ಇನ್ಸ್​ಟಾಮಾರ್ಟ್ ಡೆಲಿವರಿ ಫೀ ಹೆಚ್ಚಳಕ್ಕೆ ಸಾಧ್ಯತೆ….!

ನವದೆಹಲಿ

   ಫೂಡ್ ಟೆಕ್ ಸಂಸ್ಥೆಯಾದ ಸ್ವಿಗ್ಗಿ ತನ್ನ ಇನ್ಸ್​ಟಾಮಾರ್ಟ್ ವಿಭಾಗದಲ್ಲಿ ಡೆಲಿವರಿ ಫೀ ಹೆಚ್ಚಿಸಲು ಯೋಜಿಸುತ್ತಿದೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಇನ್ಸ್​ಟಾಮಾರ್ಟ್ ನಿಮಿಷಗಳಲ್ಲಿ ದಿನಸಿ ವಸ್ತುಗಳನ್ನು ಮನೆಗೆ ತಲುಪಿಸುವ ಸೇವೆ ನೀಡುತ್ತದೆ. ಇದರ ಕಾರ್ಯಾಚರಣೆ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಡೆಲಿವರಿ ಶುಲ್ಕವನ್ನು ಹೆಚ್ಚಿಸಿ ಆದಾಯ ಸರಿದೂಗಿಸುವ ಆಲೋಚನೆಯಲ್ಲಿ ಸ್ವಿಗ್ಗಿ ಇದೆ. ಈ ಬಗ್ಗೆ ಸ್ವಿಗ್ಗಿಯ ಸಿಎಫ್​ಒ ಆಗಿರುವ ರಾಹುಲ್ ಬೋತ್ರಾ ಅವರು ಸುಳಿವು ನೀಡಿದ್ದಾರೆ.

   ‘ಡೆಲಿವರಿ ಫೀ ವಿಚಾರಕ್ಕೆ ಬಂದರೆ ಒಂದಷ್ಟು ಸಬ್ಸಿಡಿಗಳು ಅಸ್ತಿತ್ವದಲ್ಲಿವೆ. ಸ್ವಿಗ್ಗಿ ಒನ್ ಸಬ್​ಸ್ಕ್ರೈಬರ್​ಗಳಿಗೆ ಡೆಲಿವರಿ ಫೀಯಿಂದ ವಿನಾಯಿತಿ ಇದೆ. ಇನ್ಸ್​ಟಾಮಾರ್ಟ್​ಗೆ ಗ್ರಾಹಕರನ್ನು ಸೆಳೆಯಲೂ ಡೆಲಿವರಿ ಫೀ ವಿನಾಯಿತಿ ಕೊಡಲಾಗುತ್ತಿದೆ. ಈ ಪ್ಲಾಟ್​ಫಾರ್ಮ್ ಬಳಕೆ ರೂಢಿಯಾಗಲಿ ಎನ್ನುವ ಉದ್ದೇಶದಿಂದ ಈ ವಿನಾಯಿತಿ ನೀಡಲಾಗುತ್ತಿದೆ. ಹೋಗುತ್ತಾ ಹೋಗುತ್ತಾ ಡೆಲಿವರಿ ಫೀ ಹೆಚ್ಚಿಸಬೇಕಾಗಬಹುದು,’ ಎಂದು ಸ್ವಿಗ್ಗಿಯ ಚೀಫ್ ಫೈನಾನ್ಷಿಯಲ್ ಆಫೀಸರ್ ಹೇಳಿದ್ದಾರೆ.
 
   ಸ್ವಿಗ್ಗಿಯ ತ್ರೈಮಾಸಿಕ ವರದಿ ಬಿಡುಗಡೆ ಆಗಿದ್ದು, ಅದರ ನಷ್ಟದ ಪ್ರಮಾಣ ತುಸು ಕಡಿಮೆಗೊಂಡಿದೆ. ಜುಲೈನಿಂದ ಸೆಪ್ಟೆಂಬರ್​ವರೆಗಿನ ಕ್ವಾರ್ಟರ್​ನಲ್ಲಿ ಸ್ವಿಗ್ಗಿ 3,601 ಕೋಟಿ ರೂ ಆದಾಯ ತೋರಿದೆ. ಕಳದ ವರ್ಷದಕ್ಕೆ ಹೋಲಿಸಿದರೆ ಶೇ. 30ರಷ್ಟು ಆದಾಯ ಹೆಚ್ಚಳವಾಗಿದೆ.

 

   ಸ್ವಿಗ್ಗಿಗೆ ಲಾಭ ಸಿಕ್ಕಿಲ್ಲ. ಆದರೆ, ನಷ್ಟದ ಪ್ರಮಾಣ ಕಡಿಮೆ ಆಗಿದೆ. ಒಂದು ವರ್ಷದ ಹಿಂದೆ ಅದು 657 ಕೋಟಿ ರೂನಷ್ಟು ನಿವ್ವಳ ನಷ್ಟ ಕಂಡಿತ್ತು. ಈಗ ಅದು 625.5 ಕೋಟಿ ರೂಗೆ ಇಳಿದಿದೆ. ನಿವ್ವಳ ನಷ್ಟ ಶೇ. 5ರಷ್ಟು ಕಡಿಮೆ ಆಗಿದೆ. ಇದು ಸಕಾರಾತ್ಮಕ ಬೆಳವಣಿಗೆ. ಇತ್ತೀಚೆಗಷ್ಟೇ ಷೇರು ಮಾರುಕಟ್ಟೆಗೆ ಬಂದಿರುವ ಸ್ವಿಗ್ಗಿ ತನ್ನ ನಷ್ಟದ ಹಾದಿಯಿಂದ ಲಾಭದ ಹಾದಿಗೆ ಹೊರಳಲು ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಅದರಲ್ಲಿ ಡೆಲಿವರಿ ಫೀ ಹೆಚ್ಚಳದ ಕ್ರಮವೂ ಒಂದಾಗಿರಬಹುದು. ಒಂದೆರಡು ತಿಂಗಳ ಹಿಂದೆ ಅದು ಫೂಡ್ ಡೆಲಿವರಿಯ ಪ್ಲಾಟ್​ಫಾರ್ಮ್ ಶುಲ್ಕವನ್ನು ಎರಡು ಪಟ್ಟು ಹೆಚ್ಚಿಸಿತ್ತು. ಅದು ಸ್ವಿಗ್ಗಿಯ ನಷ್ಟದ ಪ್ರಮಾಣ ಕಡಿಮೆ ಮಾಡಲು ಸಹಾಯವಾಗಿರಬಹುದು.

Recent Articles

spot_img

Related Stories

Share via
Copy link