ನವದೆಹಲಿ
ಕೆಲ ದಿನಗಳ ಹಿಂದೆ ಏರ್ ಇಂಡಿಯಾ ಸಂಸ್ಥೆಯು ಏರ್ ಬಸ್ ಸಂಸ್ಥೆಯೊಂದಿಗೆ 470 ವಿಮಾನಗಳನ್ನು ಖರೀದಿಗೆ ಮುಂದಾಗಿ ಎಲ್ಲರ ಚಿತ್ತ ಅದರತ್ತ ಸೆಳೆದಿತ್ತು .ಈ ಬಗ್ಗೆ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಸುದ್ದಿಯೂ ಆಗಿತ್ತು. ಇದೀಗ ಅದೇ ದಾರಿಯನ್ನೇ ಹಿಡಿದಿರುವ ಇಂಡಿಗೋ ಕೂಡ 500 ವಿಮಾನಗಳನ್ನು ಖರೀದಿಸಲು ಮುಂದಾಗಿದೆ.
ತನ್ನ ವ್ಯಾಪ್ತಿಯನ್ನು ಯುರೋಪ್ಗೆ ವಿಸ್ತರಿಸಲು ಟರ್ಕಿಶ್ ಏರ್ಲೈನ್ಸ್ ಸಹಭಾಗಿತ್ವದಲ್ಲಿ 500 ವಿಮಾನಗಳನ್ನ ಖರೀದಿಸಲು ಇಂಡಿಗೋ ಏರ್ಲೈನ್ಸ್ ಮುಂದಾಗಿದೆ ಎಂದು ಅಂತಾರಾಷ್ಟ್ರೀಯ ವ್ಯಾಪಾರ ಮುಖ್ಯಸ್ಥ ವಿನಯ್ ಮಲ್ಹೋತ್ರಾ ಮಾಹಿತಿ ನೀಡಿದ್ದಾರೆ.
ಇದರಿಂದ ಭಾರತ-ಇಸ್ತಾಂಬುಲ್ ಮತ್ತು ಯುರೋಪ್ ನಡುವೆ ಪ್ರಯಾಣ ಮಾಡುವವರಿಗೆ ಹೆಚ್ಚು ಅನುಕೂಲವಾಗಲಿದೆ. ಏರ್ಲೈನ್ಸ್ ಅಧಿಕಾರಿಗಳ ಮಾಹಿತಿಯ ಪ್ರಕಾರ, ಇಂಡಿಗೋ ಯುರೋಪಿಯನ್ ದೈತ್ಯ ಏರ್ಬಸ್ ಹಾಗೂ ಯುಎಸ್ ಬೋಯಿಂಗ್ ಎರಡರಿಂದಲೂ ವಿಮಾನ ಖರೀದಿಗೆ ಮುಂದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ