ಮುಂಬೈ :
ಭಾರತೀಯರು ಯಾವುದೇ ಕೆಲಸ ಮಾಡಿದರೂ ಅದರಲ್ಲಿ ಪರಿಣತಿ ಹೊಂದುವುದ ದೀರ್ಘವಾದಿ ಬೇಕಿಲ್ಲ ಆದರಂತೆ ಸುಜುಕಿ ಕಂಪನಿಯು ಜಪಾನ್ ಮೂಲದ್ದಾಗಿದ್ದು, ಭಾರತದಲ್ಲಿ ಮಾರುತಿಯವರ ಸಹಯೋಗದೊಂದಿಗೆ ಅಗ್ಗದ ಬೆಲೆಯಲ್ಲಿ ಹಲವು ಕಾರುಗಳನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದೆ. ಈ ಪಟ್ಟಿಯಲ್ಲಿ ಫ್ರಾಂಕ್ಸ್ ಕೂಡ ಇದ್ದು, ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಭಾರತದಲ್ಲಿ ಉತ್ತಮ ಮಾರಾಟವನ್ನು ಕಾಣುತ್ತಿದೆ.
ಇದೀಗ ಭಾರತದಲ್ಲಿ ನಿರ್ಮಾಣವಾದ ಈ ಮಾರುತಿ ಸುಜುಕಿ ಫ್ರಾಂಕ್ಸ್ ಅನ್ನು ಜಪಾನ್ ಮಾರುಕಟ್ಟೆಗೆ ರಫ್ತು ಮಾಡಲು ಕಂಪನಿ ಮುಂದಾಗಿದೆ. ಜಪಾನ್‌ನಲ್ಲಿ ಮಾರುತಿ ಸುಜುಕಿಯ ಮಾತೃಸಂಸ್ಥೆಯಾದ ಸುಜುಕಿ ಮೋಟಾರ್ ಕಾರ್ಪೊರೇಷನ್ ಅಡಿಯಲ್ಲಿ ಫ್ರಾಂಕ್ಸ್ ಎಸ್‌ಯುವಿನ್ನು ಮಾರಾಟ ಮಾಡಲಾಗುವುದು.
ಇದು ಮಾರುತಿ ಸುಜುಕಿಯ ಉತ್ಪಾದನಾ ಸಾಮರ್ಥ್ಯವನ್ನು ಸಂಕೇತಿಸುವುದರ ಜೊತೆಗೆ ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಸಾಥ್ ನೀಡುತ್ತದೆ. 2016 ರಲ್ಲಿ ಬಲೆನೊ ರಫ್ತು ಆರಂಭವಾಯಿತು ಇದಾದ ನಂತರ, ಫ್ರಾಂಕ್ಸ್ ಕಾರು ಮಾರುತಿ ಸುಜುಕಿಯಿಂದ ಜಪಾನ್‌ಗೆ ರಫ್ತಾಗುತ್ತಿರುವ ಎರಡನೇ ವಾಹನವಾಗಿದೆ. ಸುಜುಕಿ ಕಂಪನಿಯು 2024ರ ದ್ವಿತಿಯಾರ್ಧದಲ್ಲಿ ಜಪಾನ್‌ನಲ್ಲಿ ಫ್ರಾಂಕ್ಸ್ ಕಾರನ್ನು ಬಿಡುಗಡೆಗೊಳಿಸಲಿದೆ.
ಕಾರಿನ ವಿಶೇಷತೆಗಳು:
ಮಾರುತಿ ಫ್ರಾಂಕ್ಸ್ ಒಂದು ಕ್ರಾಸ್‌ಒವರ್ ಎಸ್‌ಯುವಿ ಕೂಪೆ ವಾಹನವಾಗಿದ್ದು, ಕಂಪನಿಯ ಪೋರ್ಟ್‌ಫೋಲಿಯೊದಲ್ಲಿ ಬ್ರೆಝಾ ಅಡಿಯಲ್ಲಿ ಬರುತ್ತದೆ. ಈ ಕಾರಿನ ತೀಕ್ಷ್ಣವಾದ ನೋಟ, 1.0 ಲೀಟರ್ ಬೂಸ್ಟರ್ ಜೆಟ್ ಟರ್ಬೊ ಪೆಟ್ರೋಲ್ ಎಂಜಿನ್‌ನಿಂದಾಗಿ ಭಾರತದಲ್ಲಿ ಗ್ರಾಹಕರಿಂದ ಉತ್ತಮವಾಗಿ ಸ್ವೀಕರಿಸಲ್ಪಟ್ಟಿದೆ ಎಂದು ಹೇಳಬಹುದು.
ಈ ಕಾರಿನಲ್ಲಿ ಆಟೋ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇ ಹೊಂದಿರುವ 9 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ ಮೆಂಟ್, ಎಚ್‌ಯುಡಿ (ಹೆಡ್ಸ್‌ಅಪ್ ಡಿಸ್ಪ್ಲೆ) ಯುನಿಟ್, ಹಿಂಭಾಗದ ಎಸಿ ವೆಂಟ್‌ಗಳು, ಎಲ್‌ಇಡಿ ಹೆಡ್ ಲೈಟ್‌ಗಳು, ಎಲ್‌ಇಡಿ ಡಿಆರ್‌ಎಲ್‌ಗಳು, ಎಲ್‌ಇಡಿ ಕನೆಕ್ಟಿಂಗ್ ಟೈಲ್‌ಲೈಟ್‌ಗಳು ಮತ್ತು ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿದೆ.
ಸುರಕ್ಷತೆ ವಿಚಾರವಾಗಿ ನೋಡಿದ್ರೆ ಕಾರಿನಲ್ಲಿ ಇಬಿಡಿ, ಕ್ರೂಸ್ ಕಂಟ್ರೋಲ್, 6 ಏರ್‌ಬ್ಯಾಗ್‌ಗಳು, ಟಿಸಿಎಸ್, ಇಎಸ್‌ಪಿ, ಎಬಿಎಸ್‌ನಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇನ್ನು ಜಪಾನಿಗೆ ರಫ್ತು ಮಾಡಲಾಗುವ ಫ್ರಾಂಕ್ಸ್‌ನಲ್ಲಿ ಇನ್ನೂ ಹೆಚ್ಚಿನ ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡಬಹುದಾಗಿದ್ದು, ADAS ನಂತಹ ಆಧುನಿಕ ವೈಶಿಷ್ಟ್ಯಗಳು ಇರುತ್ತವೆ ಎನ್ನಲಾಗಿದೆ.
ಭಾರತದಲ್ಲಿ, ಮಾರುತಿ ಸುಜುಕಿ ಫ್ರಾಂಕ್ಸ್ ಎರಡು ಪವರ್ ಟ್ರೇನ್ ಆಯ್ಕೆಗಳನ್ನು ಹೊಂದಿದೆ, 1.0 ಲೀಟರ್ ಟರ್ಬೋಚಾರ್ಜ್ಡ್ ಬೂಸ್ಟರ್ ಜೆಟ್ 3-ಸಿಲಿಂಡರ್ ಎಂಜಿನ್ ಮತ್ತು ನ್ಯಾಚುರಲ್ಲಿ ಆಸ್ಪಿರೇಟೆಡ್ 1.2 ಲೀಟರ್ 4-ಸಿಲಿಂಡರ್ ಎಂಜಿನ್ ಹೊಂದಿದೆ. ಮೊದಲ ಎಂಜಿನ್ 98 ಬಿಹೆಚ್‌ಪಿ ಪವರ್ ಮತ್ತು 147 ಎನ್‌ಎಂ ಟಾರ್ಕ್ ಉತ್ಪಾದಿಸಿದರೆ, ಎರಡನೇಯದು 89 ಬಿಹೆಚ್‌ಪಿ ಪವರ್ ಮತ್ತು 113 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.
ಸದ್ಯ ಫ್ರಾಂಕ್ಸ್ ಕಾರನ್ನು ಮಾರುತಿ ಸುಜುಕಿಯ ಗುಜರಾತ್ ಘಟಕದಲ್ಲಿ ಉತ್ಪಾದಿಸಲಾಗುತ್ತಿದೆ. ಇದು ಅತ್ಯಾಧುನಿಕ ಉತ್ಪಾದನಾ ಸೌಲಭ್ಯವಾಗಿದ್ದು, ಜಾಗತಿಕವಾಗಿ ಯೋಗ್ಯ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಮಾರುತಿ ಸುಜುಕಿ ಕಂಪನಿಯು ಗುಜರಾತ್‌ನ ಪಿಪಾವವ್ ಬಂದರಿನಿಂದ 1,600 ಕಾರುಗಳನ್ನು ಒಳಗೊಂಡ ಮೊದಲ ರಫ್ತನ್ನು ಜಪಾನ್‌ಗೆ ರವಾನಿಸಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.