ಇಂದು ಎದುರಾಗುತ್ತಿದ್ದಾರೆ ಸಾಂಪ್ರದಾಯಿಕ ಎದುರಾಳಿಗಳು ……!

ಅಹಮದಾಬಾದ್: 

       ಭಾರತ- ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕೆ ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣ ಇಂದು ಸಾಕ್ಷಿಯಾಗಲಿದೆ. ಬಾಲಿವುಡ್ ತಾರೆಯರನ್ನು ಒಳಗೊಂಡ ಸಂಗೀತ ಸಮಾರಂಭದೊಂದಿಗೆ ಪಂದ್ಯ ಪ್ರಾರಂಭವಾಗಲಿದೆ ಎಂದು ಹಲವು ಮಾಧ್ಯಮ ವರದಿಗಳು ತಿಳಿಸಿವೆ.

     ಐಸಿಸಿ ವಿಶ್ವಕಪ್ 2023 ಆರಂಭದ ವೇಳೆ ಯಾವುದೇ ಸಮಾರಂಭವಿಲ್ಲದ ಕಾರಣ ಇಂದು ಬಾಲಿವುಡ್ ಗಾಯಕರಿಂದ ಸಂಗೀತ ಕಾರ್ಯಕ್ರಮ ಆಯೋಜನೆ ಮೂಲಕ ಅದನ್ನು ಸರಿದೂಗಿಸಲಾಗುತ್ತಿದೆ. ಪಂದ್ಯಾವಳಿಯ ಗೋಲ್ಡನ್ ಟಿಕೆಟ್ ಹೊಂದಿರುವವರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, ಮಧ್ಯಾಹ್ನ 12:40 ಕ್ಕೆ ಕಾರ್ಯಕ್ರಮ ಪ್ರಾರಂಭವಾಗುತ್ತದೆ.

    ಪಂದ್ಯಾವಳಿಯ ಆರಂಭದ ಸ್ವಲ್ಪ ಮುಂಚಿತವಾಗಿ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಅಕ್ಟೋಬರ್ 5 ರಂದು  ಅಮಿತಾಬ್ ಬಚ್ಚನ್, ರಜನಿಕಾಂತ್ ಮತ್ತು ಸಚಿನ್ ತೆಂಡೂಲ್ಕರ್ ಅವರಿಗೆ ಗೋಲ್ಡನ್ ಟಿಕೆಟ್‌ಗಳನ್ನು ನೀಡಿದರು. ತೆಂಡೂಲ್ಕರ್ ವಿಶ್ವಕಪ್ ರಾಯಬಾರಿ ಕೂಡ ಆಗಿದ್ದಾರೆ.

   

      ಭಾರತ ಮತ್ತು ಪಾಕಿಸ್ತಾನ ಎರಡೂ ತಮ್ಮ ಮೊದಲ ಎರಡು ಪಂದ್ಯಗಳನ್ನು ಗಮನಾರ್ಹವಾಗಿ ಗೆದ್ದಿರುವುದರಿಂದ ಪಂದ್ಯವು ಪಾಯಿಂಟ್‌ಗಳ ಪಟ್ಟಿಗೆ ನಿರ್ಣಾಯಕವಾಗಿದೆ. ಮೂರು ಪಂದ್ಯಗಳ ನಂತರ ಪಾಯಿಂಟ್ ಪಟ್ಟಿಯಲ್ಲಿ ಯಾರು ಹೆಚ್ಚಿನ ಸ್ಥಾನವನ್ನು ಪಡೆದುಕೊಳ್ಳುತ್ತಾರೆ ಎಂಬುದನ್ನು ನಿರ್ಧರಿಸಲು ಈ ಪಂದ್ಯ ಸಾಕಷ್ಟು ಪೈಪೋಟಿಗೆ ಕಾರಣವಾಗಲಿದ್ದು, ಟೂರ್ನಿಯಲ್ಲಿ ಮುನ್ನಡೆಯುತ್ತಿರುವ ತಂಡಕ್ಕೆ ಈ ಗೆಲುವು ಸ್ಥೈರ್ಯ ತುಂಬಲಿದೆ. ಪಂದ್ಯ ವೀಕ್ಷಣೆಗಾಗಿ ದೇಶ- ವಿದೇಶಗಳಿಂದ ಅಭಿಮಾನಿಗಳು ಈಗಾಗಲೇ ಸ್ಟೇಡಿಯಂನತ್ತ ಹೆಜ್ಜೆ ಹಾಕುತ್ತಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap