ವಾಷಿಂಗ್ಟನ್,
ಏರ್‌ಫೋರ್ಸ್ ಏಫ್ -16 ಯುದ್ಧ ವಿಮಾನ, ಕ್ಯಾಲಿಫೋರ್ನಿಯಾದ ಮೊರೆನೋ ವ್ಯಾಲಿಯ ಮಾರ್ಚ್ ಏರ್ ರಿಸರ್ವ್ ವಾಯುನೆಲೆಗೆ ಹಿಂದಿರುಗುತ್ತಿದ್ದಾಗ ವಾಣಿಜ್ಯ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ಸಂಜೆ 5.45ರ ಸುಮಾರಿಗೆ ವಾಯುನೆಲೆಯ ವ್ಯಾನ್ ಬುರೆನ್ ಬುಲೇವಾರ್ಡ್‌ನ ವಾಣಿಜ್ಯ ಕಟ್ಟಡದ ಒಂದು ಭಾಗಕ್ಕೆ ವಿಮಾನ ಡಿಕ್ಕಿ ಹೊಡೆದಿದೆ ಎಂದು ಮಾರ್ಚ್ ವಾಯು ಮೀಸಲು ನೆಲೆಯ ಉಪ ಅಗ್ನಿಶಾಮಕ ಮುಖ್ಯಸ್ಥ ತಿಮೋಥಿ ಹಾಲಿಡೇ ತಿಳಿಸಿದ್ದಾರೆ.
ವಿಮಾನದಲ್ಲಿ ಪೈಲಟ್ ಮಾತ್ರ ಇದ್ದರು. ಅವರು ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.ಆದರೆ, ಅಪಘಾತದ ವಿವರಗಳು ಲಭ್ಯವಾಗಿಲ್ಲ ಹಾಗೂ ಪೈಲಟ್ ಅವರ ಸ್ಥಿತಿಗತಿಯ ಬಗ್ಗೆಯೂ ಮಾಹಿತಿ ಲಭ್ಯವಾಗಿಲ್ಲ. ಇತರ ಯಾರಾದರೂ ಗಾಯಗೊಂಡಿದ್ದಾರೆಯೇ ಎಂಬುದರ ಬಗ್ಗೆಯೂ ತಿಳಿದುಬಂದಿಲ್ಲ ಎಂದು ಮೂಲಗಳು ತಿಳಿಸಿವೆ. ಎಫ್-16 ವಿಮಾನ, ಏರ್ ಫೋರ್ಸ್‌ನಡಿ ಫೆಡರಲ್ ಮಿಲಿಟರಿ ರಿಸರ್ವ್ ಫೋರ್ಸ್, ಏರ್ ನ್ಯಾಷನಲ್ ಗಾರ್ಡ್‌ಗಾಗಿ ವಿನ್ಯಾಸಗೊಳಿಸಲ್ಪಟ್ಟ ಯುದ್ಧ ವಿಮಾನವಾಗಿದೆ ಎಂದು ಮೂಲಗಳು ತಿಳಿಸಿವೆ.ಎಫ್-16 ಯುದ್ಧ ವಿಮಾನ ಕ್ಯಾಲಿಫೊರ್ನಿಯಾದಲ್ಲಿ ಕಟ್ಟಡಕ್ಕೆ ಡಿಕ್ಕಿ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
