫೈರ್ ಸೇಫ್ಟಿ ಕುರಿತು ನಿರಪೇಕ್ಷಣ ಪತ್ರ ಒದಗಿಸಬೇಕೆಂದು ಸೂಚಿಸಿರುವುದು ಖಾಸಗಿ ಶಾಲೆಗಳವರಿಗೆ ತೀವ್ರ ತೊಂದರೆಯಾಗಿದೆ.

        ಸರಕಾರಿ ಶಾಲೆ, ಕೇಂದ್ರ ಪಠ್ಯಕ್ರಮದ ಶಾಲೆಗಳಿಗಿಲ್ಲದ ನಿಯಮ ಖಾಸಗಿಯವರಿಗೆ ಮಾತ್ರ ಏಕೆ? ಸರಕಾರಿ ಶಾಲೆಗಳ ಸ್ಥಿತಿ ಯಾವ ಮಟ್ಟದಲ್ಲಿದೆ ಎಂಬುದನ್ನು ಇಲಾಖೆಯವರೇ ಒಮ್ಮೆ ಅವಲೋಕಿಸಬೇಕಿದೆ. 2017-18ನೇ ಸಾಲಿನ ಹಿಂದಿನ ಅವಧಿಯ ಶಾಲೆಗಳಿಗೆ ಈ ನಿಯಮವನ್ನು ಅನ್ವಯಿಸಬಾರದು ಎಂಬುದು ನಮ್ಮ ಸಂಘಟನೆ ಆಗ್ರಹವಾಗಿದೆ ಎಂದರು.

ಸರಕಾರ 2020-21 ನೇ ಸಾಲಿನ ಸುಮಾರು 750 ಕೋಟಿ ರೂಗಳ ಆರ್.ಟಿ.ಇ ಹಣವನ್ನು ಖಾಸಗಿ ಶಾಲೆಗಳಿಗೆ ನೀಡಬೇಕಾಗಿದೆ. ತುಮಕೂರು ಜಿಲ್ಲೆಗೆ ಸುಮಾರು 15 ಕೋಟಿಯಷ್ಟು ಹಣ ಬಾಕಿ ಬರಬೇಕಾಗಿದೆ.ಸಾಲ ಮಾಡಿ ಶಿಕ್ಷಕರಿಗೆ ವೇತನ ನೀಡುತ್ತಿದ್ದು, ಸರಕಾರಮಾಡಿರುವ ಅವೈಜ್ಞಾನಿಕ ನವೀಕರಣ ಷರತ್ತಿನ ನಿಯಮದಿಂದ ಸು. 8-10 ಸಾವಿರ ಶಾಲೆಗಳು ಮಾನ್ಯತೆ ನವೀಕರಣ ಆಗದ ಸ್ಥಿತಿಯಲ್ಲಿವೆ. ನವೀಕರಣ ಸಕಾಲದಲ್ಲಿ ಆಗದಿದ್ದರೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅರ್ಹರಾಗುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು, ಶಿಕ್ಷಣ ಸಚಿವರು, ತ್ವರಿತ ನಿರ್ಧಾರ ಕೈಗೊಳ್ಳಬೇಕು.
-ಹಾಲನೂರು ಎಸ್.ಲೇಪಾಕ್ಷ. ರೂಪ್ಸಾ ಅಧ್ಯಕ್ಷರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link