ಕಲಬುರಗಿ:

ಕಲಬುರಗಿ ರಾಜ್ಯದಲ್ಲಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಪ್ರಕರಣ ಸಂಬಂಧ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ.ಬಂಧಿತರನ್ನು ಸಿಎಆರ್ ಪೊಲೀಸ್ ಪೇದೆ ರುದ್ರಗೌಡ ಮತ್ತು ಅಫಜಲಪುರ ಕಾಂಗ್ರೆಸ್ ಶಾಸಕ ಎಂ.ವೈ.ಪಾಟೀಲ್ ಅವರ ಗನ್ ಮ್ಯಾನ್ ಅಯ್ಯಣ್ಣ ದೇಸಾಯಿ ಎಂದು ಗುರುತಿಸಲಾಗಿದೆ. ಪಿಎಸ್‌ಐ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಬಂಧಿಸಲಾಗಿದೆ.
ಅಯ್ಯಣ್ಣ ದೇಸಾಯಿ 2012ರ ಡಿಎಆರ್ ಬ್ಯಾಚ್ ಹೆಡ್ ಕಾನ್ಸಟೇಬಲ್. ಕಲ್ಯಾಣ ಕರ್ನಾಟಕ ಮೂಲವೃಂದದಲ್ಲಿ ಪೊಲೀಸ್ ಸೇವಾ ನಿರತ ಖೋಟಾದಲ್ಲಿ ಮೊದಲ ರ್ಯಾಂಕ್ ಪಡೆದಿದ್ದ. ಕಳೆದ ನಾಲ್ಕು ವರ್ಷದಿಂದ ಶಾಸಕ ಎಂ.ವೈ.ಪಾಟೀಲ್ ಬಳಿ ಗನ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು.
ಪ್ರತಿಯೊಬ್ಬ ಪಾಪಿಗೂ ಭವಿಷ್ಯವಿದೆ; ಅತ್ಯಾಚಾರ ಆರೋಪಿಯ ಮರಣ ದಂಡನೆ ರದ್ದುಗೊಳಿಸಿ ʼಸುಪ್ರೀಂʼ ಹೇಳಿಕೆ
ಎಂ.ವೈ.ಪಾಟೀಲ್ ಜೊತೆಗಿದ್ದಾಗಲೆ ಅಯ್ಯಣ್ಣ ದೇಸಾಯಿ ಬಂಧನವಾಗಿದೆ. ಶಾಸಕ ಎಂ.ವೈ. ಪಾಟೀಲ್ ಪರಿಚಯಸ್ಥರ ಮದುವೆಗೆ ತೆರಳುತಿದ್ದಾಗ ಕಲಬುರಗಿ ನಗರದ ರಾಮಮಂದಿರ ಬಳಿ ಸಿಐಡಿ ತಂಡ ಬಂಧಿಸಿದೆ. ಪಾಟೀಲ್ ಅವರನ್ನು ಕಾರಿನಿಂದ ಇಳಿಸಿ ಅಯ್ಯಣ್ಣ ದೇಸಾಯಿರನ್ನು ಬಂಧಿಸಿ ಸಿಐಡಿ ಅಧಿಕಾರಿಗಳು ಕರೆದೊಯ್ದಿದ್ದಾರೆ. ಇದೇ ಸಂದರ್ಭದಲ್ಲಿ ಎಂ.ವೈ.ಪಾಟೀಲ್ಗೆ ಅಧಿಕಾರಿಗಳು ಮತ್ತೊಬ್ಬ ಗನ್ ಮ್ಯಾನ್ ಅನ್ನು ಕಳುಹಿಸಿ ಕೊಟ್ಟರು.
ಇನ್ನು ಸಿಐಡಿ ಅಧಿಕಾರಿಗಳು ಕಾರು ತಡೆದಿದ್ದಕ್ಕೆ ಶಾಸಕ ಎಂ.ವೈ.ಪಾಟೀಲ್ ಶಾಕ್ ಆದರು. ಯಾಕೆ ನಮ್ಮ ಕಾರು ತಡೆದಿದ್ರೆ ಅಂತಾ ಪ್ರಶ್ನಿಸಿದರು. ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಗನ್‌ಮ್ಯಾನ್ ಹೆಸರು ಹಿನ್ನಲೆ ವಶಕ್ಕೆ ಪಡೆಯುತ್ತೇವೆ ಎಂದು ಹೇಳಿದ ಬಳಿಕ ಸುಮ್ಮನಾದರು.
ಆರೋಪಿಗಳನ್ನು ಬಂಧಿಸಿದ್ದು, ಸಿಐಡಿ ತನಿಖಾ ತಂಡ ವಿಚಾರಣೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಬಗೆದಷ್ಟು ಅಕ್ರಮಗಳು ಹೊರ ಬೀಳುತ್ತಿದೆ. ಅಕ್ರಮದಲ್ಲಿ ದೊಡ್ಡ ಮಟ್ಟದ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.
ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಹಿನ್ನಲೆಯಲ್ಲಿ ಕಲಬುರಗಿ ನಿರಾವರಿ ಇಲಾಖೆ ಇಂಜಿನಿಯರ್ ಮಂಜುನಾಥ್ ಮನೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ಮಾಡಿದ್ದು, ಈ ವೇಳೆ ಮಂಜುನಾಥ್ ಮನೆಯಲ್ಲಿ ಹಾಲ್ ಟಿಕೆಟ್ ಪತ್ತೆಯಾಗಿದೆ.
ಬೆಳಗಾವಿ: ಸಂತೋಷ ಪಾಟೀಲ್ ಆತ್ಮಹತ್ಯೆಗೆ ಹೊಸ ಟ್ವಿಸ್ಟ್ , ಕಾಮಗಾರಿಗೆ ನಾನು ಲೆಟರ್ ಕೊಟ್ಟಿದ್ದೇನೆ.!
ಪಿಎಸ್‌ಐ ನೇಮಕಾತಿ ಕೆಪಿಎಸ್ಸಿ ಯಿಂದ ನಡೆಯುವ ಹಲವು ಪರೀಕ್ಷೆಗಳ ಹಾಲ್ ಟಿಕೆಟ್ ಪತ್ತೆಯಾಗಿವೆ. ಮಂಜುನಾಥ್ ಮನೆಯಲ್ಲಿ 20ಕ್ಕು ಅಧಿಕ ಹಾಲ್ ಟಿಕೆಟ್ ಪತ್ತೆಯಾಗಿದ್ದು, ಸದ್ಯ ತೆಲೆಮರೆಸಿಕೊಂಡಿರುವ ನಿರಾವರಿ ಇಂಜನಿಯರ್ ಮಂಜುನಾಥ್ ಪತ್ತೆಗೆ ಅಧಿಕಾರಿಗಳು ಬಲೆ ಬೀಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







