ಅಂಬೇಡ್ಕರ್ ಫೋಟೊಗೆ ಅಪಮಾನ ವಿವಾದ

ಗುಬ್ಬಿ:

                              ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ವಜಾಕ್ಕೆ ಡಿಎಸ್‍ಎಸ್ ಆಗ್ರಹ

ರಾಯಚೂರಿನ ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನಗೌಡ ಅವರು ಗಣರಾಜ್ಯೋತ್ಸವ ದಿನದಂದು ಅಂಬೇಡ್ಕರ್ ಭಾವಚಿತ್ರವನ್ನು ತೆಗೆಸಿ ಧ್ವಜಾರೋಹಣ ಮಾಡಿರುವುದು ಸಂವಿಧಾನಕ್ಕೆ ಮಾಡಿರುವ ಅವಮಾನ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಪಟ್ಟಣದಲ್ಲಿ ಸೋಮವಾರ ಪ್ರತಿಭಟಿಸಲಾಯಿತು.

ಡಿಎಸ್‍ಎಸ್ ಜಿಲ್ಲಾ ಸಂಚಾಲಕ ಮುರುಳಿ ಮಾತನಾಡಿ, ಸಂವಿಧಾನದ ಆಶಯಗಳಿಗೆ ಬದ್ಧರಾಗಿ ನ್ಯಾಯಾಧೀಶ ಹುದ್ದೆಯನ್ನು ಅಲಂಕರಿಸಿ ಬ್ರಾಹ್ಮಣ್ಯತ್ವವನ್ನು ಮನಸಿನಲ್ಲಿಟ್ಟುಕೊಂಡು ಇಂತಹ ಲೋಪವೆಸಗಿರುವ ಈ ನ್ಯಾಯಾಧೀಶರು ಇಲ್ಲಿಯವರೆಗೆ ನೀಡಿರುವ ತೀರ್ಪುಗಳನ್ನು ಮರು ಪರಿಶೀಲಿಸಬೇಕೆಂದು ಮತ್ತು ಇವರನ್ನು ಹುದ್ದೆಯಿಂದ ವಜಾಗೊಳಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.

ಸಂವಿಧಾನಕ್ಕೆ ಮಾಡಿದ ಅಪಚಾರ :

ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಮಾತನಾಡಿ, ಆಡಳಿತ ಮಾಡುತ್ತಿರುವ ಬಿಜೆಪಿ ಮತ್ತು ಆರೆಸ್ಸೆಸ್ ಹಾಗೂ ಮನುವಾದಿಗಳು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳಿಗೆ ಅವಮಾನ ಮಾಡುತ್ತಿದ್ದಾರೆ ನಮ್ಮ ಸಂವಿಧಾನವನ್ನು ಒಪ್ಪಿಕೊಳ್ಳಲಿಲ್ಲ ಎಂದರೆ ನಿಮ್ಮ ಹಿಂದೂ ಧರ್ಮವನ್ನು ನಾವೂ ಸಹ ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ. ಆದರೆ ನ್ಯಾಯಾಲಯದಲ್ಲಿರುವ ಒಬ್ಬ ನ್ಯಾಯಾಧೀಶ ಈ ರೀತಿ ನಡೆದುಕೊಂಡಿರುವುದು ಮಾನವ ಕುಲಕ್ಕೆ ಮಾಡಿದ ಅವಮಾನ. ಸಂವಿಧಾನಕ್ಕೆ ಮಾಡುವ ಅಪಚಾರ.

ಕಚೇರಿ ಮುಂದೆ ಸತ್ಯಾಗ್ರಹಕ್ಕೂ ಸಿದ್ಧ :

ಗುಬ್ಬಿ ತಾಲ್ಲೂಕು ಸಂಚಾಲಕ ಜಿ.ಸಿ.ನರಸಿಂಹಮೂರ್ತಿ ಮಾತನಾಡಿ, ಅಂಬೇಡ್ಕರರ ವಿಚಾರಧಾರೆಗಳನ್ನು ಪ್ರತಿಯೊಬ್ಬರು ಕೂಡ ಅರ್ಥ ಮಾಡಿಕೊಳ್ಳಬೇಕಾಗಿದೆ. ಕೇವಲ ದಲಿತರಿಗೆ ಮಾತ್ರ ಸಂವಿಧಾನ ಕೊಟ್ಟಿಲ್ಲ. ಪ್ರತಿಯೊಬ್ಬ ಪ್ರಜೆಗೂ ಸಂವಿಧಾನ ಅನ್ವಯವಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು.

ಗುಬ್ಬಿ ತಾಲ್ಲೂಕಿನ ನಾಡ ಕಚೇರಿಯಲ್ಲಿ ಹಾಗೂ ಗ್ರಾಪಂಯೊಂದರ ಕಚೇರಿಯಲ್ಲಿ ಪಿಡಿಓ ಒಬ್ಬರು ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ್ದರೂ ಸಹ ತಾಲ್ಲೂಕು ಆಡಳಿತ ಮೌನವಾಗಿದೆ. ಇಂತಹ ಘಟನೆಗಳು ಮರುಕಳಿಸಿದಲ್ಲಿ ಮುಂದಿನ ದಿನಗಳಲ್ಲಿ ಯಾರು ಯಾವ ಕಚೇರಿಯಲ್ಲಿ ಅಂಬೇಡ್ಕರರಿಗೆ ಅವಮಾನ ಮಾಡುತ್ತಾರೊ ಅದೇ ಕಚೇರಿಯ ಮುಂದೆ ಉಪವಾಸ ಸತ್ಯಾಗ್ರಹ ಮಾಡಲು ಡಿಎಸ್‍ಎಸ್ ಬದ್ಧವಾಗಿರುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಮಲ್ಲಿಕಾರ್ಜುನಗೌಡ ಅವರ ಪ್ರತಿಕೃತಿಯನ್ನು ದಹಿಸಲಾಯಿತು.

ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಗೋವಿಂದರಾಜು, ತಾಲ್ಲೂಕು ಅಧ್ಯಕ್ಷ ವೆಂಕಟೇಗೌಡ, ದಲಿತ ಮುಖಂಡರಾದ ಫಣೀಂದ್ರ, ರಂಗಸ್ವಾಮಯ್ಯ, ನಾಗರಾಜು, ನಾಗಭೂಷಣ್, ಕೀರ್ತಿಕುಮಾರ್ ಸೇರಿದಂತೆ ಇನ್ನಿತರ ದಲಿತ ಮುಖಂಡರು ಹಾಜರಿದ್ದರು.

ಬ್ರಾಹ್ಮಣ, ವೈಶ್ಯ, ಶೂದ್ರರು ಮಾತ್ರ ಹಿಂದೂಗಳೆ ಹೊರತು ದಲಿತರು ಹಾಗೂ ಅಲ್ಪ ಸಂಖ್ಯಾತರು ಹಿಂದುಗಳೆ ಅಲ್ಲ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆದÀಲ್ಲಿ ದೇಶದಲ್ಲಿ ಅತ್ಯಂತ ದೊಡ್ಡ ಮಟ್ಟದ ಹೋರಾಟವನ್ನು ಮಾಡಬೇಕಾಗುತ್ತದೆ.

-ಕುಂದೂರು ತಿಮ್ಮಯ್ಯ, ಜಿಲ್ಲಾ ಸಂಚಾಲಕರು, ಡಿಎಸ್‍ಎಸ್

ನಾನು ಬಿಜೆಪಿ ಸದಸ್ಯನೆ, ಆದರೇ…! :

ಜಿಪಂ ಮಾಜಿ ಸದಸ್ಯ ಜಗನ್ನಾಥ್ ಮಾತನಾಡಿ, ನಾನು ಬಿಜೆಪಿ ಪಕ್ಷದ ಸದಸ್ಯನೆ ಇರಬಹುದು. ನನ್ನ ಕುಟುಂಬಕ್ಕೆ ಧಕ್ಕೆ ಬಂದಾಗ ನಾನು ಹೋರಾಟಕ್ಕೆ ನಿಲ್ಲಲೇಬೇಕಾಗುತ್ತದೆ. ಅಂಬೇಡ್ಕರ್ ಅವರನ್ನು ಇಡೀ ವಿಶ್ವವೇ ಬುದ್ಧಿವಂತರ ಸಾಲಿನಲ್ಲಿ ನಿಲ್ಲಿಸಿದ್ದು, ಅವರು ಬರೆದ ಸಂವಿಧಾನದಿಂದಲೆ ನಾವೆಲ್ಲರೂ ಸಹ ನಮ್ಮ ಹಕ್ಕುಗಳನ್ನು ಪಡೆಯುತ್ತಿದ್ದೇವೆ. ಅವರಿಗೆ ಅವಮಾನವಾಗುವುದನ್ನು ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಆರೋಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link