ರಕ್ಷಣಾ ರಫ್ತಿನಲ್ಲಿ ಭಾರತದಿಂದ ಹೊಸ ಮೈಲಿಗಲ್ಲು ಸಾಧನೆ : ರಾಜನಾಥ್‌ ಸಿಂಗ್‌

ನವದೆಹಲಿ:

       ವಿಶ್ವದಲ್ಲಿ ಒಂಧು ದೇಶ ಸರ್ವತೋಮುಖವಾಗಿ ಬೆಳವಣಿಗೆಯಾಗುತ್ತಿದೆ ಎಂದರೆ ಅದರಲ್ಲಿ  ರಕ್ಷಣಾ ವಲಯದ ಬೆಳವಣಿಗೆಯೂ ಸೇರಿರುತ್ತದೆ ಅಂದರೆ ನಮ್ಮ ದೇಶದಲ್ಲಿ ಅಭಿವೃದ್ದೀ ಪಡಿಸಿದ ರಕ್ಷಣಾ ಪರಿಕರಗಳನ್ನು ಬೇರೆ ದೇಶಕ್ಕೆ ಮಾರಾಟಮಾಡಿ ಅದರಿಂದ ಲಾಭಗಳಿಸಿದರೆ ಅದರಿಂದ ನಮಗೂ ಜಾಗತಿಕವಾಗಿ ಗೌರವ ಹಾಗು ಬೆಲೆ ಇರುತ್ತದೆ ಈ ಮಾಡುವ ವಿಶ್ವದ ಕೆಲವೇ ದೇಶಗಳ ಪಟ್ಟಿಗೆ ಇತ್ತೀಚೆಗಷ್ಟೆ ಭಅರತವೂ ಸೇರ್ಪಡೆಯಾಗಿದೆ .2022-23ನೇ ಸಾಲಿನಲ್ಲಿ 15,920 ಕೋಟಿ ರೂ ಮೌಲ್ಯದ ರಕ್ಷಣಾ ಪರಿಕರಗಳನ್ನು ವಿವಿಧ ದೇಶಗಳಿಗೆ ರಫ್ತು ಮಾಡಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಹಿತಿ ನೀಡಿದ್ದಾರೆ.

2022–23ನೇ ಹಣಕಾಸು ವರ್ಷದಲ್ಲಿ ಭಾರತವು 15,920 ರೂ ಕೋಟಿ ಮೌಲ್ಯದ ರಕ್ಷಣಾ ಪರಿಕರಗಳನ್ನು ರಫ್ತು ಮಾಡಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹೇಳಿದ್ದಾರೆ. 

‘2022–2023ನೇ ಹಣಕಾಸು ವರ್ಷದಲ್ಲಿ ಭಾರತದ ರಕ್ಷಣಾ ರಫ್ತು ಸಾರ್ವಕಾಲಿಕ ದಾಖಲೆಯಾದ 15,920 ಕೋಟಿ ರೂಗೆ ತಲುಪಿದೆ. ಇದು ದೇಶದ ಗಮನಾರ್ಹ ಸಾಧನೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಸ್ಫೂರ್ತಿದಾಯಕ ನಾಯಕತ್ವದಲ್ಲಿ ನಮ್ಮ ರಕ್ಷಣಾ ರಫ್ತು ಬೆಳೆಯುತ್ತಲೇ ಇರುತ್ತದೆ‘ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

2021-22 ರಲ್ಲಿ 12,814 ಕೋಟಿ ರೂ ಮೌಲ್ಯದ ರಕ್ಷಣಾ ಪರಿಕರಗಳು ರಫ್ತಾಗಿದ್ದರೆ, 2020–21ರಲ್ಲಿ ಇದರ ಪ್ರಮಾಣ  8,434 ಕೋಟಿ ಇತ್ತು. 2019–20 ರಲ್ಲಿ 9,115 ಕೋಟಿ ರೂ ಮೌಲ್ಯದಷ್ಟು ರಫ್ತಾಗಿದ್ದರೆ, 2018-19ರಲ್ಲಿ 10,745 ಕೋಟಿ ರೂ ಮೌಲ್ಯದಷ್ಟು ರಕ್ಷಣಾ ‍ಪರಿಕರಗಳನ್ನು ಭಾರತ ವಿದೇಶಗಳಿಗೆ ಮಾರಾಟ ಮಾಡಿತ್ತು. 2024–25ರ ವೇಳೆಗೆ ₹ 1,75,000 ಕೋಟಿಯ ರಕ್ಷಣಾ ಸಾಮಗ್ರಿಗಳ ಉತ್ಪಾದನೆ ಹಾಗೂ 35,000 ಕೋಟಿ ರೂನಷ್ಟು ರಫ್ತು ಮಾಡುವ ಗುರಿ ಹಾಕಿಕೊಳ್ಳಲಾಗಿದೆ.

2024-25ರ ವೇಳೆಗೆ 1,75,000 ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಯಂತ್ರಾಂಶ ತಯಾರಿಕೆ ಮತ್ತು ರಕ್ಷಣಾ ರಫ್ತುಗಳನ್ನು 35,000 ಕೋಟಿ ರೂಪಾಯಿಗೆ ತೆಗೆದುಕೊಳ್ಳುವ ಗುರಿಯನ್ನು ಸರ್ಕಾರ ಹೊಂದಿದೆ. ಕಳೆದ ಕೆಲವು ವರ್ಷಗಳಲ್ಲಿ, ದೇಶೀಯ ರಕ್ಷಣಾ ಉತ್ಪಾದನೆಯನ್ನು ಉತ್ತೇಜಿಸಲು ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap