ಭಾರತಕ್ಕೆ ಮತ್ತೇ ಕಾದಿದೆಯಾ ಕೊರೋನಾ ಕಂಟಕ..! ಈ ಬಗ್ಗೆ ವಿಶ್ವಸಂಸ್ಥೆ ಹೇಳಿದ್ದೇನು..?

ಭಾರತ:

ಕೊರೊನಾ ವೈರಸ್ ಮತ್ತೊಮ್ಮೆ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಚೀನಾ ಮತ್ತು ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲಿ ಇತ್ತೀಚೆಗೆ ಕೊರೋ ನಾ ಅಬ್ಬರ ಮತ್ತಷ್ಟು ಹೆಚ್ಚಿತ್ತು.. ಕೊರೊನಾ ವೈರಸ್​ನ ಡೆಲ್ಟಾಕ್ರಾನ್ ಹೊಸ ರೂಪಾಂತರವು ಸಧ್ಯ ಹೊರಹೊಮ್ಮಿದೆ. ಈ ಹೊಸ ವೈರಸ್ ಡೆಲ್ಟಾ ಮತ್ತು ಒಮೈಕ್ರಾನ್ ರೂಪಾಂತರಗಳಿಂದ ಕೂಡಿದೆ ಎಂದು ಹೇಳಲಾಗುತ್ತದೆ.

ಈ ಹೊಸ ಡೆಲ್ಟಾಕ್ರಾನ್ ರೂಪಾಂತರದ ಕೆಲವು ಪ್ರಕರಣಗಳು ಕೆಲವು ಯುರೋಪಿಯನ್ ದೇಶಗಳಾದ ಫ್ರಾನ್ಸ್, ನೆದರ್ಲ್ಯಾಂಡ್ಸ್ ಮತ್ತು ಡೆನ್ಮಾರ್ಕ್ ನಲ್ಲಿ ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ.

ಭಾರತದಲ್ಲಿ ಮತ್ತೆ ಹೆಚ್ಚಿದ ಕೊರೊನಾ ಆತಂಕ..!

ಆದಾಗ್ಯೂ, ಇಲ್ಲಿಯವರೆಗೆ ಈ ರೂಪಾಂತರದ ಕೆಲವೇ ಪ್ರಕರಣಗಳು ಬೆಳಕಿಗೆ ಬಂದಿದೆ.. ಆದ್ದರಿಂದ ಈ ರೂಪಾಂತರವು ಎಷ್ಟು ಅಪಾಯಕಾರಿ ಅಥವಾ ಅದು ಎಷ್ಟು ಸುಲಭವಾಗಿ ಹರಡಬಹುದು ಎಂಬುದರ ಬಗ್ಗೆ ವಿಜ್ಞಾನಿಗಳಿಗೆ ಇನ್ನೂ ತಿಳಿದಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯ (ಕೋವಿಡ್-19) ತಂತ್ರಜ್ಞಾನದ ಮುಖ್ಯಸ್ಥೆ ಮಾರಿಯಾ ವ್ಯಾನ್ ಕೆರ್ಖೋವ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ,

ಈ ಹೊಸ ರೂಪಾಂತರದ ತೀವ್ರತೆಯಲ್ಲಿ ಯಾವುದೇ ಬದಲಾವಣೆಯನ್ನು ನಾವು ನೋಡಿಲ್ಲ, ಆದರೆ ಈ ರೂಪಾಂತರವು ಎಷ್ಟು ಅಪಾಯಕಾರಿ ಮತ್ತು ಸಾಂಕ್ರಾಮಿಕ ವಾಗಿದೆ ಎಂಬುದನ್ನು ನೋಡಲು ವಿಜ್ಞಾನಿಗಳು ಅದರ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳಿದರು. ಡಬ್ಲ್ಯೂಹೆಚ್‌ಒದ ವಿಜ್ಞಾನಿಗಳು ಈ ರೂಪಾಂತರದ ಹರಡುವಿಕೆಯ ಬಗ್ಗೆ ಭಯಪಡುತ್ತಿದ್ದಾರೆ.

ಮಾರಿಯಾ ವ್ಯಾನ್ ಕೆರ್ಖೋವ್ ಪ್ರಕಾರ “ನಾವು ಈ ರೂಪಾಂತರದ ಮೇಲೆ ನಿಕಟ ಕಣ್ಣಿಟ್ಟಿದ್ದೇವೆ. ಪ್ರಾಣಿಗಳು ಈ ವೈರಸ್ ನಿಂದ ಸೋಂಕಿಗೆ ಒಳಗಾಗುತ್ತಿದೆ. ಅಂತಹ ರೀತಿಯಲ್ಲಿ ಮಾನವರು ಸಹ ಅದರೊಂದಿಗೆ ಸಂಪರ್ಕಕ್ಕೆ ಬರಬಹುದು. ಸಾಂಕ್ರಾಮಿಕ ರೋಗ ಇನ್ನೂ ಸಂಪೂರ್ಣವಾಗಿ ಮುಗಿದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು..ವಿಶ್ವ ಆರೋಗ್ಯ ಸಂಸ್ಥೆಯು ಕಳೆದ ವಾರ “ಡೆಲ್ಟಾಕ್ರಾನ್” ಅನ್ನು ದೃಢಪಡಿಸಿದೆ.. ಇದು ಡೆಲ್ಟಾ ಮತ್ತು ಒಮೈಕ್ರಾನ್ ರೂಪಾಂತರಗಳೆರಡರಿಂದ ಕೂಡಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

‘ಭಯೋತ್ಪಾದಕ ನಟರನ್ನು ಓಐಸಿ ಪ್ರೋತ್ಸಾಹಿಸುವುದನ್ನು ಭಾರತ ನಿರೀಕ್ಷಿಸುವುದಿಲ್ಲ’

ಇದರಲ್ಲಿ, ವ್ಯಕ್ತಿಯು ಒಂದೇ ಸಮಯದಲ್ಲಿ ಡೆಲ್ಟಾ ಮತ್ತು ಒಮೈಕ್ರಾನ್ ಎಂಬ ಎರಡು ರೂಪಾಂತರಗಳಿಂದ ಸೋಂಕಿಗೆ ಒಳಗಾಗಿರಬಹುದು ಎಂದಿದ್ದಾರೆ.ಈ ರೂಪಾಂತರದ ಸುದ್ದಿಯು ಮೊದಲ ಬಾರಿಗೆ ಜನವರಿ 2022 ರಲ್ಲಿ ಕಾಣಿಸಿಕೊಂಡಿತ್ತು.. ಆಗ ಸೈಪ್ರಸ್ ಸಂಶೋಧಕರೊಬ್ಬರು ಕೊರೊನಾ ವೈರಸ್ ನ ಹೊಸ ತಳಿಯನ್ನು ಪತ್ತೆ ಮಾಡಿದ್ದರು. ಈ ರೂಪಾಂತರದ ದೇಹವು ಡೆಲ್ಟಾದಿಂದ ಮಾಡಲ್ಪಟ್ಟಿದೆ ಮತ್ತು ಸ್ಪೈಕ್ ಅನ್ನು ಒಮೈಕ್ರಾನ್ ನಿಂದ ಸೃಷ್ಟಿಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಈ ಹೊಸ ರೂಪಾಂತರದ ಬಗ್ಗೆ ಇಲ್ಲಿಯವರೆಗೆ ವಿಜ್ಞಾನಿಗಳಿಗೆ ಹೆಚ್ಚಿನ ಮಾಹಿತಿ ಬಂದಿಲ್ಲ. ವಿಜ್ಞಾನಿಗಳ ಪ್ರಕಾರ, ಈ ರೂಪಾಂತರವು ಎಷ್ಟು ಅಪಾಯಕಾರಿ ಮತ್ತು ಸಾಂಕ್ರಾಮಿಕ ವಾಗಿದೆ ಎಂದು ಹೇಳುವುದು ಇನ್ನೂ ಕಷ್ಟ. ಅಂತಹ ಪರಿಸ್ಥಿತಿಯಲ್ಲಿ ಈ ಹೊಸ ವೇರಿಯಂಟ್ ಬಗ್ಗೆ ಮಾಹಿತಿ ಪಡೆಯಲು ನೀವು ಕಾಯಬೇಕಾಗುತ್ತದೆ.

 ಏ. 1 ರಿಂದಲೇ ಆಯವ್ಯಯ ಘೋಷಣೆಗಳ ಅನುಷ್ಠಾನಕ್ಕೆ ಸಿಎಂ ಸೂಚನೆ

ಡಬ್ಲ್ಯೂಹೆಚ್‌ಒ ಪ್ರಕಾರ, ಈ ಹೊಸ ರೂಪಾಂತರದ ತೀವ್ರತೆಯಲ್ಲಿ ಇಲ್ಲಿಯವರೆಗೆ ಯಾವುದೇ ಬದಲಾವಣೆಯನ್ನು ಗಮನಿಸಲಾಗಿದೆ. ಹಾರ್ವರ್ಡ್ ಟಿ.ಎಚ್.ಚಾನ್ ಶಾಲೆಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ವಿಲಿಯಂ ಹೈನ್ಸ್, ರೂಪಾಂತರದ ಹೆಚ್ಚಿನ ಪ್ರಕರಣಗಳು ಇಲ್ಲದಿದ್ದರೆ, ಜನರು ಅದರ ಬಗ್ಗೆ ಹೆದರಬೇಕಾಗಿಲ್ಲ ಎಂದು ಹೇಳಿದರು.

          ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link