ಕಲ್ಲುಡಿಮ್ಮಿಗಳ ಅಕ್ರಮ ಸಾಗಾಣಿಕೆ 

ಮಿಡಿಗೇಶಿ:


ಮಧುಗಿರಿ ತಾಲ್ಲೂಕು ಗಡಿಯ ಆಂಧ್ರ ರಾಜ್ಯದ ಮಡಕಶಿರಾ ತಾಲ್ಲೂಕಿನ ಬಹುತೇಕ ಎಲ್ಲಾ ಕಲ್ಲಿನ ಕ್ವಾರಿಗಳಲ್ಲಿ ತೆಗೆಯುತ್ತಿರುವ ಬೃಹತ್ತಾದ ಕಲ್ಲಿನ ಡಿಮ್ಮಿಗಳನ್ನು ಅಕ್ರಮವಾಗಿ ಕರ್ನಾಟಕ ರಾಜ್ಯದ ಮೂಲಕ ಸಾಗಿಸಲಾಗುತ್ತಿದೆ.

ಇಲ್ಲಿಂದ ಗ್ರ್ಯಾನೈಟ್ ಪಾಲಿಷ್ ಮಾಡುವ ಫ್ಯಾಕ್ಟರಿಗಳಿಗೆ ಹಗಲಿರುಳೆನ್ನದೆ ಒಂದು ಲಾರಿಗೆ ಮಾತ್ರ ಪರವಾನಗಿ ಪಡೆದು, ಹತ್ತರಿಂದ ಇಪ್ಪತ್ತು ಚಕ್ರಗಳುಳ್ಳ ಹಲವಾರು ಬೃಹತ್ ಲಾರಿಗಳಲ್ಲಿ ಕಲ್ಲಿನ ಡಿಮ್ಮಿಗಳು ರಾಜಾರೋಷವಾಗಿ ರವಾನೆಯಾಗುತ್ತಿವೆ.

ಹಾಗಿದ್ದರೂ ಸಹ ಗ್ರಾಮ ಪಂಚಾಯಿತಿ, ಕಂದಾಯ ಇಲಾಖೆ, ತಹಸೀಲ್ದಾರ್, ಉಪವಿಭಾಗಾಧಿಕಾರಿ, ಏ.ಆರ್.ಟಿ.ಓ, ಲೋಕೋಪಯೋಗಿ ಇಲಾಖೆ, ಪೋಲೀಸ್ ಇಲಾಖೆಗಳು ಕಣ್ಣಿದ್ದೂ ಕುರುಡರಂತೆ ಇರುವುದು ಏತಕ್ಕೆ? ಇದರಿಂದ ರಾಜ್ಯದ ಬೊಕ್ಕಸಕ್ಕೆ ಬರುವಂತಹ ಲಕ್ಷಾಂತರ ರೂಪಾಯಿ ರಾಜಧನ ವಸೂಲಾತಿ ಮಾಡದೆ ಇರುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಜ್ಞಾವಂತರ ಪ್ರಶ್ನೆಗೆ ಉತ್ತರ ನೀಡುವವರು ಯಾರು?

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link