ನವದೆಹಲಿ
ವಿಶ್ವದ ಕೆಲವೊಂದು ಸಂಸ್ಥೆಗಳು ನಡೆಸುವ ಸರ್ವೆಗಳಲ್ಲಿ ಒಂದಾದ ಅಂತಾರಾಷ್ಟ್ರೀಯ ಬೌದ್ಧಿಕ ಆಸ್ತಿ ಸೂಚ್ಯಂಕ ಸರ್ವೆಯಲ್ಲಿ ಭಾರತ 42 ನೇ ಸ್ಥಾಕ್ಕೆ ಕುಸಿದಿದೆ. 2014 ರಲ್ಲಿ 25 ದೇಶಗಳ ಪಟ್ಟಿಯಲ್ಲಿ ಭಾರತ 25 ನೇ ಸ್ಥಾನದಲ್ಲಿತ್ತು.
ವಾರ್ಷಿಕ ಅಂತಾರಾಷ್ಟ್ರೀಯ ಬೌದ್ಧಿಕ ಆಸ್ತಿ ಸೂಚ್ಯಂಕ 2023 ಅನ್ನು ಫೆಬ್ರವರಿ 21 ರಂದು ಪ್ರಕಟಿಸಲಾಗಿದ್ದು ಜಗತ್ತಿನ 55 ಮುಂಚೂಣಿಯಲ್ಲಿರುವ ಆರ್ಥಕತೆಗಳಲ್ಲಿ ಬೌದ್ಧಿಕ ಆಸ್ತಿಗಳ ಹಕ್ಕುಗಳ ರಕ್ಷಣೆಯನ್ನು ಅದು ಮೌಲ್ಯಮಾಪನ ಮಾಡುತ್ತದೆ. ಪೇಟೆಂಟ್‌ನಿಂದ ಹಿಡಿದು ಕಾಪಿರೈಟ್ ಕಾನೂನುಗಳು ಹಾಗೂ ಬೌದ್ಧಿಕ ಆಸ್ತಿಗಳ ನಗದೀಕರಣ ಮತ್ತು ಅಂತಾರಾಷ್ಟ್ರೀಯ ಒಪ್ಪಂದಗಳಿಗೆ ಬದ್ಧತೆಯ ಕುರಿತು ಪರಿಶೀಲಿಸಿ ಈ ಸೂಚ್ಯಂಕವನ್ನು ಸಿದ್ಧಪಡಿಸಲಾಗುತ್ತದೆ.
ಇನ್ನು ಪ್ರಕಟವಾಗಿರುವ ವರದಿಯ ಪ್ರಕಾರ ಮೊರೊಕ್ಕೋ, ಥಾಯ್ಲಂಡ್ ಮತ್ತು ವಿಯೆಟ್ನಾಂ ಸುಧಾರಣೆ ಕಂಡಿವೆ ಎಂದು ಸರ್ವೆ ತಿಳಿಸಿದೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
