ನವದೆಹಲಿ:
ಉದ್ದೇಶಿತ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆ(ಸಿಪಿಇಸಿ)ಯಡಿ ಪಾಕ್ ಆಕ್ರಮಿಕ ಕಾಶ್ಮೀರ ಮೂಲಕ ಚೀನಾ-ಪಾಕಿಸ್ತಾನ ದೇಶಗಳ ನಡುವಣ ಉದ್ದೇಶಿತ ಬಸ್ ಸಂಚಾರ ಸೇವೆಗೆ ಆರಂಭಕ್ಕೆ ಭಾರತ ವಿರೋಧ ವ್ಯಕ್ತಪಡಿಸಿದೆ .
ಈ ಬಸ್ ಸಂಚಾರ ಆರಂಭದಿಂದ ರಾಷ್ಟ್ರೀಯ ಭದ್ರತೆ , ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಈ ಬಸ್ ಸೇವೆಯಿಂದ ಹಾಳು ಮಾಡುವ ಹುನ್ನಾರ ನಡೆದಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ