ನನ್ನ ಫೋನ್‌ ಹ್ಯಾಕ್‌ ಮಾಡಲಾಗಿದೆ : ಇಲ್ತಿಜಾ ಮುಫ್ತಿ

ಶ್ರೀನಗರ:

      ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರ ಮಗಳು ಹಾಗೂ ಅವರ ಮಾಧ್ಯಮ ಸಲಹೆಗಾರ್ತಿ ಇಲ್ತಿಜಾ ಮುಫ್ತಿ ಅವರು ತಮ್ಮ ಫೋನ್ ಅನ್ನು ಪೆಗಾಸಸ್ ಸ್ಪೈವೇರ್ ಹ್ಯಾಕ್ ಮಾಡಿದೆ ಎಂದು ಬುಧವಾರ ಆರೋಪಿಸಿದ್ದಾರೆ.”ನನ್ನ ಫೋನ್ ಅನ್ನು ಪೆಗಾಸಸ್ ಹ್ಯಾಕ್ ಮಾಡಿದೆ ಎಂದು ಆಪಲ್ ಎಚ್ಚರಿಕೆ ನೀಡಿದೆ. ಕೇಂದ್ರ ಸರ್ಕಾರ ತನ್ನನ್ನು ಟೀಕಿಸುವವರ ವಿರುದ್ಧ ಮತ್ತು ರಾಜಕೀಯ ವಿರೋಧಿಗಳಿಗೆ ಕಿರುಕುಳ ನೀಡಲು ಇದನ್ನು ಬಳಸುತ್ತಿದೆ” ಎಂದು ಇಲ್ತಿಜಾ ಮುಫ್ತಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

   ಭಾರತೀಯ ಜನತಾ ಪಕ್ಷವು(ಬಿಜೆಪಿ) “ತಮಗೆ ಮಣಿಯದ” ಮಹಿಳಾ ನಾಯಕರ ಮೇಲೆ ಸ್ನೂಪ್ ಮಾಡುತ್ತಿದೆ ಎಂದು ಆರೋಪಿಸಿದ ಇಲ್ತಿಜಾ, “ಬಿಜೆಪಿ ನಾಚಿಕೆಯಿಲ್ಲದೆ ಮಹಿಳೆಯರ ಮೇಲೆ ಸ್ನೂಪ್ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

   ಇಸ್ರೇಲ್ ಮೂಲದ ಸೈಬರ್ ಸೆಕ್ಯುರಿಟಿ ಕಂಪನಿ NSO ಗ್ರೂಪ್ ಅಭಿವೃದ್ಧಿಪಡಿಸಿದ ಪೆಗಾಸ್ ಸ್ಪೈವೇರ್ WhatsApp ನಲ್ಲಿ ಮಿಸ್ ಕಾಲ್ ಕೊಡುವ ಮೂಲಕ ಮೊಬೈಲ್ ಫೋನ್‌ಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ದೂರಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap