ನನ್ನ ರಾಜಕೀಯ ಇತಿಹಾಸದಲ್ಲೇ ಇವತ್ತಿನವರೆಗೆ ಈ ರೀತಿಯ ಕಂಪ್ಲೇಂಟ್ ಮಾಡಿಲ್ಲ, ಇದೇ ಮೊದಲು – ಸಚಿವ ಈಶ್ವರಪ್ಪ

ಬೆಂಗಳೂರು:

ಆತ್ಮಹತ್ಯೆಗೆ ಶರಣಾಗಿರುವಂತ ಸಂತೋಷ್ ತೀರಾ ಕಡುಬಡವ ಅಂತ ಹೇಳುತ್ತಾರೆ. ಹಾಗಾದ್ರೇ ದೆಹಲಿಗೆ ಪ್ರಧಾನಿ, ಬಿಜೆಪಿ ವರಿಷ್ಠರನ್ನು ಭೇಟಿಯಾಗಲು ಹೋಗಿದ್ದು ಹೇಗೆ.? ಅವರ ಹಿಂದೆ ಯಾರ್ ಇದ್ದಾರೆ ಎನ್ನುವುದು ಬಯಲಾಗಬೇಕಿದೆ. ನನ್ನ ಜೀವನದಲ್ಲಿ ಇದೇ ಮೊದಲ ಬಾರಿಗೆ ಈ ಆರೋಪ ಎದುರಿಸ್ತಾ ಇರೋದು.ತನಿಖೆಯ ಮೂಲಕ ಎಲ್ಲಾ ಸತ್ಯಾಸತ್ಯತೆ ತಿಳಿದು ಬರಲಿದೆ ಎಂಬ ವಿಶ್ವಾಸವಿದೆ ಎಂದು ಸಚಿವ ಕೆ ಎಸ್ ಈಶ್ವರಪ್ಪ  ಹೇಳಿದ್ದಾರೆ.

ವೇಶ್ಯಾಗೃಹದ ದಾಳಿ ವೇಳೆ ಸಿಕ್ಕಿಬಿದ್ದ ಗ್ರಾಹಕನನ್ನು ಬಂಧಿಸುವಂತಿಲ್ಲ; ಕರ್ನಾಟಕ ಹೈಕೋರ್ಟ್​ ಆದೇಶ

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವಂತ ಅವರು, ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದ ಬಗ್ಗೆ ತನಿಖೆಯ ನಂತ್ರ ಎಲ್ಲ ಸತ್ಯಾಸತ್ಯತೆ ಹೊರಗೆ ಬರಲಿದೆ. ಅವರು ನನ್ನ ವಿರುದ್ಧ ದೂರು ಕೊಡಲು ಬಡವರಾಗಿದ್ದೂ ದೆಹಲಿಗೆ ಹೋಗಿದ್ದೇಗೆ ಎನ್ನುವುದು ತಿಳಿಯ ಬೇಕು ಅಲ್ವಾ ಎಂದರು.

ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣ: ಸಚಿವ ಈಶ್ವರಪ್ಪ ವಿರುದ್ಧ FIR ದಾಖಲು

ನನ್ನ ರಾಜಕೀಯ ಜೀವನದಲ್ಲಿ ಮೊದಲ ಬಾರಿ ಈ ರೀತಿಯ ಕಂಪ್ಲೇಟ್ ಮಾಡಿಲ್ಲ. ನನ್ನ ಜೊತೆಗಿದ್ದವರ ಬಗ್ಗೆಯೂ ಮಾಡಿಲ್ಲ. ನಾನು ರಾಜಕೀಯವಾಗಿ ಆಪಾದನೆ ಮಾಡುತ್ತೇನೆ. ನನ್ನ ವಿರುದ್ಧ ವಿಪಕ್ಷಗಳ ನಾಯಕರು ಮಾಡುತ್ತಾರೆ. ಹೀಗೆ ಆಪಾಧನೆ ಮಾಡಿದ್ದರ ಹಿಂದೆ ಯಾರೆಲ್ಲಾ ಇದ್ದಾರೆ ಎನ್ನುವಂತ ಷಡ್ಯಂತ್ರ ಹೊರಗೆ ಬರಬೇಕು. ಅದು ತನಿಖೆಯಿಂದ ಆಗಲಿದೆ ಎಂದರು.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap