ಅತಿ ಹೆಚ್ಚು ಚಿನ್ನ ಹೊಂದಿರುವ ಟಾಪ್‌ 10 ದೇಶಗಳಲ್ಲಿ ‘ಭಾರತ’ಕ್ಕೂ 8 ಸ್ಥಾನ

ಭಾರತ:

ಚಿನ್ನ ಅಂದ್ರೆ ಎಲ್ಲರಿಗೂ ಚೆನ್ನ. ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ಸಹಾಯವಾಗಬಹುದು ಅನ್ನೋ ಕಾರಣಕ್ಕೆ ಎಲ್ಲಾ ದೇಶಗಳು ಬಂಗಾರವನ್ನು ಸಂಗ್ರಹಿಸಲು ಬಯಸುತ್ತವೆ. ದೇಶದ ಸೆಂಟ್ರಲ್‌ ಬ್ಯಾಂಕ್‌ ನಲ್ಲಿ ಚಿನ್ನದ ನಿಕ್ಷೇಪವನ್ನು ಜಮಾ ಮಾಡುತ್ತವೆ.ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಕೂಡ ಚಿನ್ನವನ್ನು ತಮ್ಮ ಆಸ್ತಿಯಾಗಿ ರಿಸರ್ವ್ ಬ್ಯಾಂಕ್‌ನಲ್ಲಿ ಠೇವಣಿ ಇಡಬೇಕು.

ವಾಸ್ತವವಾಗಿ, ರಾಜಕೀಯ ಬದಲಾವಣೆಗಳು ಚಿನ್ನದ ನಿಕ್ಷೇಪಗಳ ಮೇಲೆ ಯಾವುದೇ ಮಹತ್ವದ ಪರಿಣಾಮವನ್ನು ಬೀರುವುದಿಲ್ಲ, ಹಾಗಾಗಿ ಇದು ಯಾವುದೇ ಇತರ ಆಸ್ತಿಗೆ ಹೋಲಿಸಿದರೆ ಸ್ಥಿರತೆಯನ್ನು ನೀಡುತ್ತದೆ.

ಯಾವ ದೇಶವು ಹೆಚ್ಚು ಚಿನ್ನದ ನಿಕ್ಷೇಪವನ್ನು ಹೊಂದಿದೆಯೋ ಅದು ಆರ್ಥಿಕವಾಗಿ ಹೆಚ್ಚು ಸದೃಢವಾಗಿದೆ. ಜಗತ್ತಿನಲ್ಲಿ ಅಪಾರ ಪ್ರಮಾಣದ ಚಿನ್ನವಿರುವ ಹಲವು ದೇಶಗಳಿವೆ. ಅಮೆರಿಕವು ವಿಶ್ವದ ಅತಿದೊಡ್ಡ ಚಿನ್ನದ ನಿಕ್ಷೇಪವನ್ನು ಹೊಂದಿದೆ. ಪ್ರಪಂಚದಲ್ಲಿ ಅತಿ ಹೆಚ್ಚು ಚಿನ್ನದ ನಿಕ್ಷೇಪವನ್ನು ಹೊಂದಿರುವ ಟಾಪ್-10 ದೇಶಗಳು ಯಾವುವು ಅನ್ನೋದನ್ನು ನೋಡೋಣ.

ಇಂದು ಭಗತ್ ಸಿಂಗ್, ರಾಜಗುರು, ಸುಖದೇವ್ ಬಲಿದಾನ ದಿನ

ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರೋದು ವಿಶ್ವದ ದೊಡ್ಡಣ್ಣ. ಅಮೆರಿಕದ ಬಳಿ 8,133.47 ಟನ್‌ ಚಿನ್ನವಿದೆ. ಅತಿ ಹೆಚ್ಚು ಚಿನ್ನ ಹೊಂದಿರೋ ದೇಶಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಜರ್ಮನಿಯಲ್ಲಿ 3,359.09 ಟನ್‌ ಬಂಗಾರವಿದೆ. ಇಟಲಿಯಲ್ಲಿ 2451.84 ಟನ್‌ ಬಂಗಾರವಿದ್ದು, 3ನೇ ಸ್ಥಾನದಲ್ಲಿದೆ. 2436.35 ಟನ್‌ ಚಿನ್ನವನ್ನು ಸಂಪಾದಿಸಿರುವ ಫ್ರಾನ್ಸ್‌ 4ನೇ ಸ್ಥಾನ ಪಡೆದುಕೊಂಡಿದೆ. ರಷ್ಯಾ ದೇಶದ ಬಳಿ 2298.53 ಟನ್‌ ನಷ್ಟು ಚಿನ್ನವಿದೆ.

ರಷ್ಯಾ ಟಾಪ್‌ ಟೆನ್‌ ಪಟ್ಟಿಯಲ್ಲಿ 5ನೇ ಸ್ಥಾನ ಗಿಟ್ಟಿಸಿಕೊಂಡಿದೆ. 1948.31 ಟನ್‌ ಬಂಗಾರದ ನಿಕ್ಷೇಪ ಹೊಂದಿರೋ ಚೀನಾಕ್ಕೆ 6ನೇ ಸ್ಥಾನ ದೊರೆತಿದೆ. 1040 ಟನ್‌ ಹಳದಿ ಲೋಹವನ್ನು ಸಂಪಾದಿಸಿಕೊಂಡಿರುವ ಸ್ವಿಡ್ಬರ್ಲೆಂಡ್‌ 7ನೇ ಸ್ಥಾನದಲ್ಲಿದೆ.

ಜಪಾನ್‌ ನಲ್ಲೂ ಬಂಗಾರದ ಭಂಡಾರವೇ ಇದೆ. 845.97 ಟನ್‌ ಚಿನ್ನ ಹೊಂದಿರೋ ಜಪಾನ್‌ 8ನೇ ಸ್ಥಾನ ಪಡೆದಿದೆ. ಭಾರತದ ಬಳಿ 743.83 ಟನ್‌ ಚಿನ್ನವಿದ್ದು 9ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದೆ. 612.45 ಟನ್‌ ಚಿನ್ನವನ್ನು ಹೊಂದಿರುವ ನೆದರ್ಲೆಂಡ್‌ 10ನೇ ಸ್ಥಾನದಲ್ಲಿದೆ.

        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap