ಐತಿಹಾಸಿಕ ಟಿ20 ಸರಣಿ ಗೆದ್ದ ಭಾರತ ಮಹಿಳಾ ತಂಡ…..!

ಮ್ಯಾಂಚೆಸ್ಟರ್‌:

     ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಭಾರತ ಮಹಿಳಾ ತಂಡ ನಾಲ್ಕನೇ ಟಿ20 ಪಂದಲ್ಲಿ ಇಂಗ್ಲೆಂಡ್‌ ವಿರುದ್ಧ 6 ವಿಕೆಟ್‌ ಅಂತರದ ಗೆಲುವು ಸಾಧಿಸಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಂಡಿದೆ. ಇದು ಇಂಗ್ಲೆಂಡ್‌ ನೆಲದಲ್ಲಿ ಭಾರತಕ್ಕೆ ಒಲಿದ ಐತಿಹಾಸಿಕ ಸರಣಿ ಗೆಲುವಾಗಿದೆ. ಆತಿಥೇಯರ ವಿರುದ್ಧದ ಹಿಂದಿನ ಆರು ವಿದೇಶ ಸರಣಿಗಳಲ್ಲಿ ಭಾರತ ವಿಫಲವಾಗಿತ್ತು.

    ಬುಧವಾರ ತಡರಾತ್ರಿ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ ತಂಡ ಆಲ್‌ರೌಂಡರ್‌ ರಾಧಾ ಯಾದವ್ ಅವರ ಸ್ಪಿನ್‌ ಮೋಡಿಗೆ ಪರದಾಡಿ 7 ವಿಕೆಟ್‌ಗೆ 126 ರನ್‌ ಗಳಿಸಲಷ್ಟೇ ಶಕ್ತವಾಗಿ. ಗುರಿ ಬೆನ್ನಟ್ಟಿದ ಭಾರತ 17 ಓವರ್‌ಗಳಲ್ಲಿ 4 ವಿಕೆಟ್‌ನಷ್ಟಕ್ಕೆ 127 ರನ್‌ ಬಾರಿಸಿ ಗೆಲುವು ತನ್ನದಾಗಿಸಿಕೊಂಡಿತು.

    ಚೇಸಿಂಗ್‌ ವೇಳೆ ಭಾರತಕ್ಕೆ ಆರಂಭಿಕ ಆಟಗಾರ್ತಿಯರಾದ ಸ್ಮೃತಿ ಮಂಧನಾ ಮತ್ತು ಶಫಾಲಿ ವರ್ಮ ಉತ್ತಮ ಜತೆಯಾಟದ ಆರಂಭ ಒದಗಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ ಅರ್ಧಶತಕದ ಜತೆಯಾಟ ನಡೆಸಿತು. ಮಂಧನಾಗಿಂತ ಬಿರುಸಿನ ಬ್ಯಾಟಿಂಗ್‌ ನಡೆಸಿದ ಶಫಾಲಿ 19 ಎಸೆತಗಳಲ್ಲಿ 31 ರನ್‌ ಬಾರಿಸಿದರೆ, ಮಂಧಾ ಎಸೆತವೊಂದರಂತೆ 31 ಎಸೆತಗಳಿಂದ 32 ರನ್‌ ಗಳಿಸಿದರು.

   ನಾಯಕಿ ಹರ್ಮನ್‌ಪ್ರೀತ್‌ ಕೌರ್‌ 26 ಮತ್ತು ಅಂತಿಮವಾಗಿ ಜೆಮೀಮಾ ರೋಡಿಗ್ರಾಸ್‌ ಅಜೇಯ 24 ರನ್‌ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದಕ್ಕೂ ಮುನ್ನ ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್‌ ಪರ ಆರಂಭಿಕ ಆಟಗಾರ್ತಿ ಸೋಫಿ ಡಂಕ್ಲಿ 22, ಹಂಗಾಮಿ ನಾಯಕಿ ಟಾಮಿ ಬ್ಯೂಮಂಟ್‌ 20 ರನ್‌ ಗಳಿಸಿದರು. ಭಾರತ ಪರ ಶ್ರೀ ಚರಣಿ ಮತ್ತು ರಾಧಾ ಯಾದವ್‌ ತಲಾ 2 ವಿಕೆಟ್‌ ಕಿತ್ತು ಮಿಂಚಿರು.

Recent Articles

spot_img

Related Stories

Share via
Copy link