ಗುವಾಹಟಿ:
ಎರಡನೇ ಟೆಸ್ಟ್ ಗೆಲ್ಲುವ ಭಾರತ ತಂಡ ಕನಸು ದೂರವಾಗುತ್ತಿದೆ. ಅದೇ ರಾಗ, ಅದೇ ತಾಳ ಎಂಬಂತೆ ಟೀಮ್ ಇಂಡಿಯಾದ ಬ್ಯಾಟಿಂಗ್ ವೈಫಲ್ಯ ಗುವಾಹಟಿ ಟೆಸ್ಟ್‌ನಲ್ಲಿಯೂ ಮುಂದುವರಿದಿದೆ. ಮಾರ್ಕೊ ಯೆನ್ಸನ್ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಭಾರತ ತಂಡ, ಎರಡನೇ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್‌ನಲ್ಲಿ ಕೇವಲ 201 ರನ್‌ಗಳಿಗೆ ಆಲ್‌ಔಟ್ ಆಯಿತು. ಇದರೊಂದಿಗೆ ಟೀಮ್ ಇಂಡಿಯಾ ಬೃಹತ್ ಮೊತ್ತದ ಹಿನ್ನಡೆಯನ್ನು ಅನುಭವಿಸಿದೆ. ಭಾರತದ ಪರ ಯಶಸ್ವಿ ಜೈಸ್ಬಾಲ್ (58) ಹಾಗೂ ವಾಷಿಂಗ್ಟನ್ ಸುಂದರ್ (48) ಅವರನ್ನು ಹೊರತುಪಡಿಸಿ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಹರಿಣ ಪಡೆಯ ಬೌಲಿಂಗ್ ಎದುರು ಮಕಾಡೆ ಮಲಗಿದರು.








