ಮಧುಗಿರಿ : ನೆಲದ ಮೇಲೆ ಬಿದ್ದ ತ್ರಿವರ್ಣ ಧ್ವಜ

 ಮಧುಗಿರಿ : 

      ಗ್ರಾಮಪಂಚಾಯತಿ ಸಿಬ್ಬಂದಿಯ ಅಜಾಗರೂಕತೆಯಿಂದಾಗಿ ಪಂಚಾಯತಿ ಕಾರ್ಯಾಲಯದ ಮೇಲ್ಭಾಗದಲ್ಲಿ ಅಳವಡಿಸಿದ್ದ ತ್ರಿವರ್ಣ ರಾಷ್ಟ್ರಧ್ವಜವು ಉರುಳಿ ನೆಲದ ಮೇಲೆ ಬಿದ್ದು ಕೆಲ ಘಂಟೆಗಳು ಕಳೆದರೂ ಸರಿಪಡಿಸುವ ಗೋಜಿಗೆ ಯಾರೂ ಮುಂದಾಗದಿರುವುದು ವಿಪರ್ಯಾಸ.

      ತಾಲ್ಲೂಕಿನ ಕಸಬಾ ವ್ಯಾಪ್ತಿಯ ಬಿಜಾವರ ಗ್ರಾಮದಲ್ಲಿ ಪಂಚಾಯತಿ ಕಾರ್ಯಾಲಯದ ಮೇಲ್ಭಾಗದಲ್ಲಿ ಪತ್ರಿ ನಿತ್ಯ ಧ್ವಜವನ್ನು ಸರಕಾರದ ನಿಯಮಾವಳಿಗಳಿಂತೆ ಹಾರಿಸಲಾಗುವುದು. ಅದರಂತೆ ಕನಕ ಜಯಂತಿಯ ದಿನದಂದೂ ಪಂಚಾಯಿತಿ ಸಿಬ್ಬಂದಿವರ್ಗದವರು ಧ್ವಜವನ್ನು ಹಾರಿಸಿದ್ದರು. ಆದರೆ ಇದ್ದಕ್ಕಿದ್ದಂತೆ ಕೆಲ ಹೊತ್ತಿನಲ್ಲಿ ಧ್ವಜವು ಕಂಬದ ಸಮೇತ ಮುರಿದು ನೆಲಕ್ಕೆ ಬಿದ್ದಿದೆ.

      ರಾಷ್ಟ್ರಧ್ವಜ ಮತ್ತು ಕಂಬವು ನೆಲಕ್ಕೆ ಬಿದ್ದು ಕೆಲ ಗಂಟೆಗಳೆ ಕಳೆದರೂ ಅದನ್ನು ಸರಿಪಡಿಸುವ ಕಾರ್ಯಕ್ಕೆ ಸಿಬ್ಬಂದಿವರ್ಗವರು ಮುಂದಾಗಿಲ್ಲ. ಈ ಬಗ್ಗೆ ಸಾರ್ವಜನಿಕರು ಪಿಡಿಓ ಮತ್ತು ಅಲ್ಲಿನ ಸಿಬ್ಬಂದಿ ವರ್ಗದವರಿಗೆ ಕರೆ ಮಾಡಿದ ಕೆಲ ಘಂಟೆಗಳ ಬಳಿಕ ಸ್ಥಳಕ್ಕೆ ಬಂದು ಧ್ವಜವನ್ನು ಸರಿಪಡಿಸಲು ಮುಂದಾಗಿದ್ದಾರೆ.

      ಇಲ್ಲಿನ ಪಿಡಿಓ ಸರಿಯಾಗಿ ಗ್ರಾಮಸ್ಥರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಆರೋಪವು ಗ್ರಾಮಸ್ಥರಿಂದ ಕೇಳಿ ಬಂದಿದೆ. ಪಿಡಿಓ ಮತ್ತು ಸಿಬ್ಬಂದಿಯ ಅಜಾಗರೂಕತೆಯಿಂದಾಗಿ ನಮ್ಮ ದೇಶದ ಹೆಮ್ಮೆಯ ಪ್ರತೀಕವಾದ ಬಾವುಟ ನೆಲಕ್ಕೆ ಉರುಳಿ ಬಿದ್ದಿದೆ. ಸುಭದ್ರವಾಗಿದ್ದ ಪೈಪ್ ಹೇಗೆ ಮುರಿದು ನೆಲಕ್ಕೆ ಉರುಳಿದೆ ಎಂದು ಪ್ರಜ್ಞಾವಂತರು ಪ್ರಶ್ನಿಸಿದರೆ ಮಂಗಗಳು ಕಿತ್ತು ಹಾಕಿವೆ. ಮೇಲೆ ಪೈಪ್‍ಗೆ ಅಳವಡಿಸಿದ್ದ ಕ್ಲಾಂಪ್‍ಗಳು ತುಂಡಾಗಿ ಬಿದ್ದಿವೆ ಎಂಬ ಹಾರೈಕೆ ಉತ್ತರವನ್ನು ಅಲ್ಲಿನ ಸಿಬ್ಬಂದಿವರ್ಗದವರು ನೀಡುತ್ತಿದ್ದಾರೆ. ಮಾಡುವ ತಪ್ಪುಗಳನ್ನು ತಿದ್ದಿಕೊಳ್ಳಲಾಗದವರು, ಮಾತು ಬಾರದ ಮೂಕ ಪ್ರಾಣಿಗಳ ಮೇಲೆ ಆರೋಪಿಸುವುದು ಸರಿಯಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap