ವಾಷಿಂಗ್ಟನ್ :
ವಿಶ್ವದ ದೊಡ್ಡಣ್ಣನೆಂದು ಕರೆಸಿಕೊಳ್ಳವ ಅಮೆರಿಕಕ್ಕೆ ಈಗ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿರುವುದು ಅಕ್ರಮ ವಲಸಿಗರು ಭಾರೀ ಸಂಖ್ಯೆಯಲ್ಲಿ ಒಳ ನುಸುಳುತ್ತಿರುವ ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕಲು ಅಮೇರಿಕ ಸರ್ಕಾರ ಈಗ ನೂತನ ಕಾರ್ಯಾಚರಣೆಯೊಂದನ್ನು ಕೈಗೆತ್ತಿಕೊಳ್ಳಲ್ಲು ಮುಂದಾಗಿದೆ ಈ ಕಾರ್ಯಾಚರಣೆಯೂ ಮುಂದಿನ ವಾರದಿಂದ ಆರಂಭವಾಗಲಿದ್ದು ಈ ಸಮಸ್ಯೆಯಿಂದ ಅಮೇರಿಕ ಹೊರ ಬರಲು ಸಹಕಾರಿಯಾಗಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಇದೇ ವೇಳೆ ಅವರು ಜಗತ್ತಿನಲ್ಲಿ ಮೂರನೇ ಸುರಕ್ಷಿತ ದೇಶವಾಗಿ ಅಮೆರಿಕದೊಂದಿಗಿನ ಒಪ್ಪಂದಕ್ಕೆ ಸಹಿಹಾಕಲು ಗ್ವಾಟೆಮಾಲಾ ಸಿದ್ಧವಾಗುತ್ತಿದೆ ಎಂದು ಟ್ರಂಪ್ ಹೇಳಿದರು.
ಗ್ವಾಟೆಮಾಲಾ ಮತ್ತು ಇತರ ಮಧ್ಯ ಅಮೆರಿಕನ್ ದೇಶಗಳಿಂದ ಜನರು ಭಾರೀ ಸಂಖ್ಯೆಯಲ್ಲಿ ಬಡತನ ಮತ್ತು ಗ್ಯಾಂಗ್ ಹಿಂಸೆಯನ್ನು ತಾಳಲಾರದೆ ಅಕ್ರಮವಾಗಿ ವಲಸೆ ಬರುತ್ತಿರುವುದು ಅಮೆರಿಕಕ್ಕೆ ನುಂಗಲಾರದ ತುತ್ತಾಗಿದೆ ಎಂದು ಹೇಳಿದ್ದಾರೆ.
ಅಕ್ರಮವಾಗಿ ಅಮೇರಿಕಕ್ಕೆ ಬಂದಿರುವ ವಲಸಿಗರನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ದೇಶದಿಂದ ಹೊರ ಹಾಕಲು ಮತ್ತು ಆ ಕಾರ್ಯಾಚರಣೆಯನ್ನು ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಇಲಾಖೆ ಮುಂದಿನ ವಾರದಿಂದ ಕೈಗೊಳ್ಳಲಿದೆ ಎಂದು ಟ್ರಂಪ್ ತಮ್ಮ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.