ಅಣು ಬಾಂಬ್ ಬಳಕೆ : ಭಾರತದ ನಡೆ ಆಘಾತಕಾರಿಯಾಗಿದೆ: ಖುರೇಶಿ

ಇಸ್ಲಾಮಬಾದ್:

    ಅಣು ಬಾಂಬ್ ಬಳಕೆಯ ಕುರಿತಾಗಿ ಭಾರತ ಹಿಂದಿನಿಂದಲೂ ಪಾಲಸಿಸುತ್ತಿರುವ  ನೋ ಫಸ್ಟ್ ಯೂಸ್ ಪಾಲಿಸಿಗೆ ನಾವು ಕಟ್ಟು ಬೀಳುವುದಿಲ್ಲ ಎಂಬ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆ ಆಘಾತಕಾರಿಯಾಗಿದೆ ಮತ್ತು ಈ ದಿನಗಳಲ್ಲಿ ಇಂತಹ ಹೇಳಿಕೆ ತೀವ್ರ ಗಂಭೀರ ಸ್ವರೂಪ ಪಡೆಯುತ್ತದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿ ಹೇಳಿದ್ದಾರೆ.

    ರಾಜಸ್ಥಾನದ ಪೋಕ್ರಾನ್’ನಲ್ಲಿ ನಡೆದ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ಅಣ್ವಸ್ತ್ರಕ್ಕೆ ಸಬಂಧಿಸಿದಂತೆ ನೋ ಫಸ್ಟ್ ಯೂಸ್ ಪಾಲಿಸಿಗೆ ಭಾರತ ಈಗಲೂ ಬದ್ಧವಾಗಿದೆ. ಆದರೆ ಮುಂದೆ ಏನಾಗುತ್ತದೆ ಎಂಬುದು ಆಗಿನ ಸಂದರ್ಭಗಳ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿದ್ದರೂ.

   ಸಿಂಗ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ  ಶಾ ಮೊಹಮ್ಮದ್ ಖುರೇಶಿ ಭಾರತದ ಈ ಆಘಾತಕಾರಿ ನಡೆ ದುರದೃಷ್ಟಕರ ವಾದುದು ಎಂದಿದ್ದಾರೆ. ಇದು ಭಾರತದ ಬೇಜವಾಬ್ದಾರಿತನ ಹಾಗೂ ಯುದ್ಧೋತ್ಸಾಹವನ್ನು ತೋರಿಸುತ್ತದೆ ಎಂದು ಕಿಡಿಕಾರಿದ್ದಾರೆ.ಪಾಕಿಸ್ತಾನ ಯಾವಾಗಲೂ ದಕ್ಷಿಣ ಏಷ್ಯಾದಲ್ಲಿ ಪರಮಾಣು ಸಂಯಮಕ್ಕೆ ಸಂಬಂಧಿಸಿದ ಕ್ರಮಗಳನ್ನು ಅನುಸರಿಸುತ್ತದೆ. ನಮ್ಮ ಈ ನಡೆಯನ್ನು ನಾವು ಮುಂದುವರೆಸುತ್ತೇವೆ’ ಎಂದು ಪಾಕಿಸ್ತಾನ ವಿದೇಶಾಂಗ ಕಚೇರಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

.   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap