ನವದೆಹಲಿ:
ಇಡೀ ವಿಶ್ವದಲ್ಲೇ ಭಾರತದಲ್ಲಿ ಅತಿಹೆಚ್ಚು ಬಾರಿ ಇಂಟರ್ನೆಟ್ ಸೇವೆ ಸ್ಥಗಿತಗೊಂಡಿದೆ ಎಂದು ವರದಿಯೊಂದು ತಿಳಿಸಿದೆ. 2021 ರಲ್ಲಿ 106 ಘಟನೆಗಳ ಸಂಬಂಧ ಇಂಟರ್ನೆಟ್ ಸೇವೆಯನ್ನು ನಿಲ್ಲಿಸಲಾಗಿದ್ದು, ಇದು ನಾಲ್ಕನೇ ವರ್ಷಕ್ಕೂ ಮುಂದುವರೆದಿದೆ ಎಂದು ಪಾಲಿಸಿ ಥಿಂಕ್ ಟ್ಯಾಂಕ್, ಆಕ್ಸೆಸ್ ನೌ ವರದಿ ತಿಳಿಸಿದೆ.
2021 ರಲ್ಲಿ ಇಡಿ ಪ್ರಪಂಚದಲ್ಲಿ 182 ಬಾರಿ ಇಂಟರ್ನೆಟ್ ಸೇವೆ ಸ್ಥಗಿತಗೊಂಡಿದೆ. ಅದರಲ್ಲಿ 106 ಬಾರಿ ಭಾರತದಲ್ಲಿ ಸ್ಥಗಿತಗೊಳಿಸಲಾಗಿದೆ. ಅದರಲ್ಲೂ 85 ಬಾರಿ ಜಮ್ಮುಕಾಶ್ಮೀರದಲ್ಲಿನ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಕಾರಣ ಸ್ಥಗಿತಗೊಳಿಸಲಾಗಿತ್ತು ಎಂದು ತಿಳಿದು ಬಂದಿದೆ.
ಈ ಸಂದಿಗ್ಥತೆಗೆ ಒಳಗಾದ 34 ರಾಷ್ಟ್ರಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಮ್ಯಾನ್ಮರ್ ಎರಡನೇ ಸ್ಥಾನದಲ್ಲಿದ್ದು, 15 ಬಾರಿ ಈ ಪ್ರಕ್ರಿಯೆಗೆ ಒಳಗಾಗಿದೆ. ಇನ್ನು ಸುಡಾನ್ ಮತ್ತು ಇರಾನ್ ನಲ್ಲಿ ಐದು ಬಾರಿ ಇಂಟರ್ನೆಟ್ ಸೇವೆಯನ್ನು ನಿಷೇಧಿಸಲಾಗಿತ್ತು. ಇನ್ನು ಅಫ್ಘಾನಿಸ್ತಾನ, ಬಾಂಗ್ಲಾದೇಶ, ಚೀನಾ, ಭಾರತ, ಇಂಡೋನೇಷಿಯಾ, ಮ್ಯಾನ್ಮಾರ್ ಮತ್ತು ಪಾಕಿಸ್ತಾನ ಸೇರಿದಂತೆ ಏಷ್ಯಾ-ಪೆಸಿಫಿಕ್ ಪ್ರದೇಶದ 129 ಸರ್ಕಾರಗಳು ಇಂಟರ್ನೆಟ್ ಸ್ಥಗಿತಗೊಳಿಸುವ ಕ್ರಮವನ್ನು ತೆಗೆದುಕೊಂಡಿದ್ದವು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ