ವಾಷಿಂಗ್ಟನ್:

ವಿಶ್ವದ ಹಿರಿಯಣ್ಣ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತರಿಗೆ ವಿಧಿಸುವುದರಲ್ಲಿ ನಿಷ್ಣಾತರು ಅದನ್ನು ಸರಿಯಾಗಿ ವಸೂಲು ಮಾಡುವುದರಲ್ಲಿ ತಮಗೆ ತಾವೇ ಸಾಟಿಯಾದ ಅಪ್ರತಿಮ ಅಧ್ಯಕ್ಷ ಎಂಬ ಮಾತಿದೆ ಆದರೆ ಆ ಪಟ್ಟಕ್ಕೆ ಕಳಂಕ ಬರುವಂತೆ ಈಗ ಆರೋಪವೊಂದು ಕೇಳಿಬಂದಿದೆ ಟ್ರಂಪ್ ತಮ್ಮ ಪೋಷಕರ ಸಾವಿರಾರು ಕೋಟಿ ರೂ.ತೆರಿಗೆ ವಂಚನೆಗೆ ನೆರವು ನೀಡಿದ್ದರು ಎಂಬ ಸುದ್ಧಿ ಹರಿದಾಡುತ್ತಿದೆ .
ಈಬಗ್ಗೆ ಟ್ರಂಪ್ ಅವರನ್ನು ಕೇಳಿದರೆ ಅಂತಹ ಯಾವ ವಂಚನೆಯು ನಡೆದಿಲ್ಲ ಮತ್ತು ತನ್ನ ವ್ಯಾಪಾರ ಸಂಭಂದ ನನ್ನ ತಂದೆಯಿಂದ ಆರ್ಥಿಕ ನೆರವನ್ನು ಪಡೆದಿದ್ದಾಗಿ ಹೇಳಿ ಜಾರಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂಬ ವದಂತಿ ಇದೆ. 1990ರಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಸಂಶಾಯಾಸ್ಪದ ತೆರಿಗೆ ಅಕ್ರಮಗಳಿಗೆ ಸಂಬಂಧಿಸಿದಂತೆ ಅಂದಿನ ಅಮೆರಿಕದ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಫ್ರೆಡ್ ಟ್ರಂಪ್ ಅವರ ಸಾವಿರಾರು ಕೋಟಿ ತೆರಿಗೆ ವಂಚನೆ ಪ್ರಕರಣದಲ್ಲಿ ಡೊನಾಲ್ಡ್ ಟ್ರಂಪ್ ನೆರವು ನೀಡಿದ್ದರು ಎಂದು ಅಮೆರಿಕದ ಖ್ಯಾತ ಸುದ್ದಿ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ವರದಿ ಪ್ರಕಟಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ







