ಕರ್ನಾಟಕ : ಜೂನ್ ತಿಂಗಳಲ್ಲಿ ಒಟ್ಟು ಶೇ.2 ರಷ್ಟು ಮಳೆ ಕೊರತೆ

ಬೆಂಗಳೂರು: 

    ನೈಋತ್ಯ ಮುಂಗಾರು ಪ್ರವೇಶದ ಒಂದು ತಿಂಗಳ ಬಳಿಕ ರಾಜ್ಯದಲ್ಲಿ ಜೂನ್ ತಿಂಗಳಲ್ಲಿ ಒಟ್ಟು ಶೇ.2 ರಷ್ಟು ಮಳೆ ಕೊರತೆ ಉಂಟಾಗಿದೆ.

    ಭಾರತೀಯ ಹವಾಮಾನ ಇಲಾಖೆ (ಐಎಂಡಿ) ದೇಶದ ಬಹುತೇಕ ಭಾಗಗಳಲ್ಲಿ ಜುಲೈ ನಲ್ಲಿ ಭಾರಿ ಮಳೆಯಾಗಲಿದೆ ಎಂಬ ಮುನ್ಸೂಚನೆ ನೀಡಿದೆ. ಮುಂಗಾರು ಚುರುಕು ಪಡೆಯುವುದಕ್ಕೂ ಮುನ್ನ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಮಳೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. 

   ಜೂನ್ 1 ರಿಂದ ಜುಲೈ 2 ರವರೆಗೆ ರಾಜ್ಯದಲ್ಲಿ ಸಾಮಾನ್ಯ 216.5 ಮಿಮೀ ಮಳೆಗೆ ಹೋಲಿಸಿದರೆ 212.5 ಮಿಮೀ ಮಳೆಯಾಗಿದೆ ಎಂದು ಐಎಂಡಿ ಅಂಕಿ-ಅಂಶಗಳು ತೋರಿಸಿವೆ. ಜುಲೈ ತಿಂಗಳ ವಾಡಿಕೆ ಮಳೆ 252.2 ಮಿ.ಮೀ. ಯಷ್ಟಿದೆ.

  ಹಾಸನ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ, ಶೇ.45ರಷ್ಟು ಕೊರತೆ ದಾಖಲಾಗಿದ್ದು, ಸಾಮಾನ್ಯ 172.4 ಮಿ.ಮೀ.ಗೆ ಹೋಲಿಸಿದರೆ 95.6 ಮಿ.ಮೀ ಯಷ್ಟು ಮಳೆಯಾಗಿದೆ. ಹಾವೇರಿಯಲ್ಲಿ ಎರಡನೇ ಅತಿಹೆಚ್ಚು- ಶೇ.43ರಷ್ಟು ಮಳೆ ಕೊರತೆಯಾಗಿದೆ. ಸಾಮಾನ್ಯ 130 ಮಿಮೀ ಮಳೆಯಾಗಬೇಕಿತ್ತು ಆದರೆ ಈ ಬಾರಿ 74.3 ಮಿಮೀ ಮಳೆ ಪಡೆದಿದೆ.

   ವಿಜಯಪುರ ಜಿಲ್ಲೆಯಲ್ಲಿ ಗರಿಷ್ಠ ಶೇ.136ರಷ್ಟು ಮಳೆಯಾಗಿದೆ. ಇಲ್ಲಿ ಸಾಮಾನ್ಯವಾಗಿ 91.8 ಮಿಮೀ ಮಳೆಯಾಗುತ್ತಿತ್ತು. ಆದರೆ ಈ ಬಾರಿ 216.3 ಮಿಮೀ ಮಳೆಯಾಗಿದೆ. ಬಳ್ಳಾರಿಯಲ್ಲಿ ವಾಡಿಕೆಗಿಂತಲೂ ಶೇ.127 ರಷ್ಟು ಹೆಚ್ಚಿನ ಮಳೆಯಾಗಿದೆ. ಸಾಮಾನ್ಯವಾಗಿ 75 ಮಿಮೀ ಮಳೆಯಾಗುತ್ತಿದ್ದ ಈ ಪ್ರದೇಶದಲ್ಲಿ 170.5 ಮಿಮೀ ಮಳೆ ದಾಖಲಾಗಿದೆ. ವಿಜಯನಗರ ಜಿಲ್ಲೆಯಲ್ಲಿ ವಾಡಿಕೆಗಿಂತಲೂ ಶೇ.116ರಷ್ಟು ಹೆಚ್ಚು ಮಳೆಯಾಗಿದೆ. 

    ಬೆಂಗಳೂರು ನಗರ ಪ್ರದೇಶದಲ್ಲಿ ಶೇ.55ರಷ್ಟು ಅಧಿಕ ಮಳೆ ದಾಖಲಾಗಿದೆ. ಸಾಮಾನ್ಯವಾಗಿ 77.8 ಮಿಮೀ ಮಳೆಯಾಗುತ್ತಿತ್ತು. ಆದರೆ ಈ ಬಾರಿ 119.2 ಮಿಮೀ ಮಳೆ ದಾಖಲಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಶೇ.73ರಷ್ಟು ಅಧಿಕ ಮಳೆ ದಾಖಲಾಗಿದ್ದು, 69 ಎಂಎಂಗೆ ವಿರುದ್ಧವಾಗಿ, ಇದು 119.2 ಮಿಮೀ ಮಳೆಯಾಗಿದೆ.

    ಭಾರತೀಯ ಹವಾಮಾನ ಇಲಾಖೆ, ಬೆಂಗಳೂರು, ಪ್ರಭಾರ ನಿರ್ದೇಶಕ ಎನ್ ಪುವಿಯರಸನ್ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಮಾಹಿತಿ ನೀಡಿದ್ದು, ಜುಲೈನಲ್ಲಿ ಚಂಡಮಾರುತ ರಚನೆಯ ಯಾವುದೇ ಮುನ್ಸೂಚನೆ ಇಲ್ಲ ಎಂದು ತಿಳಿಸಿದ್ದಾರೆ. ಗಾಳಿಯ ಚಂಡಮಾರುತದ ಪರಿಚಲನೆಗೆ ಪರಿಸ್ಥಿತಿಗಳು ಅನುಕೂಲಕರವಾಗಿವೆ. ಮಾದರಿಗಳು ಅವುಗಳ ರಚನೆಯನ್ನು ಊಹಿಸುತ್ತಿವೆ, ಇದು ರಾಜ್ಯದಲ್ಲಿ ಉತ್ತಮ ಮಳೆಯಾಗುವುದನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

   ಕೊರತೆಯ ನಡುವೆಯೂ ಮಳೆಯು ಸ್ವಲ್ಪ ಮಟ್ಟಿಗೆ ಜಲಾಶಯದ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡಿದೆ ಎಂದು ಕರ್ನಾಟಕ ರಾಜ್ಯ ರಾಷ್ಟ್ರೀಯ ವಿಪತ್ತು ನಿಗಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಅಧಿಕಾರಿಗಳು ತಿಳಿಸಿದ್ದಾರೆ. ಮುಂಬರುವ ತಿಂಗಳುಗಳಲ್ಲಿ ಸಾಕಷ್ಟು ನೀರು ಇರುವುದನ್ನು ಖಚಿತಪಡಿಸಿಕೊಳ್ಳಲು ಜಲಾನಯನ ಪ್ರದೇಶಗಳಲ್ಲಿ ಮಳೆಯು ಈಗ ಮುಖ್ಯವಾಗಿದೆ ಎಂದು ಅವರು ಹೇಳಿದರು.

    KSNDMC ಅಂಕಿ-ಅಂಶಗಳ ಪ್ರಕಾರ, ಕಾವೇರಿ ಜಲಾನಯನ ಪ್ರದೇಶದಲ್ಲಿ ಪ್ರಸ್ತುತ ಸಂಗ್ರಹಣೆ ಶೇ. 48 ರಷ್ಟಿದೆ. ಕಳೆದ ವರ್ಷ ಜುಲೈ 2 ರಂದು 31.45 ಟಿಎಂಸಿ ಅಡಿಯಿದ್ದರೆ, ಈ ವರ್ಷ 55.31 ಟಿಎಂಸಿ ಅಡಿಯಷ್ಟಿದೆ. ಕೃಷ್ಣಾ ಜಲಾನಯನ ಪ್ರದೇಶದಲ್ಲಿ ನೀರಿನ ಮಟ್ಟ ಶೇ.24ರಷ್ಟಿದೆ. ಕಳೆದ ವರ್ಷ 72.55 ಟಿಎಂಸಿ ಅಡಿಯಷ್ಟಿದ್ದರೆ, ಜುಲೈ 2ಕ್ಕೆ ಜಲಾಶಯಗಳ ಮಟ್ಟ ಈ ವರ್ಷ 103.2 ಟಿಎಂಸಿ ಅಡಿ ಇದೆ. ವಾಣಿ ವಿಲಾಸ ಸಾಗರದಲ್ಲಿ ಶೇ.60ರಷ್ಟು ನೀರು ಇದೆ. ಕಳೆದ ವರ್ಷ ಜುಲೈ 2 ರಂದು 24.92 tmcft ಸಾಮರ್ಥ್ಯಕ್ಕೆ ಪ್ರಸ್ತುತ ಸಂಗ್ರಹಣೆ 18.13 tmcft ನೀರಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap