ವಿಶ್ವ ಸಂಸ್ಥೆ ಸಭೆಯಲ್ಲಿ ಪಾಕಿಸ್ತಾನಕ್ಕೆ ತೀವ್ರ ಮುಖಭಂಗ..!

ನ್ಯೂಯಾರ್ಕ್:

     ಅಂತಾರಾಷ್ಟ್ರೀಯವಾಗಿ ಭಾರತದ ಮಾನ ಹರಾಜು ಹಾಕಬೇಕು ಎಂದು ಹವಣಿಸುತ್ತಿರುವ ಪಾಕಿಸ್ತಾನಕ್ಕೆ ತನ್ನದೇ ಬಾಣ ತಿರುಗುಬಾಣವಾಗಿದ್ದು, ಇಬ್ಬರು ಭಾರತೀಯರನ್ನು ಉಗ್ರರೆಂದು ಗುರುತಿಸುವ ಅದರ ಸತತ ಪ್ರಯತ್ನ ವಿಫಲವಾಗಿದೆ. ಆ ಮೂಲಕ ಮತ್ತೊಮ್ಮೆ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ  ತೀವ್ರ ಮುಖಭಂಗವಾಗಿದೆ.

     ವಿಶ್ವಸಂಸ್ಥೆಯ 1267 ಸಮಿತಿಯಡಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಅಂತಾರಾಷ್ಟ್ರೀಯ ಭಯೋತ್ಪಾದಕರ ಪಟ್ಟಿಯಲ್ಲಿ ಇಬ್ಬರು ಭಾರತೀಯರ ಹೆಸರನ್ನು ಸೇರಿಸಲು ಪಾಕಿಸ್ತಾನ ಹವಣಿಸಿತ್ತು. ಭಾರತೀಯ ನಾಗರಿಕರಾದ ಗೋಬಿಂದ ಪಟ್ನಾಯಕ್ ಮತ್ತು ಅಂಗರ ಅಪ್ಪಾಜಿ ಅವರ ಹೆಸರನ್ನು  ಸೇರಿಸಲು ಪಾಕಿಸ್ತಾನದ ಸದಸ್ಯರು ಹರಸಾಹಸ ಪಟ್ಟಿದ್ದರು. ಆದರೆ ವಿಶ್ವಸಂಸ್ಥೆಯಲ್ಲಿ ಯುನೈಟೆಡ್ ಕಿಂಗ್‌ಡಮ್ (ಬ್ರಿಟನ್), ಅಮೆರಿಕ, ಫ್ರಾನ್ಸ್, ಜರ್ಮನಿ ಮತ್ತು ಬೆಲ್ಜಿಯಂ ಪಾಕಿಸ್ತಾನದ ಹಕ್ಕುಗಳನ್ನು ತಿರಸ್ಕರಿಸಿದವು ಮಾತ್ರವಲ್ಲದೇ ಈ ಭಾರತೀಯರನ್ನು ಭಯೋತ್ಪಾದಕರು ಎಂದು ಘೋಷಿಸಲು ಪಾಕಿಸ್ತಾನದ ಬಳಿ  ಯಾವುದೇ ಪುರಾವೆಗಳಿಲ್ಲ ಎಂದು ವಾದಿಸಿದವು. ಹೀಗಾಗಿ ಪಾಕಿಸ್ತಾನದ ವಾದಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಮನ್ನಣೆ ದೊರೆಯಲಿಲ್ಲಯ

ಗೋಬಿಂದ ಪಟ್ನಾಯಕ್ ಮತ್ತು ಅಂಗರ ಅಪ್ಪಾಜಿ ಅವರ ವಿರುದ್ಧ ಸಾಕ್ಷ್ಯಗಳನ್ನು ಮಂಡಿಸಲು ವಿಶ್ವಸಂಸ್ಥೆಯ ಸದಸ್ಯರು ಪಾಕಿಸ್ತಾನಕ್ಕೂ ಸಮಯ ನೀಡಿತ್ತು. ಆದರೆ ನಿಗದಿತ ಸಮಯದಲ್ಲಿ ಸಾಕ್ಷ್ಯಾಧಾರ ಒದಗಿಸುವಲ್ಲಿ ಪಾಕಿಸ್ತಾನ ವಿಫಲವಾಗಿದೆ. ಪಾಕಿಸ್ತಾನವು ಸಾಕ್ಷ್ಯಗಳನ್ನು ಸಂಗ್ರಹಿಸುವವರೆಗೆ ಈ ವಿಷಯವನ್ನು  ತಡೆಹಿಡಿಯಲಾಗಿದೆ, ಆದರೆ ಪಾಕಿಸ್ತಾನವು ಯಾವುದೇ ಪುರಾವೆಗಳನ್ನು ನೀಡಲು ಸಾಧ್ಯವಾಗಲಿಲ್ಲ.  

ಇದೇ ವೇಳೆ ಪಾಕಿಸ್ತಾನದ ವಿರುದ್ಧ ವಾಗ್ದಾಳಿ ಮಾಡಿದ ವಿಶ್ವಸಂಸ್ಥೆಯ ಭಾರತದ ರಾಯಭಾರಿ, “ಭಯೋತ್ಪಾದನೆಗೆ ಧಾರ್ಮಿಕ ಬಣ್ಣವನ್ನು ನೀಡುವ ಮೂಲಕ 1267 ವಿಶೇಷ ಪ್ರಕ್ರಿಯೆಯನ್ನು ರಾಜಕೀಯಗೊಳಿಸುವ ಪಾಕಿಸ್ತಾನದ ಅಸಹ್ಯಕರ ಪ್ರಯತ್ನವನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯು ವಿಫಲಗೊಳಿಸಿದೆ.  ಪಾಕಿಸ್ತಾನದ ಈ ಪ್ರಯತ್ನವನ್ನು ನಿಲ್ಲಿಸಿದ ಎಲ್ಲ ಕೌನ್ಸಿಲ್ ಸದಸ್ಯರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap