ಬಾರ್ಬಡೋಸ್:
ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಟಿ-20 ವಿಶ್ವಕಪ್ ಸೂಪರ್ 8 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಭಾರತ 47 ರನ್ ಗಳ ಅಂತರದಿಂದ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸೂರ್ಯಕುಮಾರ್ ಯಾದವ್ ಅವರ ಅರ್ಧಶತಕದ ನೆರವಿನಿಂದ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿತು. ಸೂರ್ಯ ಕುಮಾರ್ ಯಾದವ್ ಅವರು 28 ಬಾಲ್ ಗಳಲ್ಲಿ 53 ರನ್ ಗಳಿಸಿದರು.
ಉಳಿದಂತೆ ಹಾರ್ದಿಕ್ ಪಾಂಡ್ಯ 32, ವಿರಾಟ್ ಕೊಹ್ಲಿ 24, ರಿಷಭ್ 20, ಅಕ್ಷರ ಪಟೇಲ್ 12, ರೋಹಿತ್ ಶರ್ಮಾ 8, ಅರ್ಷದೀಪ್ 2 ರನ್ ಗಳಿಸಿದರು. ಅಫ್ಘಾನ್ ಪರ ಫಜಲ್ ಹಕ್ ಫರೂಕಿ ಹಾಗೂ ನಾಯಕ ರಶೀದ್ ಖಾನ್ ತಲಾ 3 ವಿಕೆಟ್ ಪಡೆದರು. ನವೀನ್ ಉಲ್ ಹಕ್ ಒಂದು ವಿಕೆಟ್ ಪಡೆದರು.
ಭಾರತ ನೀಡಿದ 182 ರನ್ ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಅಫ್ಘಾನಿಸ್ತಾನ 20 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 134 ರನ್ ಗಳಿಸಲಷ್ಟೇ ಶಕ್ತವಾಯಿತು. ಅಫ್ಘಾನಿಸ್ತಾರ ಪರ ರೆಹಮನ್ ವುಲ್ಲಾ ಗುರ್ಬಜ್ 11, ಇಬ್ರಾಹಿಂ ಜರ್ದಾನ್ 8, ಗುಲ್ಬಾದಿನ್ ನೈಬ್ 17, ಅಜ್ಮತುಲ್ಲಾ ಓಮರ್ ಝೈ 26 , ನಜ್ಮುಲ್ಲಾ ಜರ್ದಾನ್ 14 ರನ್ ಗಳಿಸಿದರು. ಉಳಿದ ಆಟಗಾರರು ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾದರು. ಹೀಗಾಗಿ ಭಾರತ 47 ರನ್ ಗಳಿಂದ ಅಫ್ಘಾನಿಸ್ತಾನ ವಿರುದ್ಧ ಗೆಲುವು ಸಾಧಿಸಿತು.
ಭಾರತ ಪರ ಅರ್ಷದೀಪ್ ಸಿಂಗ್ , ಜಸ್ಪ್ರೀತ್ ಬೂಮ್ರಾ ತಲಾ 3 ವಿಕೆಟ್ ಪಡೆದರೆ, ಕುಲದೀಪ್ ಯಾದವ್ 2, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು. ಸೂರ್ಯ ಕುಮಾರ್ ಯಾದವ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು.