ಸ್ಯಾಂಟಿಯಾಗೊ
ದಕ್ಷಿಣ ಚೀಲಿಯಲ್ಲಿ ಮನೆಯ ಮೇಲೆ ವಿಮಾನ ಪತಗೊಂಡು ಕನಿಷ್ಠ ಆರು ಮಂದಿ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ಲಾಸ್ ಲಾಗೋಸ್ ಪ್ರದೇಶದ ಪೋರ್ಟೊ ಮಾಂಟ್ ನಗರದಿಂದ 2 ಕಿ.ಮೀ ದೂರದಲ್ಲಿರುವ ಖಾಸಗಿ “ಲಾ ಪಲೊಮಾ” ವಿಮಾನ ನಿಲ್ದಾಣದಿಂದ ಟೇಕ್ ಆಫ್ ಮಾಡಿದ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡು ದುರ್ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾಣಿಜ್ಯ ಸೇವೆ ಸಲ್ಲಿಸುವ ಅರ್ಕಿಪಿಲಾಗೊ ಕಂಪನಿಯ ವಿಮಾನದಲ್ಲಿ ಒಟ್ಟು ಏಂಟು ಜನರು ಪ್ರಯಾಣಿಸುತ್ತಿದ್ದರು ಎನ್ನಲಾಗಿದ್ದು, ವಿಮಾನ ಪತನದ ನಂತರ ಸ್ಫೋಟಗೊಂಡು ಪೈಲಟ್ ಸಹಿತ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಲಾಸ್ ಲಾಗೊಸ್ ಪ್ರಾಂತ್ಯದ ರಾಜ್ಯಪಾಲ ಹ್ಯಾರಿ ಜುರ್ಜೆನ್ಸನ್ ಹೇಳಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ