ಭಾರತೀಯ ಕಬಡ್ಡಿಗೆ ಕನ್ನಡಿಗ ಬಿ.ಸಿ.ರಮೇಶ್‌ ಆಯ್ಕೆಗಾರ

ನವದೆಹಲಿ: 

   ಭಾರತೀಯ ಅಮೆಚೂರ್‌ ಕಬಡ್ಡಿ ಫೆಡರೇಶನ್‌ (ಎಕೆಎಫ್‌ಐ) ಮೂವರು ಹಿರಿಯ ಕಬಡ್ಡಿ ಪಟುಗಳನ್ನು ಭಾರತ ಪುರುಷರ ತಂಡದ ಆಯ್ಕೆಗಾರರನ್ನಾಗಿ ನೇಮಿಸಿದೆ. ಈ ಸಮಿತಿಯಲ್ಲಿ ಕನ್ನಡಿಗ, ಅರ್ಜುನ ಪ್ರಶಸ್ತಿ ವಿಜೇತ ಬಿ.ಸಿ.ರಮೇಶ್‌ಗೆ(BC Ramesh) ಸ್ಥಾನ ನೀಡಲಾಗಿದೆ.

  ಮುಂಬರುವ ಅಂತಾರಾಷ್ಟ್ರೀಯ ಟೂರ್ನಿಗಳಿಗೆ ಈ ಸಮಿತಿ ಭಾರತ ತಂಡವನ್ನು ಆಯ್ಕೆ ಮಾಡಲಿದೆ. ಬಲ್ವಾನ್‌ ಸಿಂಗ್‌ ಹಾಗೂ ಜೈವೀರ್‌ ಶರ್ಮಾ ಕೂಡ ಆಯ್ಕೆ ಸಮಿತಿಯ ಸದಸ್ಯರಾಗಿದ್ದಾರೆ.

  ಪ್ರೊ ಕಬಡ್ಡಿ ಲೀಗ್‌  ಬೆಂಗಳೂರು ಬುಲ್ಸ್‌ ಫ್ರಾಂಚೈಸಿ ಬಿ.ಸಿ.ರಮೇಶ್‌ಗೆ ಮಹತ್ವದ ಹುದ್ದೆ ನೀಡಿದೆ. ಇತ್ತೀಚೆಗೆ ಅವರನ್ನು ತಂಡದ ಕೋಚ್‌ ಆಗಿ ನೇಮಕ ಮಾಡಿದೆ. ಮುಂದಿನ ಆವೃತ್ತಿಯಿಂದ ಅವರು ಕೋಚಿಂಗ್‌ ನಡೆಸಲಿದ್ದಾರೆ. ರಮೇಶ್‌ ಕೋಚಿಂಗ್‌ನಲ್ಲಿ 2019ರಲ್ಲಿ ಬೆಂಗಾಲ್‌ ವಾರಿಯರ್ಸ್‌ ಚಾಂಪಿಯನ್ ಆಗಿತ್ತು. 

   ಅರ್ಜುನ ಪ್ರಶಸ್ತಿ ಪುರಸ್ಕೃತ, ಭಾರತದ ಮಾಜಿ ಕಬಡ್ಡಿ ಆಟಗಾರರಾಗಿರುವ ಬಿ.ಸಿ.ರಮೇಶ್ ಕುಮಾರ್ ಪ್ರೋ ಕಬಡ್ಡಿ ಲೀಗ್‌ನ ಯಶಸ್ವಿ ಕೋಚ್‌ಗಳಲ್ಲಿ ಒಬ್ಬರು ಎನಿಸಿದ್ದಾರೆ. 2018ರಲ್ಲಿ ಬೆಂಗಳೂರು ಬುಲ್ಸ್ ತಂಡಕ್ಕೆ ಸಹಾಯಕ ಕೋಚ್ ಆಗಿದ್ದ ರಮೇಶ್ ಕುಮಾರ್, ತಂಡ ಚಾಂಪಿಯನ್ ಆಗಿ ಹೊರಹೊಮ್ಮುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Recent Articles

spot_img

Related Stories

Share via
Copy link