ಭಾರತ vs ನ್ಯೂಜಿಲೆಂಡ್ ಮಹಿಳಾ ವಿಶ್ವಕಪ್: ವಿಶ್ವದಾಖಲೆ ಸರಿಗಟ್ಟಿದ ಜೂಲನ್ ಗೋಸ್ವಾಮಿ

ಭಾರತ:

             ಭಾರತ ಮಹಿಳಾ ಕ್ರಿಕೆಟ್ ಇಂದು ಮಹಿಳಾ ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ತಂಡದ ವಿರುದ್ಧ ಸೆಣೆಸಾಟ ನಡೆಸುತ್ತಿದೆ. ಈ ಪಂದ್ಯದಲ್ಲಿ ಭಾರತದ ಅನುಭವಿ ವೇಗದ ಬೌಲರ್ ಜೂಲನ್ ಗೋಸ್ವಾಮಿ ವಿಶ್ವಕಪ್ ದಾಖಲೆಯನ್ನು ಸರಿಗಟ್ಟಿದ್ದಾರೆ. ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಜೂಲನ್ ಗೋಸ್ವಾಮಿ ವಿಶ್ವ ದಾಖಲೆಯನ್ನು ಸರಿಗಟ್ಟಿ ಸಾಧನೆ ಮಾಡಿದ್ದಾರೆ.

         ಭಾರತ ಇಂದು ವಿಶ್ವಕಪ್‌ನಲ್ಲಿ ತನ್ನ ಎರಡನೇ ಪಂದ್ಯವನ್ನು ನ್ಯೂಜಿಲೆಂಡ್ ತಂಡದ ವಿರುದ್ಧ ಆಡುತ್ತಿದೆ. ಈ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡವನ್ನು ಭಾರತ 160 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದೆ. ಭಾರತ ತಂಡದ ಪರವಾಗಿ ಪೂಜಾ ವಸ್ತ್ರೇಕರ್ ಅದ್ಭುತ ಬೌಲಿಂಗ್ ದಾಳಿ ನಡೆಸಿದ್ದು ನಾಲ್ಕು ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಜೂಲನ್ ಗೋಸ್ವಾಮಿ ಒಂದು ವಿಕೆಟ್ ಪಡೆಯುವ ಮೂಲಕ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದಾರೆ.

ಮಹಿಳಾ ವಿಶ್ವಕಪ್‌ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ದಾಖಲೆ ಆಸ್ಟ್ರೇಲಿಯಾದ ಲಿನ್ ಫುಲ್‌ಸ್ಟನ್ ಅವರ ಹೆಸರಿನಲ್ಲಿತ್ತು. 1082ರಿಂದ 1988ರ ಅವಧಿಯಲ್ಲಿ ಅವರು ವಿಶ್ವಕಪ್‌ನಲ್ಲಿ 39 ವಿಕೆಟ್ ಪಡೆದು ದಾಖಲೆ ಬರೆದಿದ್ದರು. ಈ ದಾಖಲೆಯನ್ನು ಈವರೆಗೂ ಯಾರಿಂದಲೂ ಮುರಿಯಲು ಸಾಧ್ಯವಾಗಿರಲಿಲ್ಲ. ಇದೀಗ ಭಾರತದ ಅನುಭವಿ ವೇಗಿ ಜೂಲನ್ ಗೋಸ್ವಾಮಿ ಈ ದಾಖಲೆಯನ್ನು ಸರಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ನ್ಯೂಝಿಲೆಂಡ್ ವಿರುದ್ಧಧ ಪಂದ್ಯದಲ್ಲಿ ಜೂಲನ್ ಗೋಸ್ವಾಮಿ 9 ಓವರ್‌ಗಳ ಬೌಲಿಂಗ್ ನಡೆಸಿದ್ದು ಒಂದು ಮೇಡನ್ ಓವರ್ ಸಹಿತ ಕೇವಲ 41 ರನ್ ಮಾತ್ರವೇ ನೀಡಿದ್ದಾರೆ. 41 ರನ್‌ಗಳಿಸಿ ಮುನ್ನುಗ್ಗುತ್ತಿದ್ದ ಕಾಟೇಯ್ ಮಾರ್ಟಿನ್ ಅವರನ್ನು ಗೋಸ್ವಾಮಿ ಬೌಲ್ಡ್ ಮಾಡುವ ಮೂಲಕ ಈ ಸಾಧನೆ ಮಾಡಿದ್ದಾರೆ.

ಇನ್ನು ಇಂಡು ನಡೆಯುತ್ತಿರುವ ಕಿವೀಸ್ ವಿರುದ್ಧದ ಪಂದ್ಯದಲ್ಲಿ ಭಾರತದ ಬೌಲಿಂಗ್‌ನಲ್ಲಿ ಪೂಜಾ ವಸ್ತ್ರೇಕರ್ ಬೌಲಿಂಗ್ ದಾಳಿ ಅದ್ಭುತವಾಗಿತ್ತು. ಒಂದು ಹಂತದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಸನಿಹದಲ್ಲಿದ್ದರು ವಸ್ತ್ರೇಕರ್. ಸತತ ಎರಡು ಎಸೆತಗಳಲ್ಲಿ ಕಿವೀಸ್ ತಂಡದ ಇಬ್ಬರು ಬ್ಯಾಟರ್‌ಗಳನ್ನು ತಮ್ಮ ಅದ್ಭುತ ಯಾರ್ಕರ್‌ಗಳ ಮೂಲಕ ಫೆವಿಲಿಯನ್‌ಗೆ ಅಟ್ಟಿದ್ದರು.

ಪಾಕಿಸ್ತಾನದಲ್ಲಿ ವಿರಾಟ್ ಕ್ರೇಜ್ ಯಾವ ಲೆವೆಲ್ ಗಿದೆ ನೋಡಿ :

ಭಾರತ ಬೌಲಿಂಗ್‌ನಲ್ಲಿ ಕಿವೀಸ್ ವಿರುದ್ಧ ಅದ್ಭುತ ಪ್ರದರ್ಶನ ನಿಡುವಲ್ಲಿ ಯಶಸ್ವಿಯಾಗಿದೆ. ಪೂಜಾ ವಸ್ತ್ರೇಕರ್ 4 ವಿಕೆಟ್ ಪಡೆದರೆ ರಾಜೇಶ್ವರಿ ಗಾಯಕ್ವಾಡ್‌ಗೆ ಎರಡು ವಿಕೆಟ್‌ಗಳು ಬಿದ್ದಿತು.

ಜೂಲನ್ ಗೋಸ್ವಾಮಿ ಹಾಗೂ ದೀಪ್ತಿ ಶರ್ಮಾ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ. ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು ನ್ಯೂಜಿಲೆಂಡ್ ಮಹಿಳಾ ತಂಡ 260 ರನ್‌ಗಳಿಸಿದೆ.

      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link