ವೈಜ್ಞಾನಿಕವಾಗಿ ಮುಂದಿದ್ದರೂ ಮೌಢ್ಯ ಬಿಡದ ಭಾರತ

ತಿಪಟೂರು:

 ಇಸ್ರೋ ಮಾಜಿ ಅಧ್ಯಕ್ಷ ಡಾ.ಕಿರಣ್‍ಕುಮಾರ್ ಕಳವಳ

        ನಮ್ಮ ದೇಶವು ಬಾಹ್ಯಕಾಶದಲ್ಲಿ ಹಲವಾರು ಸಂಶೋಂಧನೆಗಳನ್ನು ಮಾಡಿ ಅನ್ಯ ದೇಶಗಳ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಮಟ್ಟಕ್ಕೆ ಬೆಳೆದರೂ ನಮ್ಮಲ್ಲಿ ಇನ್ನೂ ಹಲವಾರು ಮೌಢ್ಯಗಳಿರುವುದು ವಿಪರ್ಯಾಸದ ಸಂಗತಿ ಎಂದು ಇಸ್ರೊ ಮಾಜಿ ಅಧ್ಯಕ್ಷ ಡಾ.ಕಿರಣ್‍ಕುಮಾರ್ ತಿಳಿಸಿದರು.

ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಅವರು, ಸಮ್ಮೇಳನದಲ್ಲಿ ಭಾಗವಹಿಸಲು ಶಿವಮೊಗ್ಗಕ್ಕೆ ತೆರಳುವಾಗ ಮಾರ್ಗ ಮಧ್ಯೆ ನಗರದ ಕೌಸ್ತುಭ ಹೋಟೆಲ್‍ನಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಹುಲಿಕಲ್ ನಟರಾಜ್ ಅವರು ಮಾತನಾಡಿ, ಇಸ್ರೋ ವಿಜ್ಞಾನಿ ಡಾ.ಕಿರಣ್‍ಕುಮಾರ್ ಜೊತೆಗೂಡಿ ಮುಂದಿನ ದಿನಗಳಲ್ಲಿ ವಿಜ್ಞಾನ ಮನೆಯನ್ನು ನಿರ್ಮಿಸಿ ಮಕ್ಕಳನ್ನು ಕೃತಕ ಅಂತರಿಕ್ಷದಲ್ಲಿ ಹಾರಿಸಿ ಅವರಿಗೆ ವಿನೂತನ ಅನುಭವಗಳನ್ನು ಮೂಡಿಸುವ ಕಾರ್ಯವನ್ನು ಮಾಡುತ್ತೇವೆ.

ಈ ವಿಜ್ಞಾನ ಭವನವು ನನಗೆ ಮರುಹುಟ್ಟು ನೀಡಿದ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಆಗಬೇಕೆಂಬ ಕನಸು ನನ್ನದಾಗಿದ್ದು, ಅದಕ್ಕಾಗಿ 20 ಎಕರೆ ಜಮೀನು ಬೇಕಾಗಿದೆ. ಸರ್ಕಾರದ ಜೊತೆ ಈ ಕುರಿತು ಮಾತನಾಡುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಕೊರೋನಾ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ನೂರಾರು ರೋಗಿಗಳನ್ನು ಬದುಕಿಸಿದ ತಿಪಟೂರು ಕುಮಾರ್ ಆಸ್ಪತ್ರೆಯ ವೈದ್ಯ ಡಾ.ಶ್ರೀಧರ್ ಅವರಿಗೆ ವೈಜ್ಞಾನಿಕ ಸಮ್ಮೇಳನದಲ್ಲಿ ಸಾಧನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು ಎಂದರು.

ಇಸ್ರೋ ವಿಜ್ಞಾನಿಗಳು ಆಗಮಿಸಿದ ಸಂದರ್ಭಲ್ಲಿ ಅವರನ್ನು ಲೋಕೇಶ್ವರ್ ಅದ್ಧೂರಿಯಾಗಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷ ಸೊಪ್ಪು ಗಣೇಶ್, ಸದಸ್ಯರುಗಳು ಹಾಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ತಿಟಟೂರು ಘಟಕದ ಪದಾಧಿಕಾರಿಗಳು ಹಾಜರಿದ್ದರು.

ಹುಲಿಕಲ್‍ರ ಒತ್ತಾಸೆಗೆ ಜೊತೆಯಾಗುವೆ :

ನಂಬಿಕೆ ಇರಬೇಕು. ಆದರೇ ಮೂಢ ನಂಬಿಕೆ ಇರಬಾರದು. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಹುಲಿಕಲ್ ನಟರಾಜ್ ಅವರು ಜನರಲ್ಲಿ ಮೂಢನಂಬಿಕೆಗಳನ್ನು ತೊಲಗಿಸುವ ಹಲವಾರು ಕಾರ್ಯಕ್ರಗಳನ್ನು ಮಾಡುತ್ತಾ, ಜನರಲ್ಲಿ ಅರಿವು ಮೂಡಿಸುವ ಹಲವಾರು ಕೆಲಸಗಳನ್ನು ಮಾಡುತ್ತಿದ್ದಾರೆ ಹಾಗಾಗಿ ಅವರ ಒತ್ತಾಸೆಗೆ ನಾನಿಂದು ಜೊತೆಯಾಗಿ ನಿಲ್ಲುತ್ತಿದ್ದೇನೆ ಎಂದರು.

ವಿಜ್ಞಾನ ಭವನದ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ತಿಪಟೂರು ಘಟಕದ ಸಹಕಾರ ನಮಗೆ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಗೌರವಾಧ್ಯಕ್ಷ ಲೋಕೇಶ್ವರ್, ಅಧ್ಯಕ್ಷ ಎಸ್.ಎಸ್.ಗಂಗಾಧರ್, ಆಲ್ಬೂರು ಗಂಗಾಧರ್ ಹಾಗೂ ಸಂಘದ ಪದಾಧಿಕಾರಿಗಳ ಜವಾಬ್ದಾರಿ ಹೆಚ್ಚಿನದು.

ಹುಲಿಕಲ್ ನಟರಾಜ್, ಅಧ್ಯಕ್ಷರು
ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap