ಬೀಜಿಂಗ್:
ಭಾರತ-ಚೀನ ನಡುವೆ ಸಂಬಂಧ ತೀರಾ ಬಿಗಡಾಯಿಸಿರುವ ಈ ಹೊತ್ತಿನಲ್ಲಿ ಚೀನ ವಿದೇಶಾಂಗ ಸಚಿವ ವಾಂಗ್ ಯೀ ಸ್ನೇಹದ ಮಾತಾಡಿದ್ದಾರೆ.
ಎರಡೂ ದೇಶಗಳು ಪರಸ್ಪರ ಶತ್ರುತ್ವ ಸಾಧಿಸಿ, ಶಕ್ತಿಯನ್ನು ಅಪವ್ಯಯ ಮಾಡಿಕೊಳ್ಳುವುದರ ಬದಲು, ಪರಸ್ಪರ ನೆರವಿಗೆ ನಿಲ್ಲಬೇಕು.ಅದರಿಂದ ಉನ್ನತ ಗುರಿ ಸಾಧಿಸಬೇಕು ಎಂದಿದ್ದಾರೆ.
ಸದಾ ಕಾಲು ಕೆರೆದುಕೊಂಡು ಜಗಳ ಮಾಡುವ ಚೀನಾದಿಂದ ಈ ಹೇಳಿಕೆ ಹೊರಬಿದ್ದಿರುವುದು ಅಚ್ಚರಿ ಮೂಡಿಸಿದೆ. ಬೀಜಿಂಗ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಾಂಗ್ ಯೀ, ಇತ್ತೀಚೆಗಿನ ವರ್ಷಗಳಲ್ಲಿ ಎರಡೂ ದೇಶಗಳ ನಡುವೆ ವೈರತ್ವ ಹೆಚ್ಚಿದೆ. ಕೆಲವು ಶಕ್ತಿಗಳು ಎರಡರ ನಡುವೆ ಸಂಘರ್ಷ ತಂದು, ಅಂತರ ಹೆಚ್ಚಿಸಲು ಯತ್ನಿಸುತ್ತಿವೆ ಎಂದು ಆರೋಪಿಸಿದ್ದಾರೆ.
2020ರಲ್ಲಿ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನ ಸೈನಿಕರ ನಡುವೆ ಘರ್ಷಣೆಯಾಗಿತ್ತು. ಅದರ ನಂತರ ಚೀನ ಕಂಪನಿಗಳ ಮೇಲೆ ಭಾರತ ಬಹಳ ನಿರ್ಬಂಧ ಹೇರಿದೆ. 100ಕ್ಕೂ ಅಧಿಕ ಆಯಪ್‌ಗ್ಳನ್ನು ನಿಷೇಧಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ