ಚೆನ್ನೈ :
ಕನ್ನಡವು ತಮಿಳಿನಿಂದ ಹುಟ್ಟಿದ್ದು ಎಂದು ಕಮಲ್ ಹಾಸನ್ ಅವರು ವಿವಾದ ಮಾಡಿಕೊಂಡಿದ್ದು ಗೊತ್ತೇ ಇದೆ. ಈ ಕಾರಣಕ್ಕೆ ಅವರ ವಿರುದ್ಧ ಎಲ್ಲರೂ ಧ್ವನಿ ಎತ್ತಿದ್ದಾರೆ. ಅವರು ಈ ರೀತಿ ಹೇಳಿಕೆ ನೀಡಬಾರದಿತ್ತು ಎಂದು ಅನೇಕರು ಹೇಳೀಕೊಂಡಿದ್ದರು. ಆದರೆ. ಈ ವಿಚಾರದಲ್ಲಿ ಇಳಯರಾಜ ಅವರು ಭಿನ್ನವಾಗಿ ನಿಲ್ಲುತ್ತಾರೆ. ಅವರು ನೀಡಿದ ಹೇಳಿಕೆ ಒಂದು ಗಮನ ಸೆಳೆದಿತ್ತು. ಅವರು ಕರ್ನಾಟಕದ ಮಗ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಅದಕ್ಕೆ ಕಾರಣ ಇಲ್ಲಿದೆ.
ಇಳಯರಾಜ ಅವರು ಕನ್ನಡದ ನಂಟು ಸಾಕಷ್ಟು ಇದೆ.
‘ನಾನು ಸಹಾಯಕ ಸಂಗೀತ ನಿರ್ದೇಶಕನಾಗಿ ಕೆಲಸ ಮಾಡಿದ್ದೇನೆ. ಜಿಕೆ ವೆಂಕಟೇಶ್ ಜೊತೆ ಕೆಲಸ ಮಾಡಿದ್ದೇನೆ. ಅಲ್ಲಿಂದ ಕನ್ನಡದ ಅನುಭವ’ ಎಂದಿದ್ದರು. ‘ನಾನು ಕನ್ನಡದವನು, ನನ್ನ ಸಾಂಗ್ ಎಂದು ಜನರು ಒಪ್ಪಿಕೊಂಡಿದ್ದಾರೆ’ ಎಂದಿದ್ದರು ಅವರು. ಇಳಯರಾಜ ಅವರು ಶಂಕರ್ನಾಗ್ ಜೊತೆ ಒಳ್ಳೆಯ ನಂಟು ಇತ್ತು. ಅವರ ಜೊತೆ ಕೆಲಸ ಮಾಡೋದು ಎಂದರೆ ಅವರಿಗೆ ತುಂಬಾನೇ ಖುಷಿ ಆಗಿತ್ತು. ಹಲವು ಬಾರಿ ಇವರು ಒಟ್ಟಾಗಿ ಕೆಲಸ ಮಾಡಿದ್ದರು. ‘ಸಂಗೀತ ಎಂಬುದು ತುಂಬಾನೇ ಮುಖ್ಯ. ನಾನು ಯಾವಾಗಲೂ ಬೇಗ ಸಂಗೀತ ಸಂಯೋಜನೆ ಮಾಡಿಕೊಡುತ್ತಿದ್ದೆ’ ಎಂದು ಅವರು ಹೇಳಿಕೊಂಡಿದ್ದರು.
ಇಳಯರಾಜ ಅವರು ಹಾಡೋಕೆ ಆರಂಭಿಸಿದ್ದು ಒಂದು ಅಚ್ಚರಿಯ ರೀತಿಯಲ್ಲಿ. ‘ಅವರು ಫ್ರೀ ಇದಾರ, ಇವರು ಫ್ರೀ ಇದಾರ ಎಂದು ಗಾಯಕರ ಬಳಿ ಕೇಳುತ್ತಾ ಹೋಗಲಾಗುತ್ತಿತ್ತು. ಆದರೆ, ಯಾರೂ ಫ್ರೀ ಇಲ್ಲದಾಗ, ನಾನೇ ಹಾಡುತ್ತಿದ್ದೆ’ ಎಂದು ಇಳಯರಾಜ ಅವರು ಈ ಮೊದಲು ಹೇಳಿಕೊಂಡಿದ್ದರು.








