ಭಾರತೀಯ ವೈಜ್ಞಾನಿಕ ಪರಂಪರೆ ವಿಶ್ವಮಟ್ಟಕ್ಕೆ ದಾಪುಗಾಲು: ನಿವೃತ್ತ ಕೆ ಎ ಎಸ್ ಅಧಿಕಾರಿ ರಘುಮೂರ್ತಿ 

ನಾಯಕನಹಟ್ಟಿ 

      ಭಾರತೀಯ ಸಂಜಾತೆ ಗಗನಯಾನಿ ಸುನೀತಾ ವಿಲಿಯಂ, ಅಂತಾರಾಷ್ಟ್ರೀಯ ಸ್ಪೇಸ್ ನಿಲ್ದಾಣದಿಂದ ಯಶಸ್ವಿಯಾಗಿ ಭೂಮಿಗೆ ಬಂದಿದ್ದು ಬಗ್ಗೆ . ಪ್ರತಿಕ್ರಿಯಿಸಿದ ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಅವರು 286 ದಿನಗಳು ಬಾಹ್ಯಕಾಶ ನಿಲ್ದಾಣದಲ್ಲಿ ಕಳೆಯಬೇಕಾದ ಕಠಿಣ ಸಂದರ್ಭ ಎದುರಿಸಿ ಅವರು ಸಹಯಾನಿ ಬುಚ್ ವಿಲ್ಮೋರ್ ಜತೆ ಇಂದು ಭಾರತೀಯ ಕಾಲಮಾನ 3-27 ಕ್ಕೆ ಭುವಿಗೆ ಕಾಲಿಟ್ಟರು. ಗುಜರಾತ್ ಮೂಲದ ಸುನಿತಾ ವಿಲಿಯಮ್ಸ್ ಯಶಸ್ವಿ ಹಿಂದಿರುಗುವಿಕೆಗೆ, ಕೋಟ್ಯಂತರ ಭಾರತೀಯ ಹಾಗೂ ಪ್ರಪಂಚದ ಹೃದಯಗಳು ಪ್ರಾರ್ಥಿಸಿದ್ದವು.

     ಈ ಸಾಹಸದಲ್ಲಿ ಗಗನ ಯಾನಿಗಳ ಅರೋಗ್ಯ ಭೂಮಿ ಮೇಲೆ ಬಂದಾಗ ವ್ಯತ್ಯಾಸವುಂಟಾಗಿ ಅನಾರೋಗ್ಯಕ್ಕೆ ತುತ್ತಾಗುವ ಸಂಭವ ವನ್ನು ಹಲವಾರು ಮಾಧ್ಯಮಗಳು ಬಿತ್ತರಿಸಿವೆ ಅವರು ಬೇಗನೆ ಚೇತರಿಸಲಿ ಭಾರತದ ವೈಜ್ಞಾನಿಕ ಭವ್ಯ ಪರಂಪರೆಯನ್ನು ಜಗತ್ತಿನ ಮಟ್ಟಕ್ಕೆ ಕೊಂಡೊಯ್ಯಲು ಇವರ ಕೊಡುಗೆ ಅತ್ಯಮೂಲ್ಯವಾದದ್ದು ಆ ಭಗವಂತನು ಎಲ್ಲಾ ಆರೋಗ್ಯ ಏರುಪೇರುಗಳನ್ನು ಮೀರಿ ಇನ್ನು ಹೆಚ್ಚು ಹೆಚ್ಚು ದೇಶಕ್ಕೆ ಈ ವೈಜ್ಞಾನಿಕ ಸೇವೆ ಸಲ್ಲಿಸಲಿ ಎಂದು ಶುಭ ಹಾರೈಸುವುದಾಗಿ ಹೇಳಿದರು.

Recent Articles

spot_img

Related Stories

Share via
Copy link