ಬೆಂಗಳೂರು:
ಆರ್ಎಸ್ಎಸ್ ನಿಷೇಧವಲ್ಲ, ಸಂಘದ ಒಂದು ಶಾಖೆಯನ್ನು ಕಾಂಗ್ರೆಸ್ಗೆ ತಾಕತ್ತಿದ್ದರೆ ಮುಟ್ಟಲಿ ನೋಡೋಣ. ಹಿಂದುಗಳ ಧ್ವನಿಯಾಗಿರುವ ಆರ್ಎಸ್ಎಸ್, ಭಜರಂಗದಳ ತಂಟೆಗೆ ಹೋದರೆ ಮೂರು ತಿಂಗಳಲ್ಲಿ ಪತನವಾಗಲಿದೆ ಎಂದು ಆರ್.ಅಶೋಕ್ ಎಚ್ಚರಿಸಿದರು.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಿಮ್ಮ ಅಪ್ಪ, ಅಜ್ಜಿ, ಮುತ್ತಾತ್ತನ ಕೈಯಲ್ಲೇ ಆಗಿಲ್ಲ. ಇವಾಗ ದೇಶದಲ್ಲಿ ನಿಮ್ಮ ಸರ್ಕಾರ ನೆಗೆದು ಬಿದ್ದಿದೆ. ಇವಾಗ ತಾಕತ್ ಧಮ್ ಇದ್ರೆ, ಬಜರಂಗ ದಳ ಆಗಲಿ ಆಥವಾ ಒಂದು ಆರ್ಎಸ್ಎಸ್ ಶಾಖೆಯನ್ನು ಬ್ಯಾನ್ ಮಾಡಿ ಎಂದು ಆರ್ ಅಶೋಕ್ ಗುಡುಗಿದರು.
ನಿಮ್ಮ ಗೂಟದ ಕಾರುಗಳೆಲ್ಲ ಎಲ್ಲವೂ ವಾಪಸ್ಸು ಹೋಗಬೇಕು. ಈ ದೇಶದ ಪ್ರಧಾನಿಗಳು ಆರ್ಎಸ್ಎಸ್ನವರು. ಆರ್ಎಸ್ಎಸ್ ಒಂದು ಹಿಂದೂಗಳ ಧ್ವನಿ ಎಂದು ಆರ್ ಅಶೋಕ್ ಹೇಳಿದರು.