ನವದೆಹಲಿ :
ದೇಶದಲ್ಲಿ ಶುಕ್ರವಾರ ಒಂದೇ ದಿನ 27 ಸಾವಿರಕ್ಕೂ ಅಧಿಕ ಕೊರೋನ ವೈರಸ್ ಸೋಂಕು ಪ್ರಕರಣಗಳು ದಾಖಲಾಗಿವೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದ್ದು, ಶುಕ್ರವಾರ ಒಂದೇ ದಿನ 27,114 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಇದೇ ವೇಳೆ 519 ಮಂದಿ ಕೊರೋನಾಗೆ ಬಲಿಯಾಗುವುದರೊಂದಿಗೆ ಸಾವಿನ ಸಂಖ್ಯೆ 22,123 ಕ್ಕೆ ತಲುಪಿದೆ.
India's COVID19 case tally crosses 8 lakh mark with 519 deaths and highest single-day spike of 27,114 new cases in the last 24 hours. Total positive cases stand at 8,20,916 including 2,83,407 active cases, 5,15,386 cured/discharged/migrated 22,123 deaths: Ministry of Health pic.twitter.com/zTiIgOyMxb
— ANI (@ANI) July 11, 2020
ಒಟ್ಟು ಪಾಸಿಟಿವ್ ಪ್ರಕರಣಗಳ ಸಂಖ್ಯೆ 8,20,916 ಕ್ಕೆ ಏರಿದೆ. ಈವರೆಗೆ ಕೊರೋನಾದಿಂದ ಗುಣ ಆದವರು 4,95,513 ಜನ ಮಾತ್ರ. ದೇಶದಲ್ಲಿ ಇನ್ನೂ 2,83,407 ಜನರಲ್ಲಿ ಕೊರೊನಾ ಸಕ್ರಿಯವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ