ಕೊಲ್ಕತ್ತಾ : IIM ಬಾಯ್ಸ್‌ ಹಾಸ್ಟೆಲ್‌ನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ; ತನಿಖೆ ಚುರುಕು

ಕೊಲ್ಕತ್ತಾ:

    ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ  ಓದುತ್ತಿರುವ ಮಹಿಳೆಯ ಮೇಲೆ ಬಿಸಿನೆಸ್ ಸ್ಕೂಲ್‌ನ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯೊಬ್ಬ ಅತ್ಯಾಚಾರ ಎಸಗಿದ್ದಾನೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಹರಿದೇವಪುರ ಪೊಲೀಸ್ ಠಾಣೆಯಲ್ಲಿ ಮಹಿಳೆ ದಾಖಲಿಸಿದ ದೂರಿನ ಆಧಾರದ ಮೇಲೆ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಐಐಎಂ-ಕಲ್ಕತ್ತಾದ ಬಾಲಕರ ಹಾಸ್ಟೆಲ್ ಒಳಗೆ ಶುಕ್ರವಾರ ಈ ಘಟನೆ ನಡೆದಿದೆ ಐಐಎಂ-ಕಲ್ಕತ್ತಾದ ಬಾಲಕರ ಹಾಸ್ಟೆಲ್ ಒಳಗೆ ಶುಕ್ರವಾರ ಈ ಘಟನೆ ನಡೆದಿದೆ.

    ಮಹಿಳೆ ಎಫ್‌ಐಆರ್‌ನಲ್ಲಿ ತನ್ನನ್ನು ಕೌನ್ಸೆಲಿಂಗ್ ಅವಧಿಗಾಗಿ ಹಾಸ್ಟೆಲ್‌ಗೆ ಕರೆಸಲಾಗಿತ್ತು ಎಂದು ಹೇಳಿದ್ದಾಳೆ. ನಂತರ ಹಾಸ್ಟೆಲ್‌ನಲ್ಲಿ ಮಾದಕ ದ್ರವ್ಯ ಬೆರೆಸಿದ ಪಾನೀಯ ನೀಡಲಾಗಿತ್ತು. ನಂತರ ತಾನು ಪಾನೀಯ ಸೇವಿಸಿದ ಬಳಿಕ ಪ್ರಜ್ಞಾಹೀನಳಾದೆ. ಪ್ರಜ್ಞೆ ಮರಳಿದ ನಂತರ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ಅರಿವಾಯಿತು ಎಂದು ಆಕೆ ಹೇಳಿದ್ದಾಳೆ. ಈ ವಿಷಯವನ್ನು ಯಾರಿಗಾದರೂ ಬಹಿರಂಗಪಡಿಸಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಆರೋಪಿ ಬೆದರಿಕೆ ಹಾಕಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ. ಸದ್ಯ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

   ಕಳೆದ ವಾರವಷ್ಟೇ ಸೌತ್ ಕೋಲ್ಕತ್ತಾ ಲಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಮಾಜಿ ವಿದ್ಯಾರ್ಥಿ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಬ್ಲ್ಯಾಕ್‌ಮೇಲ್ ಮಾಡಿ ವಿಡಿಯೋ ಮಾಡಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದಳು. ಆರೋಪಿಗಳಲ್ಲಿ 31 ವರ್ಷದ ಮೊನೊಜಿತ್ ಮಿಶ್ರಾ,19 ವರ್ಷದ ಜೈಬ್ ಅಹ್ಮದ್ ಮತ್ತು ಪ್ರಮಿತ್ ಮುಖರ್ಜಿ (20) ಸೇರಿದ್ದಾರೆ. ಜೂನ್ 26 ರ ಸಂಜೆ ಕೋಲ್ಕತ್ತಾದ ತಲ್ಬಗನ್ ಕ್ರಾಸಿಂಗ್ ಬಳಿ ಮಿಶ್ರಾ ಮತ್ತು ಅಹ್ಮದ್ ಅವರನ್ನು ಬಂಧಿಸಲಾಗಿದೆ. ಮೂರನೇ ಆರೋಪಿ ಪ್ರಮಿತ್ ಮುಖರ್ಜಿಯನ್ನು ಆತನ ಮನೆಯಿಂದ ಬಂಧಿಸಲಾಗಿದೆ. ಪೊಲೀಸರು ಮೂವರ ಮೊಬೈಲ್ ಫೋನ್‌ಗಳನ್ನು ಸಹ ವಶಪಡಿಸಿಕೊಂಡು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ. 

   24 ವರ್ಷದ ವಿದ್ಯಾರ್ಥಿನಿಯ ಮೇಲೆ ಹಲವಾರು ಗಂಟೆಗಳ ಕಾಲ ಹಲ್ಲೆ ನಡೆಸಲಾಯಿತು. ಈ ಕೃತ್ಯವನ್ನು ಪ್ರಮುಖ ಆರೋಪಿ ಮೊನೊಜಿತ್ ಮಿಶ್ರಾ ಎಸಗಿದ್ದಾನೆ. ಈತ ಕಾಲೇಜಿನ ಟಿಎಂಸಿ ಚಾತ್ರ ಪರಿಷತ್ ಘಟಕದ ಮಾಜಿ ಅಧ್ಯಕ್ಷ ಮತ್ತು ಟಿಎಂಸಿಯ ವಿದ್ಯಾರ್ಥಿ ಘಟಕದ ದಕ್ಷಿಣ ಕೋಲ್ಕತ್ತಾ ವಿಭಾಗದ ಸಂಘಟನಾ ಕಾರ್ಯದರ್ಶಿಯಾಗಿದ್ದನು ಎಂದು ವರದಿಯಾಗಿದೆ. ಕೃತ್ಯ ನಡೆಯುವಾಗ ಇಬ್ಬರು ವಿದ್ಯಾರ್ಥಿಗಳು ನೋಡುತ್ತಾ ನಿಂತಿದ್ದರು ಎನ್ನಲಾಗಿದೆ.

Recent Articles

spot_img

Related Stories

Share via
Copy link