4 ವರ್ಷಗಳ ಬಳಿಕ ಭಾರತ ಏಕದಿನ ತಂಡಕ್ಕೆ ಅನುಭವಿ ಬೌಲರ್..?

ಭಾರತ:SA vs IND: 4 ವರ್ಷಗಳ ಬಳಿಕ ಭಾರತ ಏಕದಿನ ತಂಡಕ್ಕೆ ಅನುಭವಿ ಬೌಲರ್..?
  ಭಾರತ-ದಕ್ಷಿಣ ಆಫ್ರಿಕಾ ನಡುವಣ ಟೆಸ್ಟ್ ಸರಣಿ ಶುರುವಾಗಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿ ಬಳಿಕ ಟೀಮ್ ಇಂಡಿಯಾ ಏಕದಿನ ಸರಣಿಯನ್ನೂ ಸಹ ಆಡಲಿದೆ.

             ಆದರೆ ಈ ಸರಣಿಗಾಗಿ ಭಾರತ ಏಕದಿನ ತಂಡ ಇನ್ನೂ ಕೂಡ ಘೋಷಣೆಯಾಗಿಲ್ಲ ಎಂಬುದು ವಿಶೇಷ. ಇದೇ ಕಾರಣದಿಂದ ಸೌತ್ ಆಫ್ರಿಕಾ ವಿರುದ್ದದ ಏಕದಿನ ತಂಡದಲ್ಲಿ ಯಾರಿಗೆಲ್ಲಾ ಅವಕಾಶ ಸಿಗಲಿದೆ ಎಂಬ ಕುತೂಹಲ ಎಲ್ಲರಲ್ಲಿದೆ. ಮತ್ತೊಂದೆಡೆ ಈ ಸರಣಿಯೊಂದಿಗೆ ಟೀಮ್ ಇಂಡಿಯಾದ ಹಿರಿಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಕಂಬ್ಯಾಕ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

2021 ರ ಟಿ20 ವಿಶ್ವಕಪ್​ಗೆ ನಾಲ್ಕು ವರ್ಷಗಳ ಬಳಿಕ ಅಶ್ವಿನ್ ಮರಳಿದ್ದರು. ಇದೀಗ ಏಕದಿನ ತಂಡಕ್ಕೂ ಮರಳುವ ವಿಶ್ವಾಸದಲ್ಲಿದ್ದಾರೆ. ಅಶ್ವಿನ್ 2017 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನೂ ಆಡಿದ್ದರು. ಇದೀಗ ಮತ್ತೆ ತಂಡದಲ್ಲಿ ಹಿರಿಯ ಆಟಗಾರನಿಗೆ ಅವಕಾಶ ನೀಡುವ ಬಗ್ಗೆ ಚೇತನ್ ಶರ್ಮಾ ಅವರ ಆಯ್ಕೆ ಸಮಿತಿ ಚರ್ಚೆ ನಡೆಸಿದೆ ಎಂದು ತಿಳಿದು ಬಂದಿದೆ.

ಅಷ್ಟೇ ಅಲ್ಲದೆ ಮುಂದಿನ ಎರಡು ದಿನಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ತಂಡವನ್ನು ಆಯ್ಕೆ ಮಾಡಲಾಗುತ್ತಿದ್ದು, ಈ ತಂಡದಲ್ಲಿ ಅಶ್ವಿನ್ ಸ್ಥಾನ ಪಡೆಯಲಿದ್ದಾರೆ ಎಂದು ಹೇಳಲಾಗಿದೆ.

ಆದರೆ ಮತ್ತೊಂದೆಡೆ ತಂಡದಲ್ಲಿ ಆಲ್​ರೌಂಡರ್ ಸ್ಪಿನ್ನರ್​ಗಳಾಗಿ ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಮತ್ತು ಯುಜ್ವೇಂದ್ರ ಚಹಲ್ ಅವರನ್ನು ಎದುರಿಸಲಿದ್ದಾರೆ. ಆದರೆ ಈ ಇಬ್ಬರು ಆಟಗಾರರು ಗಾಯಗೊಂಡಿರುವ ಕಾರಣ ಏಕದಿನ ಸರಣಿಗೆ ಲಭ್ಯರಿದ್ದಾರಾ ಎಂಬುದರ ಬಗ್ಗೆ ಖಚಿತತೆ ಇಲ್ಲ. ಹೀಗಾಗಿ ಅಶ್ವಿನ್​ಗೆ ಅವಕಾಶ ನೀಡುವ ಸಾಧ್ಯತೆಯಿದೆ.

ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಆಯ್ಕೆ ಸಮಿತಿ ಸದಸ್ಯ ಚೇತನ್ ಶರ್ಮಾ, ಅಶ್ವಿನ್ ಅವರನ್ನು ಪವರ್‌ಪ್ಲೇ ಅಥವಾ ಮಧ್ಯಮ ಓವರ್‌ಗಳಲ್ಲಿ ಬಳಸಬಹುದು ಎಂದಿದ್ದಾರೆ. ಅಷ್ಟೇ ಅಲ್ಲದೆ ಯಾವುದೇ ಸಮಯದಲ್ಲಿ,

ಯಾವುದೇ ಪರಿಸ್ಥಿತಿಯಲ್ಲಿ ಬೌಲ್ ಮಾಡುವ ಆಲ್ ರೌಂಡರ್ ಅನುಭವ ಹೊಂದಿರುವ ಬೌಲರ್ ಅನ್ನು ಆಯ್ಕೆ ಮಾಡುವುದು ಮುಖ್ಯ ಎಂದು ತಿಳಿಸಿದ್ದರು. ಇಲ್ಲಿ ಅಶ್ವಿನ್ ಅವರ ಹೆಸರನ್ನು ಉಲ್ಲೇಖಿಸಿರುವುದರಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ರವಿಚಂದ್ರನ್ ಅಶ್ವಿನ್ ಆಯ್ಕೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap