ನ್ಯೂಯಾರ್ಕ್:
ಕ್ಯಾಲಿಫೋರ್ನಿಯಾದ ರಾಷ್ಟ್ರೀಯ ಉದ್ಯಾನದಲ್ಲಿ ಭಾರತೀಯ ಮೂಲದ ದಂಪತಿ 800 ಅಡಿ ಪ್ರಪಾತದಿಂದ ಬಿದ್ದು ದುರಂತ ಅಂತ್ಯ ಕಂಡಿದ್ದಾರೆ.
ವಿಷ್ಣು ವಿಶ್ವನಾಥ್ (29) ಮತ್ತು ಮೀನಾಕ್ಷಿ ಮೂರ್ತಿ (30) ಎಂಬ ಜೋಡಿ ಯೂಸೆಮಿಟಿ ನ್ಯಾಷನಲ್ ಪಾರ್ಕ್ನ ಬೆಟ್ಟದ ತುತ್ತತುದಿಯಿಂದ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದು, ಅವರನ್ನು ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ದಂಪತಿ ಎಂದು ಗುರುತಿಸಲಾಗಿದೆ.
ಪ್ರವಾಸದ ಹವ್ಯಾಸ ಹೊಂದಿದ್ದ ದಂಪತಿ ಪ್ರಯಾಣದ ಸಾಹಸದ ಬಗ್ಗೆ ಬರೆದುಕೊಳ್ಳಲೆಂದೇ ‘ಹಾಲಿಡೇಸ್ ಆ್ಯಂಡ್ ಹ್ಯಾಪ್ಪಿಲಿಎವೆರ್‌ಆಫ್ಟರ್’ ಎಂಬ ಬ್ಲಾಗ್ ಪುಟ ಸಹ ನಿರ್ವಹಿಸುತ್ತಿದ್ದರು.
ದಂಪತಿ ಪ್ರಪಾತಕ್ಕೆ ಬಿದ್ದಿರುವುದರ ಕುರಿತು ನಮಗಿನ್ನೂ ಕಾರಣ ತಿಳಿದು ಬಂದಿಲ್ಲ. ಏನು ನಡೆದಿರಬಹುದು ಎಂಬುದನ್ನು ತಿಳಿಯಲು ಪ್ರಯತ್ನಿಸುತ್ತಿದ್ದೇವೆ. ಇದೊಂದು ದುರಂತ’ ಎಂದು ಉದ್ಯಾನವನದ ವಕ್ತಾರ ಜಾಮಿ ರಿಚರ್ಡ್ಸ್ ಪ್ರತಿಕ್ರಿಯಿಸಿದ್ದಾರೆ.
ವಿಷ್ಣು ವಿಶ್ವನಾಥ್ ಮತ್ತು ಮೀನಾಕ್ಷಿ ಮೂರ್ತಿ ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿದ್ದು, 2014ರಲ್ಲಿ ವಿವಾಹವಾಗಿದ್ದರು. 2006ರಿಂದ 2010ರವರೆಗೆ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದರು ಎಂದು ಚೆಂಗನ್ನೂರ್ ಎಂಜಿನಿಯರಿಂಗ್ ಕಾಲೇಜಿನ ಹೆಸರಿನ ಫೇಸ್ಬುಕ್ ಪೋಸ್ಟ್ನಲ್ಲಿ ಬರೆದುಕೊಳ್ಳಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ