ಇಸ್ಲಾಮಾಬಾದ್:
ಕೊರೋನಾ ಮಹಾಮಾರಿಯ ಹೊಡೆತಕ್ಕೆ ಇಡೀ ಜಗತ್ತೆ ತಲ್ಲಣಿಸಿ ಹೋಗಿದ್ದು , ಇದೀಗ ಸೋಂಕಿತರ ಸಂಖ್ಯೆಯಲ್ಲಿ ಪಾಕಿಸ್ತಾನ ತನ್ನ ಪರಮಾಪ್ತ ರಾಷ್ಟ್ರವಾದ ಚೀನಾವನ್ನೇ ಹಿಂದಿಕ್ಕಿದೆ. ಇನ್ನು ಕೊರೋನಾ ಹುಟ್ಟೂರು ಚೀನಾದಲ್ಲಿ ಸೋಂಕಿನ ಸಂಖ್ಯೆ ಬೆರಳೆಣಿಕೆಯಷ್ಟಾಗಿದೆ. ಪ್ರಸ್ತುತ ಚೀನಾದಲ್ಲಿ 83,022 ಮಂದಿ ಸೋಂಕಿಗೆ ತುತ್ತಾಗಿದ್ದರೆ ಸದ್ಯ 69 ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದೀಗ ಪಾಕಿಸ್ತಾನದಲ್ಲಿ ಸೋಂಕಿತರ ಸಂಖ್ಯೆ 85,264ಕ್ಕೆ ಏರಿಕೆಯಾಗಿದೆ. 53 ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೂ ಪಾಕ್ ನಲ್ಲಿ 1,770 ಮಂದಿ ಬಲಿಯಾಗಿದ್ದಾರೆ.
![](https://prajapragathi.com/wp-content/uploads/2020/06/AP_20072354595461.gif)