ನವದೆಹಲಿ:
ತಂತ್ರಜ್ಞಾನ ಉದ್ಯಮದಲ್ಲಿ ಉದ್ಯೋಗಿಗಳ ವಜಾಗಳು ಮುಂದುವರಿದಿದೆ. ಅನೇಕ ಜನರು ಕೆಲಸದಿಂದ ವಜಾಗೊಂಡ ಬಳಿಕ ತಮ್ಮ ಆಘಾತವನ್ನು ವ್ಯಕ್ತಪಡಿಸಲು ಸಾಮಾಜಿಕ ಜಾಲತಾಣದೆಡೆಗೆ ಹೋಗುತ್ತಾರೆ. ಇತ್ತೀಚೆಗೆ ಅಮೆರಿಕದಲ್ಲಿ ವಜಾಗೊಂಡ ಭಾರತೀಯ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ತಮ್ಮ ಕೆಲಸವನ್ನು ಭಾರತದಲ್ಲಿ ವಾಸಿಸುವ ಭಾರತೀಯರೊಂದಿಗೆ ಹೇಗೆ ಬದಲಾಯಿಸಲಾಯಿತು ಎಂದು ವಿವರಿಸಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಟೆಕ್ಕಿ ತನ್ನ ಇಡೀ ತಂಡವನ್ನು ಇತ್ತೀಚೆಗೆ ಕಂಪನಿಯಿಂದ ಹೇಗೆ ವಜಾಗೊಳಿಸಲಾಗಿದೆ ಎಂದು ಹೇಳುವ ಮೊದಲು ತನ್ನನ್ನು ಪರಿಚಯಿಸಿಕೊಂಡಿದ್ದಾರೆ. ಕೆಲಸದಿಂದ ತೆಗೆದುಹಾಕುವ ವೇಳೆ ನಿಮ್ಮನ್ನು ಭಾರತೀಯ ಕೆಲಸಗಾರರೊಂದಿಗೆ ಬದಲಾಯಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ವಿಚಾರ ತಿಳಿದು ಆಘಾತವಾಯಿತು.
ನನ್ನ ಕೆಲಸ ಉಳಿಸಿಕೊಳ್ಳುವ ಸಲುವಾಗಿ ನಾನು ಒಬ್ಬ ಭಾರತೀಯ ಎಂದು ಅವರಲ್ಲಿ ಒತ್ತಿ ಹೇಳಿದೆ. ಆದರೆ ಪ್ರತಿಯಾಗಿ ಇಲ್ಲ.. ಇಲ್ಲ.. ನಿಮ್ಮನ್ನು ತೆಗೆದು ಹಾಕಿ ಭಾರತದಿಂದಲೇ ಕೆಲಸ ಮಾಡುವ ಭಾರತೀಯರನ್ನು ನೇಮಿಸಿಕೊಳ್ಳುತ್ತಿದ್ದೇವೆ. ಅವರು ಕೆಲಸನ್ನು ಅಗ್ಗದಲ್ಲಿ ಮಾಡಿಕೊಡುತ್ತಾರೆ ಎಂದು ತಿಳಿಸಿದರು. ನಾನೊಬ್ಬ ಭಾರತ ಮೂಲದವನಾಗಿದ್ದರೂ ನನ್ನನ್ನು ಕೆಲಸದಿಂದ ತೆಗೆದು ಹಾಕಿ ನನ್ನ ಸ್ಥಾನಕ್ಕೆ ಭಾರತದಲ್ಲೇ ವಾಸಿಸುವ ಭಾರತೀಯನಿಗೆ ನೀಡಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.