ಮನೀಲಾ:
ಮಾರಾಣಾಂತಿಕ ಸೋಂಕಾದ ಕೊರೋನಾ ಹರಡಂತೆ ತಡೆಯಲು ದೇಶದಲ್ಲಿ ವಿಧಿಸಲಾಗಿರುವ ಕ್ವಾರಂಟೈನ್ ಉಲ್ಲಂಘಿಸುವವರನ್ನು ಗುಂಡಿಕ್ಕಿ ಕೊಲ್ಲಿ ಎಂದು ಫಿಲಿಪೈನ್ಸ್ ಅಧ್ಯಕ್ಷ ರೊಡ್ರಿಗೊ ಡಟರ್ಟೆ ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ನಾನು ಎಂದಿಗೂ ಹಿಂಜರಿಯುವುದಿಲ್ಲ.ನನ್ನ ಆದೇಶಗಳು ಪೊಲೀಸ್ ಮತ್ತು ಮಿಲಿಟರಿಗೆ ತೊಂದರೆ ಅಥವಾ ಪರಿಸ್ಥಿತಿ ಎದುರಾದರೆ ಜನರು ತಕ್ಕ ಹೋರಾಟಕ್ಕಿಳಿಯುತ್ತಾರೆ. ನಿಮ್ಮ ಜೀವ ಸಹ ಸರತಿ ಸಾಲಿನಲ್ಲಿದೆ ಎನ್ನುವುದು ನಿಮಗೆ ಅರ್ಥವಾಗಿದೆಯೆ?” ದೂರದರ್ಶನದ ಭಾಷಣದಲ್ಲಿ ಅಧ್ಯಕ್ಷರು ನುಡಿದಿದ್ದಾಗಿ ಎಫೆ ನ್ಯೂಸ್ ಹೇಳಿದೆ.
ದೇಶದ ಬಹುಪಾಲು ಲಾಕ್ ಡೌನ್ ಮತ್ತು ಕಟ್ಟುನಿಟ್ಟಾದ ಸಂಪರ್ಕತಡೆ ನಿಯಮಗಳಿಂದಾಗಿ ರಾಜಧಾನಿಯ ನೆರೆಹೊರೆಯ ಊರುಗಳಲ್ಲಿ ವಾಸಿಸುವ ಲಕ್ಷಾಂತರ ಜನರಿಗೆ ಜೀವನೋಪಾಯವನ್ನು ಕಂಡುಕೊಳ್ಳುವುದಕ್ಕೆ ಅಡ್ಡಿಯಾಗಿದೆ.
ಈ ರೋಗವನ್ನು ಎದುರಿಸಲು ಡಟರ್ಟೆ ಅವರಿಗೆ ಕಳೆದ ವಾರ ಕಾಂಗ್ರೆಸ್ ನಿಂದ ವಿಶೇಷ ಕಾರ್ಯನಿರ್ವಾಹಕ ಅಧಿಕಾರ ನೀಡಿದೆ. . 16 ಪ್ರತಿಶತದಷ್ಟು ಜನಸಂಖ್ಯೆಯು ಬಡತನ ರೇಖೆಗಿಂತ ಕೆಳಗಿರುವ ಫಿಲಿಫೈನ್ಸ್ ನಲ್ಲಿ ನೆರವನ್ನು ನಿರ್ಬಂಧಿಸಲಾಗಿದೆ ಏಕೆಂದರೆ ಸರ್ಕಾರವು ಇನ್ನೂ ಫಲಾನುಭವಿಗಳ “ಏಕೀಕೃತ ಡೇಟಾಬೇಸ್” ಅನ್ನು ತಯಾರಿಸುತ್ತಿದೆ.”ವಿತರಣೆಯು ವಿಳಂಬವಾಗಿದ್ದರೂ ಸಹ ಇದು ಪೂರ್ಣಗೊಳ್ಳುವವರೆಗೆ ಕಾಯಲೇ ಬೇಕು. ನೆರವು ಖಚಿತವಾಗಿ ಸಿಗಲಿದೆ. ನೀವು ಎಂದಿಗೂ ವು ಹಸಿವಿನಿಂದ ಬಳಲುವುದಿಲ್ಲ. ನೀವು ಹಸಿವಿನಿಂದ ಸಾಯುವುದಿಲ್ಲ” ಎಂದು ಅಧ್ಯಕ್ಷರು ಹೇಳಿದ್ದಾರೆ.
ಮಾನವ ಹಕ್ಕುಗಳ ರಕ್ಷಕರು ಮತ್ತು ನಾಗರಿಕ ಗುಂಪುಗಳುಅಧ್ಯಕ್ಷ ಡಟರ್ಟೆ ಹೇಳಿಕೆಯನ್ನು ಖಂಡಿಸಿದೆ. , ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು #OustDuterte ಎಂಬ ಹ್ಯಾಶ್‌ಟ್ಯಾಗ್ ಬುಧವಾರ ರಾತ್ರಿಯಿಂದ ಟ್ರೆಂಡಿಂಗ್ ಆಗಿದೆ. “ಅಧ್ಯಕ್ಷರ ಮಾತುಗಳು ಮುಂದಿನ ದಿನಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ, ದಬ್ಬಾಳಿಕೆ ಮತ್ತುಹಿಂಸಾಚಾರದ ಕೆಟ್ಟ ಮತ್ತು ಹೆಚ್ಚು ಕ್ರೂರ ಸ್ವರೂಪಗಳಿಗೆ ಅನುವಾದವಾಗುತ್ತವೆ ಎಂದು ನಾವು ಆತಂಕಗೊಂಡಿದ್ದೇವೆ” ಎಂದು ಮಾನವ ಹಕ್ಕುಗಳ ಸಂಘಟನೆ ಹೇಳಿದೆ.ಫಿಲಿಪೈನ್ಸ್ ಇದುವರೆಗೆ 2,311 ದೃಢಪಡಿಸಲಾಗಿರುವ ಕೊರೋನಾ ಪ್ರಕರಣಗಳನ್ನು ಕಂಡಿದೆ. ದೇಶದಲ್ಲಿ 96 ಮಂದಿ ಮಹಾಮಾರಿಗೆ ಕಾರಣ ಸಾವನ್ನಪ್ಪಿದ್ದಾರೆ.