ಭಾರತ ಮೋದಿ ಮತ್ತು ಮೋಹನ್ ಭಾಗವತ್‌ಗೆ ಸೇರಿದ್ದಂತೆ ಮಹಮೂದ್ ಗೂ ಸೇರಿದೆ
ನವದೆಹಲಿ:
ಇಸ್ಲಾಂ ಧರ್ಮವು ಹೊರಗಿನಿಂದ ಬಂದ ಧರ್ಮ ಎಂದು ಹೇಳುವುದು ತಪ್ಪು ಮತ್ತು ಆಧಾರ ರಹಿತ ವಾಗಿದೆ. ಇಸ್ಲಾಂ ಧರ್ಮವು ಎಲ್ಲಾ ಧರ್ಮಗಳಲ್ಲಿ ಅತ್ಯಂತ ಹಳೆಯ ಧರ್ಮವಾಗಿದೆ. ಹಿಂದಿ ಮುಸ್ಲಿಮರಿಗೆ ಭಾರತ ಅತ್ಯುತ್ತಮ ದೇಶ ಎಂದು ಜಮೀಯತ್ ಉಲೇಮಾ-ಎ-ಹಿಂದ್ ಮುಖ್ಯಸ್ಥ ಮಹಮೂದ್ ಮದನಿ ಪ್ರತಿಪಾದಿಸಿದ್ದಾರೆ.
ಭಾರತ ದೇಶ ಪ್ರಧಾನಿ ನರೇಂದ್ರ ಮೋದಿ ಮತ್ತು ಮೋಹನ್ ಭಾಗವತ್‌ಗೆ ಸೇರಿದ್ದಂತೆ ಮಹಮೂದ್‌ಗೆ ಕೂಡ ಸೇರಿದೆ ಎಂದು ಜಮಿಯತ್ ಉಲೇಮಾ-ಎ-ಹಿಂದ್ ಮುಖ್ಯಸ್ಥ ಮಹಮೂದ್ ಮದನಿ ಹೇಳಿಕೆ ನೀಡಿದ್ದಾರೆ. ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ 34ನೇ ಸಾಮಾನ್ಯ ಅಧಿವೇಶನವನ್ನು ಉದ್ದೇಶಿಸಿ ಮದನಿ ಈ ಹೇಳಿಕೆ ನೀಡಿದ್ದಾರೆ.
ಜಮಿಯತ್ ಉಲೇಮಾ-ಎ-ಹಿಂದ್ ಮುಖ್ಯಸ್ಥರಾಗಿರುವ ಮದನಿ, ಭಾರತವು ಮುಸ್ಲಿಮರ ಮೊದಲ ತಾಯ್ನಾಡು ಎಂದು ಹೇಳಿದರು. ಇಸ್ಲಾಂ ಹೊರಗಿನಿಂದ ಬಂದ ಧರ್ಮ ಎಂದು ಹೇಳುವುದು ಆಧಾರ ರಹಿತ. ಭಾರತವು ಹಿಂದೂ ಮುಸ್ಲಿಮರಿಗೆ ಅತ್ಯಂತ ಪವಿತ್ರ ದೇಶ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








