ಭಾರತದಲ್ಲಿ ಗೂಢಚಾರಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ : ಚೀನಾ ಮೂಲದ ವ್ಯಕ್ತಿ ಅರೆಸ್ಟ್

 

ದೆಹಲಿ:

  ಚಾರ್ಲಿಂ ಪೆಗ್(39) ಬಂಧಿತ ಆರೋಪಿ. ಈತನಿಂದ ಭಾರತೀಯ ಪಾಸ್​ಪೋರ್ಟ್​, ಆಧಾರ್​ ಕಾರ್ಡ್​, 3.5 ಲಕ್ಷ ರೂ. ನಗದು, ಎಸ್​ಯುವಿ ಕಾರು ಮತ್ತು ಮಹತ್ವದ ದಾಖಲೆಗಳನ್ನು, 2000 ಅಮೆರಿಕನ್​ ಡಾಲರ್​ ಮತ್ತು 2000 ಥಾಯ್​ ಕರೆನ್ಸಿ ವಶಪಡಿಸಿಕೊಳ್ಳಲಾಗಿದೆ.

   5 ವರ್ಷಗಳ ಹಿಂದೆ ಭಾರತಕ್ಕೆ ಬಂದು, ದೆಹಲಿಯಲ್ಲಿ ನೆಲೆಸಿದ್ದ. ಅಲ್ಲದೆ ಈತ ಪದೇಪದೆ ಹಿಮಾಚಲ ಪ್ರದೇಶ ಮತ್ತು ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡುತ್ತಿದ್ದ. ಮಾತ್ರವಲ್ಲ ಈತ ಭಾರತೀಯ ಯುವತಿಯನ್ನು ವಿವಾಹವಾಗಿ, ಮಣಿಪುರದ ವಿಳಾಸದ ಆಧಾರದ ಮೇಲೆ ಪಾಸ್​ಪೋರ್ಟ್​ ಪಡೆದಿದ್ದ. ಜೊತೆಗೆ ವಿದೇಶಿ ಕರೆನ್ಸಿ ವಿನಿಮಯ ಕಚೇರಿ ಹೊಂದಿದ್ದ. ಹವಾಲಾ ದಂಧೆಯಲ್ಲೂ ಭಾಗಿಯಾಗಿದ್ದ ಎಂಬ ಶಂಕೆ ಇದ್ದು, ತನಿಖೆ ನಡೆಸಲಾಗುತ್ತಿದೆ.

   ಬಂಧಿತ ಚಾರ್ಲಿ ಪೆಂಗ್‍ನನ್ನು ಸೆಪ್ಟೆಂಬರ್ 13ರಂದು ದೆಹಲಿಯ ಮಂಜು ಕಾ ತಿಲ್ಲಾ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದರು. ಈತನನ್ನು ಮ್ಯಾಜಿಸ್ಟ್ರೇಟ್​ ಕೋರ್ಟ್​ನಲ್ಲಿ ಹಾಜರುಪಡಿಸಿದ ಪೊಲೀಸರು, ಈತ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾನೆ ಎಂದು ತಿಳಿದು ಬಂದಿದೆ. ಹೀಗಾಗಿ ವಿಚಾರಣೆಗೆ ತಮ್ಮ ಕಸ್ಟಡಿಗೆ ವಹಿಸುವಂತೆ ಮನವಿ ಮಾಡಿದ್ದರು. ಹೀಗಾಗಿ ಈತನನ್ನು ಪೊಲೀಸರ ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

 

Recent Articles

spot_img

Related Stories

Share via
Copy link
Powered by Social Snap