ನಾಯಕನಹಟ್ಟಿ :
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿರುವ ಖಾಸಗಿ ಲೇಔಟ್ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಸ್ಥಳಕ್ಕೆ ತಾಲ್ಲೂಕು ದಂಢಾಧಿಕಾರಿ ರೆಹಾನ್ ಪಾಷ ಹಾಗೂ ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಹಕೀಮ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಅರಬಾವಿ-ಚಳ್ಳಕೆರೆ ರಾಜ್ಯ ಹೆದ್ದಾರಿ ೪೫ರ ರಸ್ತೆಯ ಮದ್ಯದಿಂದ ೨೮.೫೦ ಮೀಟರ್‌ಗಳಷ್ಟು ಜಾಗವನ್ನು ಬಿಟ್ಟು ಖಾಸಗಿ ಲೇಔಟ್ ನಿರ್ಮಾಣ ಮಾಡಬೇಕು ಎಂಬ ನಿಯಮವಿದ್ದರೂ ಕೂಡ ಕಾನೂನು ಬಾಹಿರವಾಗಿ ಖಾಸಗಿ ಲೇಔಟ್ ನವರು ೧೪ ಮೀಟರ್‌ಗಳಷ್ಟು ಒತ್ತುವರಿ ಮಾಡಿದ್ದಾರೆ.
ಎಂದು ಅಧಿಕಾರಿಗಳು ತಿಳಿಸಿದರು. ಸರ್ಕಾರದ ಆದೇಶ ಸಂಖ್ಯೆ ಪಿ.ಡಬ್ಲೂö್ಯ.ಡಿ. ೨೩ ಆರ್.ಡಿ.ಎಫ್.-೨೦೦೪ ದಿನಾಂಕ:೧೮-೧೦-೨೦೦೪ರಲ್ಲಿ ರಾಜ್ಯ ಹೆದ್ದಾರಿಗಳಿಗೆ ಸಂಬಂಧಿಸಿದಂತೆ ರಸ್ತೆಯ ಭೂಗಡಿ ಅಂಚಿನಿಂದ ೨೮.೫೦ ಮೀಟರ್‌ಗಳಷ್ಟು ಜಾಗವನ್ನು ಬಿಟ್ಟು ಲೇಔಟ್ ನಿರ್ಮಿಸಬೇಕೆಂದು ಸರ್ಕಾರದ ಆದೇಶದಲ್ಲಿದೆ.ಆದರೂ ಕೂಡ ಒತ್ತುವರಿ ಮಾಡಿದ್ದು ಕಂಡು ಬಂದಿದ್ದರಿಂದ ಒತ್ತುವರಿ ಜಾಗವನ್ನು ತೆರೆವುಗೊಳಿಸುವವರೆಗೆ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ತಹಶೀಲ್ದಾರ್ ರೆಹಾನ್‌ಪಾಷರವರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗೆ ಓ.ಶ್ರೀನಿವಾಸ್‌ರವರಿಗೆ ತಿಳಿಸಿದರು .
ಈ ಸಂದರ್ಭದಲ್ಲಿ ಉಪಸ್ಥಿತರಾದ ಪಟ್ಟಣ ಪಂಚಾಯಿತಿಯ ಸ್ಥಾಯಿ ಸಮಿತಿಯ ಅಧ್ಯಕ್ಷ ಕೆ.ಪಿ.ತಿಪ್ಪೇಸ್ವಾಮಿ, ನಾಯಕನಹಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ೯ನೇ ವಾರ್ಡ್ನ ಪ.ಪಂ. ಸದಸ್ಯ ಜೆ.ಆರ್.ರವಿಕುಮಾರ್, ಕಂದಾಯ ನಿರೀಕ್ಷಕ ಆರ್.ಚೇತನ್‌ಕುಮಾರ್, ಲೊಕೋಪಯೋಗಿ ಇಂಜಿನಿಯರ್ ಹಕೀಮ್, ಸರ್ವೇಯರ್ ಪ್ರಸನ್ನ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಪ.ಪಂ.ಅಧಿಕಾರಿಗಳು ಮತ್ತು ಗ್ರಾಮಸ್ಥರು ಇದ್ದರು.
ಲೇಔಟ್ ಮಾಲೀಕರ ಹತ್ತಿರ ಇರುವ ಆದೇಶ ತರುವವರೆಗೂ ಕಾದು ನೋಡಿ ಕ್ರಮ ಜರುಗಿಸಲಾಗುವುದು. ಅಲ್ಲಿಯವರೆಗೆ ಕಾಮಗಾರಿ ಸ್ಥಗಿತಗೊಳಿಸುವಂತೆ ತಿಳಿಸಿದರು.-ರೆಹಾನ್‌ಪಾಷ ತಹಶೀಲ್ದಾರ್, ಚಳ್ಳಕೆರೆ.
