”ಯಾವುದನ್ನೂ ಉಚಿತವಾಗಿ ನೀಡಬಾರದು” : ಇನ್ಪೋಸಿಸ್‌ ನಾರಾಯಣ್‌ ಮೂರ್ತಿ

ಬೆಂಗಳೂರು:

      ಸರ್ಕಾರದ ಯೋಜನೆಗಳು, ಆಡಳಿತ, ಯುವಜನತೆ ಜೀವನ ವಿಧಾನ ಬಗ್ಗೆ ಅವರು ಈ ಹಿಂದೆಯೂ ಮುಕ್ತವಾಗಿ ಮಾತನಾಡಿದ್ದುಂಟು. ಹಲವು ಬಾರಿ ಅವರ ಹೇಳಿಕೆಗಳು ಟ್ರೋಲ್ ಆಗಿವೆ. 

     ಬೆಂಗಳೂರಿನಲ್ಲಿ ನಿನ್ನೆ ಆರಂಭಗೊಂಡ ಟೆಕ್ ಶೃಂಗಸಭೆಯಲ್ಲಿ ಸಂವಾದದಲ್ಲಿ ಅವರು ಭಾಗಿಯಾಗಿದ್ದ ವೇಳೆ ಈ ಮಾತುಗಳನ್ನು ಹೇಳಿದ್ದಾರೆ. ಸರ್ಕಾರದಿಂದ ಒದಗಿಸುವ ಸೇವೆಗಳು ಮತ್ತು ಸಬ್ಸಿಡಿಗಳನ್ನು ಪಡೆಯುವ ಜನರು ಸಮಾಜದ ಸುಧಾರಣೆಗೆ ಮತ್ತೆ ಕೊಡುಗೆ ನೀಡಬೇಕು ಎಂಬ ಸಲಹೆಯನ್ನೂ ನೀಡಿದ್ದಾರೆ. ”ಯಾವುದನ್ನೂ ಉಚಿತವಾಗಿ ನೀಡಬಾರದು” ಎಂಬ ಮಾತನ್ನು ಸಾಫ್ಟ್‌ವೇರ್ ಉದ್ಯಮದ ದಿಗ್ಗಜ ಇನ್ಫೋಸಿಸ್ ಸ್ಥಾಪಕ ಎನ್‌ ಆರ್ ನಾರಾಯಣ ಮೂರ್ತಿ ಹೇಳಿದ್ದಾರೆ.

    ಭಾರತದಂತಹ ಬಡ ದೇಶವು ಸಮೃದ್ಧ ರಾಷ್ಟ್ರವಾಗಲು ಸಹಾನುಭೂತಿಯ ಬಂಡವಾಳಶಾಹಿಯೇ ಏಕೈಕ ಪರಿಹಾರವಾಗಿದೆ ಎಂದು ಸಹ ಅಭಿಪ್ರಾಯಪಟ್ಟರು, ನೀವು ಜನತೆಗೆ ಒಂದು ಸೇವೆಯನ್ನು ಉಚಿತವಾಗಿ ಒದಗಿಸಿದಾಗ, ಸಬ್ಸಿಡಿಗಳನ್ನು ಒದಗಿಸಿದಾಗ, ಅದರಿಂದ ಅವರು ಏನನ್ನಾದರೂ ಮಾಡಲು ಸಿದ್ಧರಾಗಿರಬೇಕು. ಉದಾಹರಣೆಗೆ, ನೀವು ಉಚಿತ ವಿದ್ಯುತ್ ನೀಡುತ್ತೇವೆ ಎಂದಾಗ, ಪ್ರಾಥಮಿಕ ಶಾಲೆಗಳು ಮತ್ತು ಮಧ್ಯಮ ಶಾಲೆಗಳಲ್ಲಿ ಶೇಕಡಾ 20 ರಷ್ಟು ಹಾಜರಾತಿ ಹೆಚ್ಚಾಗಬೇಕು.

    ಅಂದರೆ ಉಚಿತದ ಪ್ರಯೋಜನ ಜನತೆಗೆ ಸಿಕ್ಕಿ ಅದರಿಂದ ಅವರು ಹೊಸದನ್ನು ಸಾಧಿಸಬೇಕು, ಕಲಿಯಬೇಕು, ಬೆಳೆಯಬೇಕು, ಜೀವನ ಮಟ್ಟ ಸುಧಾರಣೆಯಾಗಬೇಕು, ಹಾಗಾದರೆ ಮಾತ್ರ ಸರ್ಕಾರದ ಉಚಿತ ಯೋಜನೆಗಳು ಪ್ರಯೋಜನಕಾರಿಯಾಗುತ್ತದೆ ಎಂದರು. ಯಾವುದನ್ನೂ ಉಚಿತವಾಗಿ ನೀಡಬಾರದು. ಉತ್ತಮ ಸಮಾಜವನ್ನು ನಿರ್ಮಿಸಲು ನಾಗರಿಕರ ಕೊಡುಗೆ ಖಂಡಿತಾ ಇರಬೇಕು ಎಂದರು.

     ಉಚಿತ ಸೇವೆಗಳನ್ನು ಒದಗಿಸುವುದಕ್ಕೆ ನಾನು ವಿರೋಧಿಯಲ್ಲ, ನಾನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿದ್ದೇನೆ, ಏಕೆಂದರೆ ನಾನು ಒಂದು ಕಾಲದಲ್ಲಿ ಬಡತನದ ಹಿನ್ನೆಲೆಯಿಂದ ಬಂದವನು. ಆ ಉಚಿತ ಸಬ್ಸಿಡಿಗಳನ್ನು ಪಡೆದ ಜನರಲ್ಲಿ ದೊಡ್ಡ ಜವಾಬ್ದಾರಿಗಳಿರುತ್ತವೆ. ಉಚಿತ ಸೇವೆ ಪಡೆದವರು ಹಿಂತಿರುಗಿ ಸಮಾಜಕ್ಕೆ ಏನನ್ನಾದರೂ ಕೊಡಬೇಕು. ತಮ್ಮ ಭವಿಷ್ಯದ ಪೀಳಿಗೆಯನ್ನು, ಅವರ ಸ್ವಂತ ಮಕ್ಕಳು ಮತ್ತು ಮೊಮ್ಮಕ್ಕಳನ್ನು ಶಾಲೆಗೆ ಹೋಗುವ ವಿಷಯದಲ್ಲಿ ಉತ್ತಮಗೊಳಿಸುವ ನಿಟ್ಟಿನಲ್ಲಿ, ನಿಮಗೆ ತಿಳಿದಿರುವಂತೆ, ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಅದನ್ನೇ ನಾನು ಹೇಳುತ್ತೇನೆ ಎಂದರು. 

    ಮುಕ್ತ ಮಾರುಕಟ್ಟೆ ಮತ್ತು ಉದ್ಯಮಶೀಲತೆಯ ಅವಳಿ ಸ್ತಂಭಗಳನ್ನು ಆಧರಿಸಿದ ಬಂಡವಾಳಶಾಹಿಯು ಯಾವುದೇ ದೇಶವು ತನ್ನ ಬಡತನದ ಸಮಸ್ಯೆಯನ್ನು ಪರಿಹರಿಸಲು ಏಕೈಕ ಪರಿಹಾರವಾಗಿದೆ ಎಂದು ನಂಬುತ್ತೇನೆ ಎಂದರು. 

    ರಾಷ್ಟ್ರೀಯ ಶಿಕ್ಷಣ ನೀತಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವನ್ನು ಅಭಿನಂದಿಸಿದ ಮೂರ್ತಿ, ಇದು ಸರಿಯಾದ ದಿಕ್ಕಿನಲ್ಲಿ ಒಂದು ಹೆಜ್ಜೆಯಾಗಿದೆ ಎಂದು ಹೇಳಿದರು.ಡಾ ಕೆ ಕಸ್ತೂರಿರಂಗನ್ ಅವರು ಅಧ್ಯಕ್ಷರಾಗಿದ್ದರು ಮತ್ತು ಮಂಜುಲ್ ಭಾರ್ಗವ ಅವರಂತಹ ಜನರು ಎನ್ ಇಪಿ ಭಾಗವಾಗಿದ್ದರು, ಅದು ನಮಗೆ ಉತ್ತಮವಾಗಲು ಒಂದು ಮಾರ್ಗವನ್ನು ತೋರಿಸುತ್ತದೆ ಎಂದು ನನಗೆ ಅಪಾರ ಭರವಸೆ ಇದೆ ಎಂದರು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap